ವೃತ್ತಿಪರ ಕೌಶಲ್ಯದ ಉತ್ತೇಜನಕ್ಕಾಗಿ.. ಹುಬ್ಬಳ್ಳಿ ದೇಶಪಾಂಡೆ ಫೌಂಡೇಶನ್-BLDE ಸಂಸ್ಥೆ ನಡುವೆ ಒಪ್ಪಂದ

ಈ ಒಡಂಬಡಿಕೆಯ ಮೂಲಕ ಪದವಿ ಪೂರೈಸುತ್ತಿರುವ ವಿದ್ಯಾರ್ಥಿಗಳು ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಮನೋಭಾವನೆ ಮತ್ತು ಸಾಮಾಜಿಕ ಸಮಸ್ಯೆಗಳಿಗೆ ಪ್ರತಿಬಂಧಕತೆಯನ್ನು ನೀಡಲು ವಿನೂತನ ಅವಿಷ್ಕಾರ ಮತ್ತು ಅನ್ವೇಷಣೆಗಳ ಮೂಲಕ ಉದ್ಯಮಶೀಲತಾ ಮನೋಭಾವನೆಯನ್ನು ಮೂಡಿಸಲಾಗುತ್ತದೆ.

  • ಅಶೋಕ ಯಡಳ್ಳಿ
  • Published On - 12:54 PM, 30 Jan 2021
ವೃತ್ತಿಪರ ಕೌಶಲ್ಯದ ಉತ್ತೇಜನಕ್ಕಾಗಿ.. ಹುಬ್ಬಳ್ಳಿ ದೇಶಪಾಂಡೆ ಫೌಂಡೇಶನ್-BLDE ಸಂಸ್ಥೆ ನಡುವೆ ಒಪ್ಪಂದ
ದೇಶಪಾಂಡೆ ಫೌಂಡೇಶನ್ ಹಾಗೂ ವಿಜಯಪುರದ ಬಿಎಲ್​ಡಿಇ ಸಂಸ್ಥೆ ನಡುವೆ ಒಡಂಬಡಿಕೆ

ವಿಜಯಪುರ: ವಿದ್ಯಾರ್ಥಿಗಳಲ್ಲಿನ ಕೌಶಲ್ಯವನ್ನು ಉತ್ತೇಜಿಸುವ ಹಾಗೂ ಪ್ರಸ್ತುತ ಉದ್ಯೋಗ ಕ್ಷೇತ್ರಕ್ಕೆ ಪೂರಕವಾಗಿರುವ ಕೌಶಲ್ಯಗಳ ಕುರಿತು ಕಾಲೇಜು ಮತ್ತು ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಮೂಲಕ ಉದ್ಯೋಗಿ ಮತ್ತು ಉದ್ಯೋಗದಾತರ ನಡುವಿನ ಅಂತರವನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಹುಬ್ಬಳ್ಳಿ ದೇಶಪಾಂಡೆ ಫೌಂಡೇಶನ್ ಹಾಗೂ ವಿಜಯಪುರದ ಬಿಎಲ್​ಡಿಇ ಸಂಸ್ಥೆ ನಡುವೆ ಒಡಂಬಡಿಕೆಯನ್ನು ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ಮಾಡಿಕೊಳ್ಳಲಾಗಿದೆ ಎಂದು ಬಿಎಲ್​ಡಿಇ ಸಂಸ್ಥೆಯ ಮೂಲಗಳು ತಿಳಿಸಿವೆ.

ಒಪ್ಪಂದದ ರುವಾರಿಗಳು:
ದೇಶಪಾಂಡೆ ಸ್ಟಾರ್ಟ್​​ಅಪ್ಸ್ ಸಿಇಓ ರಾಜೀವ್ ಪ್ರಕಾಶ ಮತ್ತು ಬಿಎಲ್​ಡಿಇ ಸಂಸ್ಥೆಯ ನಿರ್ದೇಶಕ ಬಸನಗೌಡ ಪಾಟೀಲ್ ಈ ಒಪ್ಪಂದಕ್ಕೆ ಸಹಿ ಹಾಕಿದ್ದು, ದೇಶಪಾಂಡೆ ಸ್ಕಿಲ್ಲಿಂಗ್ ಹಾಗೂ ಲೀಡರ್ಸ್​​ ಎಕ್ಸಲ್‍ರೇಟಿಂಗ್ ಡೆವಲಪ್​ಮೆಂಟ್ ಪ್ರೋಗ್ರಾಂ ಜೊತೆಗೂಡಿ ವಿದ್ಯಾರ್ಥಿಗಳಲ್ಲಿ ಪ್ರಾಯೋಗಿಕವಾಗಿ ಕಾರ್ಯನಿರ್ವಹಿಸುವ ಸಲುವಾಗಿ ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರ, ವಿದ್ಯಾರ್ಥಿಗಳಿಗೆ ವಿನೂತನ ನಾಯಕತ್ವ ತರಬೇತಿ ಹಾಗೂ ಪದವಿಗೂ ಮುನ್ನ ಉದ್ಯೋಗ ಪಡೆಯಲು ಬೇಕಾಗಿರುವ ಪೂರಕ ಕೌಶಲ್ಯಗಳ ಕುರಿತು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಡುವುದಾಗಿದೆ ಬಿಎಲ್​ಡಿಇ ಸಂಸ್ಥೆ ನಿರ್ದೇಶಕ ಬಸನಗೌಡ ಪಾಟೀಲ್ ಮಾಹಿತಿ ನೀಡಿದ್ದಾರೆ.

