ದಿನಕ್ಕೆ ಸಾವಿರಾರು ರೂ ಖರ್ಚು ಮಾಡಿ ಲಿಂಬೆ ಬೆಳೆಗೆ ನೀರು ಹಾಕುವ ಪರಿಸ್ಥಿತಿ; ರೈತರ ಸಂಕಷ್ಟಕ್ಕೆ ಸ್ಪಂದಿಸದ ಲಿಂಬೆ ಅಭಿವೃದ್ಧಿ ಮಂಡಳಿ, ತೋಟಗಾರಿಕಾ ಇಲಾಖೆ ವಿರುದ್ಧ ಆಕ್ರೋಶ

ದಿನಕ್ಕೆ ಸಾವಿರಾರು ರೂ ಖರ್ಚು ಮಾಡಿ ಲಿಂಬೆ ಬೆಳೆಗೆ ನೀರು ಹಾಕುವ ಪರಿಸ್ಥಿತಿ; ರೈತರ ಸಂಕಷ್ಟಕ್ಕೆ ಸ್ಪಂದಿಸದ ಲಿಂಬೆ ಅಭಿವೃದ್ಧಿ ಮಂಡಳಿ, ತೋಟಗಾರಿಕಾ ಇಲಾಖೆ ವಿರುದ್ಧ ಆಕ್ರೋಶ
ದಿನಕ್ಕೆ ಸಾವಿರಾರು ರೂ ಖರ್ಚು ಮಾಡಿ ಲಿಂಬೆ ಬೆಳೆಗೆ ನೀರು ಹಾಕುವ ಪರಿಸ್ಥಿತಿ

ಒಂದು ಟ್ಯಾಂಕರ್ ನೀರಿಗೆ 1000 ರಿಂದ 1500 ಖರ್ಚಾಗುತ್ತಿದೆ. ಸಾಲ ಸೋಲ ಮಾಡಿಯದಾರೂ ಟ್ಯಾಂಕರ್ ನೀರು ಹಾಕಿ ನಮ್ಮ ಬೆಳೆಗಳನ್ನು ಉಳಿಸಿಕೊಳ್ಳುವುದು ನಮಗೆ ಮುಖ್ಯವಾಗಿದೆ. ಒಂದು ಟ್ಯಾಂಕರ್ ನೀರು ಕೇವಲ ನಾಲ್ಕು ಲಿಂಬೆ ಗಿಡಕ್ಕೆ ಆಗುತ್ತವೆ.

TV9kannada Web Team

| Edited By: Ayesha Banu

May 11, 2022 | 11:13 PM

ವಿಜಯಪುರ: ರೈತರೇ ದೇಶದ ಬೆನ್ನೆಲುಬು ಎಂಬ ಮಾತು ಇದೀಗಾ ಬದಲಾಗಬೇಕಿದೆ. ಕಾರಣ ರೈತರ ಬೆನ್ನೆಲುಬೇ ಮುರಿದು ಹೋಗಿದೆ ಎಂದರೆ ಖಂಡಿತ ತಪ್ಪಾಗಲಿಕ್ಕಿಲ್ಲಾ. ಕಾರಣ ಇಲ್ಲಿ ರೈತರು ಪಡುತ್ತಿರೋ ಕಷ್ಟವನ್ನ ನೋಡಿದರೆ ಆಶ್ಚರ್ಯ ಪಡೋದಂತೋ ಗ್ಯಾರಂಟಿ. ತಮ್ಮ ಬೆಳೆಗಳನ್ನು ಉಳಿಸಿಕೊಳ್ಳಲು ಹೀಗೆಲ್ಲಾ ಮಾಡುತ್ತಿದ್ದೀರಾ ಎಂದು ಬೆಕ್ಕಸ ಬೆರೆಗಾಗೋದಂತೂ ಪಕ್ಕ. ಇಲ್ಲಿನ ರೈತರು ತಮ್ಮ ಬೆಳೆಯನ್ನು ಉಳಿಸಲು ಹರಸಾಹಸ ಪಡುತ್ತಿದ್ದಾರೆ.

