ಮರಾಠ ಪ್ರಾಧಿಕಾರ ರಚನೆ: ಇದರ ಹಿಂದೆ ಪ್ರಧಾನಿ ಮೋದಿ ಇದ್ದಾರೆ -ವಾಟಾಳ್ ಕಿಡಿ

ಮರಾಠ ಪ್ರಾಧಿಕಾರ ರಚನೆ: ಇದರ ಹಿಂದೆ ಪ್ರಧಾನಿ ಮೋದಿ ಇದ್ದಾರೆ -ವಾಟಾಳ್ ಕಿಡಿ

ರಾಜ್ಯದಲ್ಲಿ ಮರಾಠ ಪ್ರಾಧಿಕಾರ ಸ್ಥಾಪನೆಗೆ ಕನ್ನಡಪರ ಸಂಘಟನೆಗಳಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದು, ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಸೇರಿದಂತೆ ಹಲವು ಕನ್ನಡ ಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಾಟಾಳ್ ನಾಗರಾಜ್​ ಮರಾಠಿ ಪ್ರಾಧಿಕಾರ ರಚನೆಯಿಂದ ಕನ್ನಡಿಗರಿಗೆ ಅನ್ಯಾಯ ಮಾಡಲಾಗಿದೆ. ಹೀಗಾಗಿ ಈ ಕೂಡಲೇ ಯಡಿಯೂರಪ್ಪ ರಾಜೀನಾಮೆ ನೀಡಬೇಕೆಂದು ಆಗ್ರಹ ಮಾಡಿದ್ದಾರೆ. ಜೊತೆಗೆ ಮರಾಠಿ ಪ್ರಾಧಿಕಾರ ರಚನೆಯ ಹಿಂದೆ ಭಾರಿ ಪಿತೂರಿ ಮಾಡಲಾಗಿದೆ. ಇದರ ಹಿಂದೆ ಪ್ರಧಾನಿ ಮೋದಿಯವರು ಸಹ ಇದ್ದಾರೆ ಎಂದಿದ್ದಾರೆ. […]

pruthvi Shankar

| Edited By: sadhu srinath

Nov 17, 2020 | 10:12 AM

ರಾಜ್ಯದಲ್ಲಿ ಮರಾಠ ಪ್ರಾಧಿಕಾರ ಸ್ಥಾಪನೆಗೆ ಕನ್ನಡಪರ ಸಂಘಟನೆಗಳಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದು, ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಸೇರಿದಂತೆ ಹಲವು ಕನ್ನಡ ಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಾಟಾಳ್ ನಾಗರಾಜ್​ ಮರಾಠಿ ಪ್ರಾಧಿಕಾರ ರಚನೆಯಿಂದ ಕನ್ನಡಿಗರಿಗೆ ಅನ್ಯಾಯ ಮಾಡಲಾಗಿದೆ. ಹೀಗಾಗಿ ಈ ಕೂಡಲೇ ಯಡಿಯೂರಪ್ಪ ರಾಜೀನಾಮೆ ನೀಡಬೇಕೆಂದು ಆಗ್ರಹ ಮಾಡಿದ್ದಾರೆ. ಜೊತೆಗೆ ಮರಾಠಿ ಪ್ರಾಧಿಕಾರ ರಚನೆಯ ಹಿಂದೆ ಭಾರಿ ಪಿತೂರಿ ಮಾಡಲಾಗಿದೆ. ಇದರ ಹಿಂದೆ ಪ್ರಧಾನಿ ಮೋದಿಯವರು ಸಹ ಇದ್ದಾರೆ ಎಂದಿದ್ದಾರೆ.

ರಾಜ್ಯದಲ್ಲಿ ಇಂತಹ ಪರಿಸ್ಥಿತಿ ಎಂದು ಬಂದಿರಲಿಲ್ಲ. ಇವತ್ತು ಮರಾಠಿ, ನಾಳೆ ತಮಿಳು, ನಾಡಿದ್ದು ತೆಲುಗು ಆಮೇಲೆ ಮಳೆಯಾಳಂ ಪ್ರಾಧಿಕಾರ ರಚನೆ ಮಾಡ್ತಾರೆ ಹೀಗಾಗಿ ಇದನ್ನು ಯಾವುದೇ ಕಾರಣಕ್ಕೂ ಬಿಡುವುದಕ್ಕೆ ಆಗುವುದಿಲ್ಲ. ಈ ವಿಚಾರವಾಗಿ ಇಡೀ ಸಮಗ್ರ ಕರ್ನಾಟಕದ ಕನ್ನಡಿಗರು ಬೀದಿಗೆ ಬರಲೇಬೇಕು. ನಾನಂತು ಜೈಲಿಗೆ ಹೋಗಲು ಸಿದ್ದ, ಹೋರಾಟವನ್ನು ತೀವ್ರ ಅನಿವಾರ್ಯವಾಗಿ ಮಾಡಲೇಬೇಕು. ಅದಕ್ಕಾಗಿ ವಿಧಾನಸೌಧ ಮುಂದೆ ನಿಂತು ಯಡಿಯೂರಪ್ಪ ರಾಜೀನಾಮೆ ಕೊಡಬೇಕು ಎಂದು ಆಗ್ರಹ ಮಾಡಿದ್ದಾರೆ.

ಸಾ.ರಾ.ಗೋವಿಂದ್ ಆಕ್ರೋಶ.. ವಾಟಾಳ್​ ನಾಗರಾಜ್​ಗೆ ಧ್ವನಿಗೂಡಿಸಿರುವ ಸಾ.ರಾ.ಗೋವಿಂದ್ ಮರಾಠಾ ಅಭಿವೃದ್ಧಿ ಪ್ರಾಧಿಕಾರ ರಚಿಸಿರುವುದಕ್ಕೆ ಆಕ್ರೋಶ ಹೊರಹಾಕಿದ್ದಾರೆ. ಅಲ್ಲದೆ ಕೂಡಲೇ ಮರಾಠಾ ಅಭಿವೃದ್ಧಿ ಪ್ರಾಧಿಕಾರವನ್ನು ರದ್ದು ಮಾಡುವಂತೆ ಒತ್ತಾಯ ಮಾಡಿದ್ದಾರೆ. ರದ್ದು ಮಾಡದಿದ್ದರೆ ಸರ್ಕಾರದ ನಡೆ ಖಂಡಿಸಿ ಬೀದಿಗಿಳಿಯಲು ಸಂಘಟನೆಗಳು ಸಿದ್ದವಾಗಿವೆ ಎಂದು ಟಿವಿ9ಗೆ ಕನ್ನಡಪರ ಹೋರಾಟಗಾರ ಸಾ.ರಾ.ಗೋವಿಂದ್ ಮಾಹಿತಿ ನೀಡಿದ್ದಾರೆ.

Follow us on

Related Stories

Most Read Stories

Click on your DTH Provider to Add TV9 Kannada