agreement haveri 2

ದೇಶಪಾಂಡೆ ಫೌಂಡೇಶನ್ ಹಾಗೂ ಬಿಎಲ್​ಡಿಇ ಸಂಸ್ಥೆ

ವಿದ್ಯಾರ್ಥಿಗಳಿಗೆ ಉಪಯೋಗ:
ಈ ಒಡಂಬಡಿಕೆಯ ಮೂಲಕ ಪದವಿ ಪೂರೈಸುತ್ತಿರುವ ವಿದ್ಯಾರ್ಥಿಗಳು ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಮನೋಭಾವನೆ ಮತ್ತು ಸಾಮಾಜಿಕ ಸಮಸ್ಯೆಗಳಿಗೆ ಪ್ರತಿಬಂಧಕತೆಯನ್ನು ನೀಡಲು ವಿನೂತನ ಅವಿಷ್ಕಾರ ಮತ್ತು ಅನ್ವೇಷಣೆಗಳ ಮೂಲಕ ಉದ್ಯಮಶೀಲತಾ ಮನೋಭಾವನೆಯನ್ನು ಮೂಡಿಸಲಾಗುತ್ತದೆ. ಜೊತೆಗೆ ಕಾಲೇಜು ಉಪನ್ಯಾಸಕರು ಮತ್ತು ತರಬೇತಿದಾರರ ಸಹಯೋಗದಲ್ಲಿ ಪ್ರಸ್ತುತ ಉದ್ಯೋಗ ಕ್ಷೇತ್ರಕ್ಕೆ ಅಗತ್ಯವಿರುವ ಕೌಶಲ್ಯಗಳ ಕುರಿತು ಮಾಹಿತಿ ಕಲೆ ಹಾಕುವ ಮೂಲಕ ವಿದ್ಯಾರ್ಥಿಗಳನ್ನು ಭವಿಷ್ಯದ ಉದ್ಯೋಗಕ್ಕೆ ಸಜ್ಜುಗೊಳಿಸಲಾಗುತ್ತದೆ.

ದೇಶಪಾಂಡೆ ಸ್ಟಾರ್ಟಪ್ಸ್ ಸಿಇಓ ರಾಜೀವ್ ಪ್ರಕಾಶ ಮತ್ತು ಬಿಎಲ್​ಡಿಇ ಸಂಸ್ಥೆಯ ನಿರ್ದೇಶಕ ಬಸನಗೌಡ ಪಾಟೀಲ್

ಪರಸ್ಪರ ಒಡಬಂಡಿಕೆ ಮಾಡಿಕೊಳ್ಳುವ ವೇಳೆ ಬಿಎಲ್​ಡಿಇ ಸಂಸ್ಥೆಯ ವಚನಪಿತಾಮಹ ಡಾ. ಹಳಕಟ್ಟಿ, ಎಂಜಿನಿಯರಿಂಗ್ ಕಾಲೇಜು ಪ್ರಾಚಾರ್ಯ ಅತುಲ್ ಆಯಿರೆ, ದೇಶಪಾಂಡೆ ಸ್ಟಾರ್ಟ್​​ಅಪ್ಸ್ ಸಿಇಓ ವಿವೇಕ ಪವಾರ, ದೇಶಪಾಂಡೆ ಸಿಓಓಪಿಎನ್ ನಾಯಕ, ನಿರ್ದೇಶಕ ಗುರನಗೌಡ ಕುರಗುಂದ, ಗೋವಿಂದ ಮದಭಾವಿ ಹಾಗೂ ವ್ಯವಸ್ಥಾಪಕ ಪ್ರಮೋದ ಹುಕ್ಕೇರಿ ಸೇರಿದಂತೆ ಇತರರು ಹಾಜರಿದ್ದರು.

‘ಸೆಪ್ಟೆಂಬರ್​ 1ರಿಂದ Onlineನಲ್ಲಿ ಪದವಿ ವಿದ್ಯಾರ್ಥಿಗಳಿಗೆ ಪೂರ್ಣಪ್ರಮಾಣದ ಕ್ಲಾಸ್’