ತೋಟಗಾರಿಕಾ ಬೆಳೆಗಳಿಗೆ ಪ್ರಸಿದ್ಧಿಯಾದ ವಿಜಯಪುರ ಜಿಲ್ಲೆಯಲ್ಲಿ ದ್ರಾಕ್ಷಿ, ದಾಳಿಂಬೆ, ಲಿಂಬೆ ಪ್ರಮುಖ ಬೆಳೆಗಳು. ಬಿರು ಬೇಸಿಗೆಯಲ್ಲಿ ಲಿಂಬೆ ಬೆಳೆ ಉಳಿಸೋಕೆ ರೈತರು ಟ್ಯಾಂಕರ್ ನೀರಿನ ಮೊರೆ ಹೋಗಿದ್ದಾರೆ. ಒಂದು ಟ್ಯಾಂಕರ್ಗೆ 1000 ರಿಂದ 1500 ಖರ್ಚು ಮಾಡುತ್ತಿದ್ದಾರೆ, ವಿಜಯಪುರ ಜಿಲ್ಲೆಯನ್ನು ದ್ರಾಕ್ಷಿ, ಲಿಂಬೆ ತವರೂರು ಎಂದು ಕರೆಯಲಾಗುತ್ತದೆ. ಆದರೆ ಇದೀಗಾ ಜಿಲ್ಲೆಯ ರೈತರು ಲಿಂಬೆ ಬೆಳೆಯನ್ನು ಉಳಿಸೋಕೆ ತೀವ್ರ ಸರ್ಕಸ್ ಮಾಡಬೇಕಾಗಿದೆ. ಜಿಲ್ಲೆಯಲ್ಲಿ ಒಟ್ಟು 30,000 ಕ್ಕೂ ಆಧಿಕ ಎಕರೆ ಪ್ರದೇಶದಲ್ಲಿ ಲಿಂಬೆ ಬೆಳೆಯಲಾಗುತ್ತದೆ. ಇಷ್ಟು ಪ್ರಮಾಣದ ಲಿಂಬೆ ಬೆಳೆಯಲ್ಲಿ ಶೇಕಡಾ 60 ರಷ್ಟು ಇಂಡಿ ತಾಲೂಕಿನ ಭಾಗದಲ್ಲೇ ಬೆಳೆಯಲಾಗುತ್ತದೆ. ಆದರೆ ಈ ಬಾರಿ ಮತ್ತೇ ಲಿಂಬೆ ಬೆಳೆಗಾರರಿಗೆ ಕಷ್ಟ ಬಂದುರಾಗಿದೆ. ಬಿರು ಬೇಸಿಗೆ ಕಾರಣ ಕೆರೆ, ಬಾವಿ ಹಾಗೂ ಕೊಳವೆ ಬಾವಿಗಳು ಬತ್ತಿ ಹೋಗಿವೆ. ಲಿಂಬೆ ಬೆಳೆ ಒಣಗುತ್ತಿವೆ. ಕಾರಣ ಹತ್ತಾರು ವರ್ಷಗಳಿಂದ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೆಳೆದಿದ್ದ ಲಿಂಬೆ ಬೆಳೆಯನ್ನು ಉಳಿಸಿಕೊಳ್ಳಲು ಟ್ಯಾಂಕರ್ ಮೂಲಕ ನೀರನ್ನು ತಂದು ಹಾಕುತ್ತಿದ್ದಾರೆ. ಇದೇ ರೀತಿ ನೀರಿನ ಕೊರತೆಯಿಂದ ನಾಲ್ಕಾರು ಬಾರಿ ಲಿಂಬೆ ತೋಟವನ್ನು ಕಡಿದು ಹಾಕಿ ಕೊನೆಯಲ್ಲಿ ಉಳಿದ ಅಲ್ಪಸ್ವಲ್ಪ ಲಿಂಬೆಯನ್ನಾದರೂ ಉಳಿಸಿಕೊಳ್ಳಲು ಹೋರಾಟ ಮಾಡುತ್ತಿದ್ದೇವೆ ಎಂದು ಲಿಂಬೆ ಬೆಳೆಗಾರರು ಹೇಳಿದ್ದಾರೆ.

