ಉತ್ತರ ಕರ್ನಾಟಕ ಭಾಗದ ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ವಿಜ್ಞಾನ ಚಟುವಟಿಕೆಗಳಿಗೆ ದತ್ತಿ ನಿಧಿ: ಮಾಜಿ ಸಚಿವ ಎಂ.ಬಿ. ಪಾಟೀಲ್

ಬಿಎಲ್​ಡಿಇ ಸಂಸ್ಥೆಯಿಂದ ವಿಜ್ಞಾನ, ಮಾನವಿಕತೆ ಮತ್ತು ಸಂಶೋಧನೆ ಸಮಿತಿ ರಚಿಸಲಾಗಿದ್ದು, ಹೆಸರಾಂತ ವಿಜ್ಞಾನಿ ಯುನೆಸ್ಕೋ ಜೀವವಿಜ್ಞಾನ ವಿಭಾಗದ ಮುಖ್ಯಸ್ಥ ಪ್ರೊ.ಕುಶಾಲ ಕೆ. ದಾಸ್ ಸಮಿತಿಯ ಮುಖ್ಯಸ್ಥರಾಗಿ ಸೇವೆ ಸಲ್ಲಿಸಲಿದ್ದಾರೆ.

  • ಅಶೋಕ ಯಡಳ್ಳಿ
  • Published On - 12:15 PM, 21 Feb 2021
ಉತ್ತರ ಕರ್ನಾಟಕ ಭಾಗದ ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ವಿಜ್ಞಾನ ಚಟುವಟಿಕೆಗಳಿಗೆ ದತ್ತಿ ನಿಧಿ: ಮಾಜಿ ಸಚಿವ ಎಂ.ಬಿ. ಪಾಟೀಲ್
ಖ್ಯಾತ ವಿಜ್ಞಾನಿ ಪ್ರೊ. ಕುಶಾಲ ದಾಸ್ ಅವರೊಂದಿಗೆ ಚರ್ಚೆ ನಡೆಸುತ್ತಿರುವ ಎಂ. ಬಿ. ಪಾಟೀಲ್‍

ವಿಜಯಪುರ:  ನಗರದ ಬಿಎಲ್​ಡಿಇ ಸಂಸ್ಥೆ ಹಾಗೂ ಬಿಎಲ್​ಡಿಇ ಡೀಮ್ಡ್ ವಿಶ್ವವಿದ್ಯಾಲಯ ಆಧೀನದ ಸಂಸ್ಥೆಗಳು ಮತ್ತು ಉತ್ತರ ಕರ್ನಾಟಕದ ಸರ್ಕಾರಿ, ಖಾಸಗಿ ಶಾಲೆ ಹಾಗೂ ಕಾಲೇಜುಗಳ ಮಕ್ಕಳಲ್ಲಿ ವಿಜ್ಞಾನದ ಚಟುವಟಿಕೆಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ದತ್ತಿ ನಿಧಿಯನ್ನು ಸ್ಥಾಪಿಸಲು ಸಂಸ್ಥೆ ಅಧ್ಯಕ್ಷ ಎಂ.ಬಿ.ಪಾಟೀಲ್ ಮುಂದಾಗಿದ್ದಾರೆ. ಸಂಸ್ಥೆಯ ಶಾಲಾ ಕಾಲೇಜುಗಳು ಅಷ್ಟೇ ಅಲ್ಲ ಉತ್ತರ ಕರ್ನಾಟಕ ಭಾಗದ ಸರ್ಕಾರಿ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ವಿಜ್ಞಾನ ವಿಷಯ ಕಬ್ಬಿಣದ ಕಡಲೆಯಾಗಬಾರದು. ಎಲ್ಲಾ ವಿದ್ಯಾರ್ಥಿಗಳಿಗೂ ವೈಜ್ಞಾನಿಕವಾಗಿ ಜ್ಞಾನವನ್ನು ಪಡೆದುಕೊಳ್ಳಲು ಸಹಾಯ ಮಾಡಬೇಕು ಎನ್ನುವ ನಿಟ್ಟಿನಲ್ಲಿ ದತ್ತಿನಿಧಿ ಸ್ಥಾಪನೆ ಮಾಡಲಾಗುತ್ತದೆ ಎಂದು ಮಾಜಿ ಸಚಿವ ಎಂ. ಬಿ.ಪಾಟೀಲ್ ಹೇಳಿದ್ದಾರೆ.

ದತ್ತಿ ನಿಧಿಯ ನೇತೃತ್ವ :
ಈ ನಿಟ್ಟಿನಲ್ಲಿ ಬಿಎಲ್​ಡಿಇ ಸಂಸ್ಥೆಯಿಂದ ವಿಜ್ಞಾನ, ಮಾನವಿಕತೆ ಮತ್ತು ಸಂಶೋಧನೆ ಸಮಿತಿ ರಚಿಸಲಾಗಿದ್ದು, ಹೆಸರಾಂತ ವಿಜ್ಞಾನಿ ಯುನೆಸ್ಕೋ ಜೀವವಿಜ್ಞಾನ ವಿಭಾಗದ ಮುಖ್ಯಸ್ಥ ಪ್ರೊ.ಕುಶಾಲ ಕೆ. ದಾಸ್ ಸಮಿತಿಯ ಮುಖ್ಯಸ್ಥರಾಗಿ ಸೇವೆ ಸಲ್ಲಿಸಲಿದ್ದಾರೆ. ಆಡಳಿತಾಧಿಕಾರಿ ಹಾಗೂ ಫಾರ್ಮಾಸುಟಿಕ್ಸ್ ವಿಜ್ಞಾನಿ ಡಾ.ರಾಘವೇಂದ್ರ ಕುಲಕರ್ಣಿ ಮತ್ತು ಕೆ. ಸಿ. ಪಿ ವಿಜ್ಞಾನ ಕಾಲೇಜಿನ ಸಸ್ಯಶಾಸ್ತ್ರ ಪ್ರಾಧ್ಯಾಪಕರಾದ ಡಾ. ರಾಮಚಂದ್ರ ನಾಯಕ ಸದಸ್ಯರಾಗಿ ಕಾರ್ಯನಿರ್ವಹಿಸಲಿದ್ದಾರೆ.

ಕಾರ್ಯ ವಿಧಾನ :
ತಜ್ಞರ ಸಮಿತಿಯಿಂದ ಶಾಲಾ-ಕಾಲೇಜುಗಳಲ್ಲಿ ವಿಜ್ಞಾನದ ಚಟುವಟಿಕೆಗಳಿಗೆ ಉತ್ತೇಜನ ನೀಡಲಾಗುತ್ತದೆ. ಇನ್ನು ಪದವಿ, ಸ್ನಾತಕೋತ್ತರ ವಿದ್ಯಾರ್ಥಿಗಳ ಸಂಶೋಧನೆಗೆ ಪ್ರೇರೆಪಣೆ ನೀಡುವ ಉದ್ದೇಶವನ್ನು ಬಿಎಲ್​ಡಿಇ ಸಂಸ್ಥೆ ಹೊಂದಿದ್ದು, ಅಲ್ಲದೆ ಹೊಸ ಶಿಕ್ಷಣ ನೀತಿ ಅನ್ವಯ ಹೆಚ್ಚೆಚ್ಚು ಸಂಶೋಧನೆಗಳಿಗೆ ಒತ್ತು ನೀಡಲಾಗುವುದು ಎಂದು ಸಂಸ್ಥೆ ಅಧ್ಯಕ್ಷ ಎಂ. ಬಿ. ಪಾಟೀಲ್ ತಿಳಿಸಿದ್ದಾರೆ.

vijayapura fund

ಬಿಎಲ್​ಡಿಇ ಸಂಸ್ಥೆ ಅಧ್ಯಕ್ಷ ಎಂ.ಬಿ.ಪಾಟೀಲ್

ಶಾಲಾ -ಕಾಲೇಜುಗಳಲ್ಲಿ ವಿಜ್ಞಾನ ಕೂಟಗಳನ್ನು ರಚಿಸುವುದರ ಮೂಲಕ, ನಿರಂತರ ವೈಜ್ಞಾನಿಕ ಚಟುವಟಿಕೆಗಳನ್ನು ಮತ್ತು ಪ್ರದರ್ಶನವನ್ನು ಏರ್ಪಡಿಸಲಾಗುವುದು. ಸಂಶೋಧನೆ ಕೈಗೊಳ್ಳುವ ವಿದ್ಯಾರ್ಥಿಗಳಿಗೆ ಅಗತ್ಯ ಮಾರ್ಗದರ್ಶನವನ್ನು ಈ ಸಮಿತಿಯಿಂದ ನೀಡಲಾಗುವುದು. ಈ ಎಲ್ಲಾ ಚಟುವಟಿಕೆಗಳಿಗೆ ಬಿಎಲ್​ಡಿಇ ಸಂಸ್ಥೆಯಿಂದ ಮೂಲಭೂತ ಸೌಕರ್ಯವನ್ನು ಒದಗಿಸುವುದಲ್ಲದೆ ಆರ್ಥಿಕ ನೆರವನ್ನು ನೀಡಲಾಗುವುದು ಎಂದು ಮಾಜಿ ಸಚಿವ ಎಂ. ಬಿ. ಪಾಟೀಲ್ ತಿಳಿಸಿದ್ದಾರೆ. ಈ ನಿಟ್ಟಿನಲ್ಲಿ ಖ್ಯಾತ ವಿಜ್ಞಾನಿ ಪ್ರೊ. ಕುಶಾಲ ದಾಸ್ ಅವರೊಂದಿಗೆ ಸುಧೀರ್ಘ ಚರ್ಚೆ ನಡೆಸಿರುವ ಎಂ. ಬಿ. ಪಾಟೀಲ್‍ ತಕ್ಷಣವೇ ಈ ದಿಸೆಯಲ್ಲಿ ಕಾರ್ಯೋನ್ಮುಕರಾಗುತ್ತಾರೆ ಎಂದು ಸಚಿವ ಎಂ. ಬಿ. ಪಾಟೀಲ್ ಸೂಚಿಸಿದ್ದಾರೆ.

ಇದನ್ನೂ ಓದಿ: ರಾಷ್ಟ್ರಪತಿಯಿಂದ ಚಿನ್ನದ ಪದಕ ಪಡೆದ ವಿಜಯಪುರ ವಿದ್ಯಾರ್ಥಿನಿಯ ಕಾಲೇಜು ಶುಲ್ಕ ಮನ್ನಾ! ವ್ಯಾಸಂಗ ಉಚಿತ; ಉಪನ್ಯಾಸಕಿ ಹುದ್ದೆ ಖಚಿತ