ಶಾಲಾ ಮಕ್ಕಳನ್ನು ನೈತಿಕವಾಗಿ ತಯಾರಿ ಮಾಡುವ ಚಿಂತನೆ; ಹಾಗಾಗಿ ಪಠ್ಯದಲ್ಲಿ ಭಗವದ್ಗೀತೆ ಸೇರಿಸಲಾಗುತ್ತದೆ: ಸಚಿವ ನಾಗೇಶ್
Bhagavad gita: ಪಠ್ಯದಲ್ಲಿ ಭಗವದ್ಗೀತೆ ಸೇರಿಸಲಾಗುತ್ತದೆ. ನೈತಿಕ ಶಿಕ್ಷಣ ನೀಡಬೇಕೆಂಬುವ ಚಿಂತನೆಯಿದೆ. ಹಿಂದೆ ನೈತಿಕ ಶಿಕ್ಷಣದ ಕ್ಲಾಸ್ ಇತ್ತು. ಒಳ್ಳೊಳ್ಳೆ ಕಥೆ, ಮಹಾಭಾರತ, ರಾಮಾಯಣ, ಸತ್ಯ ಹರಿಶ್ಚಂದ್ರ, ಗಾಂಧೀಜಿ ಕಥೆ ಹೇಳಲಾಗುತ್ತಿತ್ತು. ನೈತಿಕವಾಗಿ ಮಕ್ಕಳನ್ನು ತಯಾರಿ ಮಾಡೋದು ನಡೆಯುತ್ತಿತ್ತು - ಶಿಕ್ಷಣ ಸಚಿವ ಬಿ ಸಿ ನಾಗೇಶ್
ವಿಜಯಪುರ: ನಿಡಗುಂದಿ ತಾಲೂಕಿನ ಆಲಮಟ್ಟಿಯ ಕೆಬಿಜೆಎನ್ಎಲ್ ಪ್ರವಾಸಿ ಮಂದಿರದಲ್ಲಿ ಶಾಲಾ ಪಠ್ಯಕ್ರಮದಲ್ಲಿ ಭಗವದ್ಗೀತೆ ಬೋಧಿಸುವ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಶಿಕ್ಷಣ ಸಚಿವ ಬಿ ಸಿ ನಾಗೇಶ್ (Education Minister BC Nagesh) ಅವರು ಪಠ್ಯದಲ್ಲಿ ಭಗವದ್ಗೀತೆ (Bhagavad gita) ಸೇರಿಸಲಾಗುತ್ತದೆ. ನೈತಿಕ ಶಿಕ್ಷಣ ನೀಡಬೇಕೆಂಬುವ ಚಿಂತನೆಯಿದೆ. ಹಿಂದೆ ನೈತಿಕ ಶಿಕ್ಷಣದ ಕ್ಲಾಸ್ ಇತ್ತು (Schools). ಒಳ್ಳೊಳ್ಳೆ ಕಥೆ, ಮಹಾಭಾರತ, ರಾಮಾಯಣ, ಸತ್ಯ ಹರಿಶ್ಚಂದ್ರ, ಗಾಂಧೀಜಿ ಕಥೆ ಹೇಳಲಾಗುತ್ತಿತ್ತು. ನೈತಿಕವಾಗಿ ಮಕ್ಕಳನ್ನು ತಯಾರಿ ಮಾಡೋದು ನಡೆಯುತ್ತಿತ್ತು. ಇತ್ತೀಚಿನ ದಿನಗಳಲ್ಲಿ ಶಾಲೆಯಲ್ಲಿ ಅದು ಬಿಟ್ಟು ಹೋಗಿದೆ. ನೈತಿಕ ಶಿಕ್ಷಣದಲ್ಲಿ ಭಗವದ್ಗೀತೆ ತರಬೇಕು ಅಂತಾ ಜನ ನಿಶ್ಚಯ ಮಾಡಿದ್ದಾರೆ. ನಾವು ಇವತ್ತು ಎಲ್ಲರೂ ಒದ್ದಾಡ್ತಿರೋದು ದ್ವಂದ್ವಗಳಲ್ಲಿ. ಮನಸ್ಸು ಸರಿಯಿಲ್ಲದೆ, ಸೂಸೈಡ್ ಗಳು ಆಗುತ್ತಿರೋ ದ್ವಂದ್ವದಲ್ಲಿದ್ದೇವೆ. ಮನುಷ್ಯನಿಗೆ ಕ್ಲಾರಿಟಿ ಕೊಟ್ಟು ಬದುಕಿಗೆ ಅರ್ಥಕೊಡಲಿಕ್ಕೆ ಭಗವದ್ಗೀತೆ ಯಾಕೆ ಆಗಬಾರದು? ಶಾಲೆಯಲ್ಲಿ ಹೇಗೆ ಭಗವದ್ಗೀತೆ ತರಬೇಕು ಅನ್ನೋದು ಇನ್ನೂ ನಿಶ್ಚಯ ಮಾಡಿಲ್ಲ. ನೈತಿಕ ಶಿಕ್ಷಣದಲ್ಲಿ ಏನೇನು ಇರಬೇಕು ಅಂತ ತಜ್ಞರು ನಿಶ್ಚಯ ಮಾಡುತ್ತಾರೆ. ಈ ದೇಶದ ಸ್ವಾತಂತ್ರ್ಯ ಹೋರಾಟಗಾರರಿಗೆ ಶಕ್ತಿ ನೀಡಿದ್ದೇ ಭಗವದ್ಗೀತೆ ಎಂದಿದ್ದಾರೆ. ಭಗವದ್ಗೀತೆ ನನಗೆ ಶಕ್ತಿ ತುಂಬಿದೆ ಅಂತಾ ಅಬ್ದುಲ್ ಕಲಾಂ ಅವರು ಹೇಳಿದ್ದರು. ಗಾಂಧೀಜಿಯಂತೂ 40 ಪುಟದ ಸಾಮಾನ್ಯ ಭಗವದ್ಗೀತೆ ಓದಿ ಬದುಕು ರೂಪಿಸಿಕೊಂಡಿದ್ದರು. ಈ ಜನರೆಲ್ಲಾ ಭಗವದ್ಗೀತೆ ಬಗ್ಗೆ ಹೇಳಿರುವಾಗ ನೈತಿಕ ಶಿಕ್ಷಣದಲ್ಲಿ ಭಗವದ್ಗೀತೆ ಬರುತ್ತದೆ. ಪಠ್ಯದಲ್ಲಿ ಭಗವದ್ಗೀತೆ ಒಂದೇ ಇರಲ್ಲ. ಭಗವದ್ಗೀತೆ ತರಹ ಇತರೆ ನೈತಿಕತೆ ವಿಚಾರ ಹೆಚ್ಚು ಇರುತ್ತದೆ. ಹೇಗೆ, ಏನು? ಅಂತಾ ನಾವು ಇನ್ನೂ ನಿಶ್ಚಯ ಮಾಡಿಲ್ಲ. ಭಗವದ್ಗೀತೆ ಧಾರ್ಮಿಕ ವಿಚಾರವೇ ಅಲ್ಲ. ಅಲ್ಲಿ ಯಾವುದೇ ದೇವರು ಪೂಜೆ ಬಗ್ಗೆ ಹೇಳಲ್ಲ. ಭಗವದ್ಗೀತೆ ಸಾರವು ಎಲ್ಲರ ಮನೆಗಳಲ್ಲಿಯೂ ಹಾಕುವಂತಿದೆ. ಅನೇಕ ಮುಸ್ಲಿಮ ಸ್ನೇಹಿತರ ಮನೆಯಲ್ಲೂ ಹಾಕಿಕೊಂಡಿದ್ದಾರೆ. ಭಗವದ್ಗೀತೆ ಜೀವನಕ್ಕೆ ಬೇಕಾದ ಆದರ್ಶವಾಗಿದೆ ಎಂದು ವಿವರವಾಗಿ ಹೇಳಿದ್ದಾರೆ (Vijayapura).
ಟಿಪ್ಪುವಿನ ಎರಡೂ ಪಾರ್ಟು ಪಠ್ಯ ಮಾಡಿ ಹಾಕಿ: ಟಿಪ್ಪುವನ್ನು ಪಠ್ಯದಿಂದ ತೆಗೆಯಿರಿ ಅಂತಾ ಅಪ್ಪಚ್ಚು ರಂಜನ್ ಹೇಳಿದ್ದಾರೆ. ಇಲ್ಲವಾದಲ್ಲಿ… ಪಠ್ಯದಲ್ಲಿ ಇಡುವುದಾದರೆ ಟಿಪ್ಪುವಿನ ಎರಡು ಪಾರ್ಟು ಹಾಕಿ. ಹಿಂದೂಗಳ ಮೇಲೆ ಟಿಪ್ಪು ಮಾಡಿರೋ ದೌರ್ಜನ್ಯ ಬಗ್ಗೆ ಹಾಕಿ; ಕನ್ನಡ ಭಾಷೆ ತೆಗೆದು ಪರ್ಶಿಯನ್ ಭಾಷೆ ತಂದಿದ್ದು. ಕತ್ತಿ ಮೇಲೆ ಟಿಪ್ಪು ಬರೆದುಕೊಂಡಿದ್ದನ್ನು ಹಾಕಿ. ಅದೂ ಮಕ್ಕಳಿಗೆ ಗೊತ್ತಾಗಲಿ. ಒಂದೇ ಸೈಡ್ ನಲ್ಲಿ ಹಾಕಬೇಡಿ ಅಂದಿದ್ದಾರೆ. ಮುಂದಿನ ಪಠ್ಯ ಪರಿಷ್ಕರಣೆಯಲ್ಲಿ ಅದನ್ನು ತರುತ್ತೇವೆ ಎಂದು ಶಿಕ್ಷಣ ಸಚಿವ ಬಿ ಸಿ ನಾಗೇಶ್ ಹೇಳಿದರು.