vijayapura farmers issue 1

ದಿನಕ್ಕೆ ಸಾವಿರಾರು ರೂ ಖರ್ಚು ಮಾಡಿ ಲಿಂಬೆ ಬೆಳೆಗೆ ನೀರು ಹಾಕುವ ಪರಿಸ್ಥಿತಿ

ಇದು ರೈತ ಶರಣಪ್ಪ ಅವರ ಸಮಸ್ಯೆಯೊಂದೇ ಅಲ್ಲಾ. ಇಂಡಿ ತಾಲೂಕಿನ ಅಥರ್ಗಾ, ಬೆನಕನಹಳ್ಳಿ, ತಾಂಬಾ, ಚಿಕ್ಕರೂಗಿ, ಮಸಳಿ, ಹೊರ್ತಿ, ಹಿರೇರೂಗಿ, ಸಾಲೋಟಗಿ ಸೇರಿದಂತೆ ಇತರೆ ಹತ್ತಾರು ಗ್ರಾಮಗಳ ಲಿಂಬೆ ಬೆಳೆಗಾರರ ಸಮಸ್ಯೆಯಾಗಿದೆ. ಈಗಾಗಲೇ ಏಳು ಪಡಲಿಂಬೆ ಬೆಳೆಯನ್ನು ಕಟಾವು ಮಾಡಿದ್ದಾಗಿ ರೈತ ಶರಣಪ್ಪ ಹೇಳಿದ್ದಾರೆ. ಇನ್ನು ಕಳೆದ ಹತ್ತು ವರ್ಷಗಳಿಂದ ಬೆಳೆಸಿಕೊಂಡು ಬಂದ ಲಿಂಬೆ ಬುಡು ಬಿಸಿಲಿನ ಕಾರಣ ಒಣಗಿ ಹೋಗುತ್ತಿವೆ. ಲಿಂಬೆ ಬೆಳೆ ಒಣಗಿ ಹೋದರೆ ಮತ್ತೇ ಇವನ್ನು ಬೆಳಸಲು ಆರೇಳು ವರ್ಷ ಬೇಕು. ಈಗಾ ಫಸಲು ನೀಡುತ್ತಿರೋ ಲಿಂಬೆ ಗಿಡಗಳನ್ನಾದರೂ ಉಳಿಸಿಕೊಂಡರೆ ಸಾಕು ಎಂಬಂತಾಗಿದೆ. ಗ್ರಾಮದಿಂದ ಹತ್ತರಿಂದ 12 ಕಿಲೋ ಮೀಟರ್ ದೂರದಿಂದ ಕೊಳವೆ ಬಾವಿಯ ನೀರನ್ನು ಟ್ಯಾಂಕರ್ ನಲ್ಲಿ ಹಾಕಿಕೊಂಡು ಲಿಂಬೆ ಗಿಡಗಳಿಗೆ ಬಿಡುತ್ತಿದ್ದೇವೆ. ಲಿಂಬೆ ಫಸಲು ಬಾರದಿದ್ದರೂ ಲಿಂಬೆ ಗಿಡಗಳನ್ನು ಜೀವಂತವಾಗಿ ಉಳಿಸಿಕೊಳ್ಳುವ ಉದ್ದೇಶದಿಂದ ಟ್ಯಾಂಕರ್ ನೀರು ಹಾಕುತ್ತಿರೋದಾಗಿ ಲಿಂಬೆ ಬೆಳೆಗಾರರು ಹೇಳಿದ್ದಾರೆ.

ವಿಜಯಪುರ ಜಿಲ್ಲೆಯ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಒಂದು ಟ್ಯಾಂಕರ್ ನೀರಿಗೆ 1000 ರಿಂದ 1500 ಖರ್ಚಾಗುತ್ತಿದೆ. ಸಾಲ ಸೋಲ ಮಾಡಿಯದಾರೂ ಟ್ಯಾಂಕರ್ ನೀರು ಹಾಕಿ ನಮ್ಮ ಬೆಳೆಗಳನ್ನು ಉಳಿಸಿಕೊಳ್ಳುವುದು ನಮಗೆ ಮುಖ್ಯವಾಗಿದೆ. ಒಂದು ಟ್ಯಾಂಕರ್ ನೀರು ಕೇವಲ ನಾಲ್ಕು ಲಿಂಬೆ ಗಿಡಕ್ಕೆ ಆಗುತ್ತವೆ. ಹೀಗೆ ತೋಟದಲ್ಲಿರೋ ನೂರಾರು ಲಿಂಬೆ ಗಿಡಗಳಿಗೆ ನಿತ್ಯ 8 ರಿಂದ 10 ಸಾವಿರ ರೂಪಾಯಿ ಖರ್ಚು ಮಾಡಿ ನಿರಂತರವಾಗಿ ಟ್ಯಾಂಕರ್ ನೀರು ಹಾಕೋ ಅನಿವಾರ್ಯತೆ ಲಿಂಬೆ ಬೆಳೆಗಾರರಿಗೆ ಉಂಟಾಗಿದೆ.

ಜಿಲ್ಲೆಯಲ್ಲಿ ಉತೃಷ್ಟ ಗುಣಮಟ್ಟದ ಲಿಂಬೆ ಬೆಳೆಯುವ ಹಾಗೂ ದೇಶದಲ್ಲಿಯೇ ಹೆಚ್ಚು ಲಿಂಬೆ ಬೆಳೆಯೋ ಪಟ್ಟಿಯಲ್ಲಿ ವಿಜಯಪುರ ಜಿಲ್ಲೆ ನಾಲ್ಕನೇ ಸ್ಥಾನದಲ್ಲಿದೆ. ಕಾರಣ ಹಿಂದೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಲಿಂಬೆ ಅಭಿವೃದ್ಧಿ ಮಂಡಳಿಯನ್ನು ಸ್ಥಾಪನೆ ಮಾಡಲಾಗಿತ್ತು. ಆದರೆ ಕಾಂಗ್ರೆಸ್ ಸರ್ಕಾರದ ಅವಧಿ ಮುಗಿಯೋವರೆಗೂ ಲಿಂಬೆ ಅಭಿವೃದ್ಧಿ ಮಂಡಳಿಗೆ ಕನಿಷ್ಟ ಅನುದಾನ ಮಾತ್ರ ನೀಡಲಾಗಿತ್ತು. ನಂತರ ಕುಮಾರಸ್ವಾಮಿ ಹಾಗೂ ಯಡಿಯೂರಪ್ಪ ನೇತೃತ್ವದ ಸರ್ಕಾರಗಳಲ್ಲಿ ಲಿಂಬೆ ಅಭಿವೃದ್ಧಿ ಮಂಡಳಿಗೆ ಸೂಕ್ತ ಅನುದಾನ ನೀಡಲಿಲ್ಲಾ. ಲಿಂಬೆ ಬೆಳೆಗಾರರಿಗೆ ಸರಿಯಾದ ಸವಲತ್ತು ಕೊಡಲಿಲ್ಲಾ. ಇದೇ ಪರಂಪರೆ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರದಲ್ಲೂ ಮುಂದುವರೆದಿದೆ. ಕಾರಣ ಲಿಂಬೆ ಅಭಿವೃದ್ಧಿ ಮಂಡಳಿಯಿಂದ ಲಿಂಬೆ ಬೆಳೆಗಾರರಿಗೆ ಆದ ಲಾಭವೇನು ಎಂದು ಲಿಂಬೆ ಬೆಳೆಗಾರರು ಪ್ರಶ್ನೆ ಮಾಡಿದ್ದಾರೆ. ಜೊತೆಗೆ ಕಡು ಬಿಸಿಲಿ ಬೇಸಿಗೆಯಲ್ಲಿ ಲಿಂಬೆ ಬೆಳೆ ಒಣಗಿ ಹೋಗುತ್ತಿವೆ. ಲಿಂಬೆ ಬೆಳೆಯನ್ನಾದರೂ ಉಳಿಸಿಕೊಳ್ಳಲು ಲಿಂಬೆ ಅಭಿವೃದ್ಧಿ ಮಂಡಳಿ ಮುಂದಾಗಬೇಕಿದೆ. ಟ್ಯಾಂಕರ್ ನೀರು ಹಾಕುತ್ತಿರೋ ರೈತರಿಗೆ ಸಹಾಯ ಮಾಡಬೇಕಿದೆ ಎಂದು ರೈತರು ಒತ್ತಾಯ ಮಾಡಿದ್ದಾರೆ.