ಕಾಂಗ್ರೆಸ್ ಪಕ್ಷ ಅನುಭವ ಕೊರತೆಯ ಜನಾ ಆಗಿಬಿಟ್ಟಿದ್ದಾರೆ -ಸಚಿವ ನಾಗೇಶ್: ಇನ್ನು ಪಠ್ಯಕ್ರಮದಲ್ಲಿ ಟಿಪ್ಪು ಪಠ್ಯವನ್ನು ಬದಲಾವಣೆ ಮಾಡುವ ವಿಚಾರ ಪ್ರಸ್ತಾಪಿಸಿದಾಗ ಕಾಂಗ್ರೆಸ್ ಪಕ್ಷ ಅನುಭವ ಕೊರತೆಯ ಜನಾ ಆಗಿಬಿಟ್ಟಿದ್ದಾರೆ. ಸದಾ ಆಡಳಿತ ಪಕ್ಷದಲ್ಲಿದ್ದು ವಿರೋಧ ಪಕ್ಷದ ಕಾರ್ಯ ಏನು ಮಾಡಬೇಕು ಅಂತ ಗೊತ್ತಿಲ್ಲ ಅವರಿಗೆ. ಯಾವುದೇ ವಿಷಯ ಆಚೆ ಬರೋದಕ್ಕೆ ಮುಂಚೆ ಕಾಂಗ್ರೆಸ್ ನವರು ಮಾತನಾಡುತ್ತಾರೆ. ಬೇಕಾದಂತೆ ಮಾತನಾಡುತ್ತಾರೆ. ಕಾಂಗ್ರೆಸ್ ನವರಿಗೆ ಎಲ್ಲವೂ ವೋಟ್ ಬ್ಯಾಂಕ್ ಪಾಲಿಟಿಕ್ಸ್ ಮಾಡೋದೇ ಕಾಣುತ್ತದೆ. ಪಠ್ಯಪುಸ್ತಕ ಬಂದ ಮೇಲೆ ತಪ್ಪಿದ್ದರೆ ಖಂಡಿತಾ ಹೇಳಲಿ. ಇದೇ ವಿರೋಧ ಪಕ್ಷದ ಕೆಲಸ ಕೂಡಾ. ತಪ್ಪಿದ್ದರೆ ತಿದ್ದಿಕೊಳ್ಳುವ ಕೆಲಸ ಮಾಡುತ್ತೇವೆ. ಹಿಂದೆ ಕೆಲ ವಿಷಯಗಳ ಪರಿಷ್ಕರಣೆಯನ್ನು ಬರಗೂರು ರಾಮಚಂದ್ರಪ್ಪನವರು ಬದಲಾವಣೆ ಮಾಡಿದ್ದರು. ಸರಿಯಾದ ಬದಲಾವಣೆಯನ್ನು ನಾವು ಒಪ್ಪಿಕೊಂಡಿದ್ದೇವೆ; ವಿರೋಧಿಸಿಲ್ಲ. ಬರಗೂರು ರಾಮಚಂದ್ರಪ್ಪ ಮಾಡಿದ್ದು, ಕಾಂಗ್ರೆಸ್ ನವರು ಮಾಡಿದ್ದು ಅಂತ ನಾವು ರಾಜಕೀಯವಾಗಿ ಹೋಗಲಿಲ್ಲ. ಅಲ್ಲಿರುವಂತಹ ತಪ್ಪುಗಳನ್ನು ಪರಿಷ್ಕರಣೆ ಮಾಡೋಕೆ ಮತ್ತೊಂದು ಪರಿಷ್ಕರಣೆ ಸಮಿತಿ ಮಾಡಿದ್ದೇವೆ ಎಂದು ಶಿಕ್ಷಣ ಸಚಿವ ಬಿ ಸಿ ನಾಗೇಶ್ ಹೇಳಿದರು.