ಸದ್ಯ ಲಿಂಬೆ ಬೆಳೆಗಾರರ ಪಾಲಿಗೆ ಲಿಂಬೆ ಹುಳಿಯಷ್ಟೇಯಲ್ಲಾ ಕಹಿಯೂ ಆಗಿದೆ. ಬೇಸಿಗೆ ಯಾಕಾದ್ರೂ ಬಂಥಪ್ಪಾ ಎಂದು ಏದುಸಿರು ಬಿಡುತ್ತಲೇ ಪ್ರಮುಖ ಆದಾಯದ ಬೆಳೆಗಾರರು ಲಿಂಬೆಯನ್ನು ಉಳಿಸಿಕೊಳ್ಳೋಕೆ ಜಿಲ್ಲೆಯ ಲಿಂಬೆ ಬೆಳೆಗಾರರು ಪಡಬಾರದ ಕಷ್ಟ ಪಡುತ್ತಿದ್ದಾರೆ. ನಿತ್ಯ ಸಾವಿರಾರು ರೂಪಾಯಿ ಖರ್ಚು ಮಾಡಿ ಲಿಂಬೆ ಬೆಳೆಗೆ ಟ್ಯಾಂಕರ್ ಮೂಲಕ ನೀರು ಹಾಕಿ ಅವುಗಳನ್ನು ಉಳಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ. ಲಿಂಬೆ ಬೆಳೆಗಾರರ ಭಗೀರಥ ಪ್ರಯತ್ನವೆಂದು ಇದನ್ನು ಹೇಳಿದರೆ ತಪ್ಪಾಗಲು. ಮುಂಗಾರು ಮಳೆಯಾಗೋವರೆಗೂ ಟ್ಯಾಂಕರ್ ಮೂಲಕ ಲಿಂಬೆಗೆ ನೀರು ಹಾಕಲೇಬೇಕಿದೆ. ಕಾರಣ ಲಿಂಬೆ ಅಭಿವೃದ್ಧಿ ಮಂಡಳಿಯಿಂದಾಗಲೀ, ತೋಟಗಾರಿಕಾ ಇಲಾಖೆಯಿಂದಾಗಲಿ ಸರ್ಕಾರ ಇವರ ಸಹಾಯಕ್ಕೆ ಧಾವಿಸಬೇಕಿದೆ.

ವರದಿ: ಅಶೋಕ ಯಡಳ್ಳಿ, ಟಿವಿ9 ವಿಜಯಪುರ

Follow us on

Related Stories

Most Read Stories

Click on your DTH Provider to Add TV9 Kannada