ಟಿಪ್ಪು ವಿಷಯ ಪಠ್ಯದಿಂದ ತೆಗೆಯೋ ವಿಚಾರದಲ್ಲಿ ಮತ್ತಷ್ಟು ವಿವರಣೆ ನೀಡಿದ ಸಚಿವ ನಾಗೇಶ್ ಅವರು ಟಿಪ್ಪು ಬಗ್ಗೆ ತಜ್ಞರು ಹೇಳೋದು ಏನೆಂದರೆ ಟಿಪ್ಪುವಿನ ಬಗ್ಗೆ ಪ್ರಸ್ತುತ ಪಠ್ಯದಲ್ಲಿ ಕೊಟ್ಟಿರೋ ರೀತಿ ಸರಿಯಿಲ್ಲ. ಟಿಪ್ಪುವಿನ ಒಂದು ಮುಖವನ್ನು ತೋರಿಸಿದ್ದೀರಾ. ಈ ಬಾರಿ ಪಠ್ಯಕ್ರಮದಲ್ಲಿ ಏನು ಬದಲಾವಣೆ ಆಗಿಲ್ಲ. ಸ್ವಲ್ಪ ಮಾಡಿಫೈ ಮಾಡಿ ಕಡಿಮೆ ಮಾಡಲಾಗಿದೆ. ಟಿಪ್ಪುವನ್ನು ತೆಗೆದು ಹಾಕಿಲ್ಲ, ಏನೂ ಮಾಡಿಲ್ಲ ಎಂದು ವಿವರಿಸಿದರು.
ಹಿಜಾಬ್ ಯಾವಾಗ ಫೇಲ್ಯೂರ್ ಆಯ್ತೋ ಆಗ ಕಾಂಗ್ರೆಸ್ ನವರು ಈ ರೀತಿ ಏನೋ ಒಂದು ತರುತ್ತಾರೆ. ಬಿಜೆಪಿ ಮೇಲೆ ಆರೋಪ ಮಾಡೋದಕ್ಕಿಂತ ವೋಟ್ ಬ್ಯಾಂಕ್ ಗಟ್ಟಿ ಮಾಡಿಕೊಳ್ಳುವ ಪ್ರಯತ್ನ ಮಾಡುತ್ತಾರೆ. ಚಂದ್ರು ಕೊಲೆಯನ್ನೂ ರಾಜಕೀಕರಣ ಮಾಡೋದಕ್ಕೆ ನೋಡಿದರು ಎಂದು ಕಾಂಗ್ರೆಸ್ ನಡೆಗೆ ಶಿಕ್ಷಣ ಸಚಿವ ನಾಗೇಶ್ ಅಸಮಾಧಾನ ವ್ಯಕ್ತಪಡಿಸಿದರು. ಕೊಲೆ ಕೊಲೆನೇ. ಅದನ್ನೂ ರಾಜಕಾರಣ ಮಾಡಿದರು. ಜಮೀರ್ ಹಿರೋ ತರಹ ಮಾತನಾಡಿದರು. ಉತ್ತರ ಪ್ರದೇಶ ಚುನಾವಣೆ ಬಳಿಕ ಕಾಂಗ್ರೆಸ್ ಗೆ ಮುಸ್ಲಿಂ ವೋಟ್ ಬ್ಯಾಂಕ್ ಬಿಜೆಪಿ ಕಡೆಗೆ ಹೋಗಿ ಬಿಟ್ಟೀತು ಅನ್ನೋ ಆತಂಕವಿದೆ. ಯುಪಿಯಲ್ಲಿ ಮುಸ್ಲಿಂ ವೋಟ್ ಬ್ಯಾಂಕ್ ಇರುವಲ್ಲಿ ಬಿಜೆಪಿ ಗೆದ್ದಿದೆ ಎಂದು ಅವರು ಹೇಳಿದರು.
ಇದೂ ಓದಿ: ಸುಸೂತ್ರವಾಗಿ ಮುಗಿಯಿತು ಎಸ್ಎಸ್ಎಲ್ಸಿ ಪರೀಕ್ಷೆ; ಏಪ್ರಿಲ್ ಕೊನೆಯ ವಾರದಲ್ಲಿ ಮೌಲ್ಯಮಾಪನ, ಫಲಿತಾಂಶ ಯಾವಾಗ?
Published On - 9:36 pm, Mon, 11 April 22