ವಿಜಯಪುರದಲ್ಲಿ ರೆಮ್​ಡಿಸಿವಿರ್ ಇಂಜೆಕ್ಷನ್ ಮಾರಾಟ; ಹತ್ತು ಜನ ಬಂಧನ

ಪೊಲೀಸರು ಬಂಧಿತರಿಂದ 9 ರೆಮ್​ಡಿಸಿವಿರ್ ವಯಲ್ಸ್ ವಶಕ್ಕೆ ಪಡೆದಿದ್ದು, ಗೋಲಗುಂಬಜ್ ಠಾಣಾ ವ್ಯಾಪ್ತಿಯಲ್ಲಿ ಎರಡು ಪ್ರಕರಣ ಮತ್ತು ಗಾಂಧಿಚೌಕ್ ಠಾಣೆಯಲ್ಲಿ ಒಂದು ಪ್ರಕರಣ ದಾಖಲಾಗಿದೆ ಎಂದು ಎಸ್​ಪಿ ಅನುಪಮ್ ಅಗರ್ವಾಲ್ ಮಾಹಿತಿ ನೀಡಿದ್ದಾರೆ.

  • TV9 Web Team
  • Published On - 12:11 PM, 4 May 2021
ವಿಜಯಪುರದಲ್ಲಿ ರೆಮ್​ಡಿಸಿವಿರ್ ಇಂಜೆಕ್ಷನ್ ಮಾರಾಟ; ಹತ್ತು ಜನ ಬಂಧನ
ಬಂಧಿತರು

ವಿಜಯಪುರ: ರಾಜ್ಯದಲ್ಲಿ ಕೊರೊನಾ ಸೋಂಕಿನಿಂದ ಸಾವನ್ನಪ್ಪುತ್ತಿದ್ದಾರೆ. ಆದರೆ ಕೆಲವರು ಈ ಸಂದಿಗ್ಧ ಕಾಲದಲ್ಲಿ ಅಮಾನವೀಯವಾಗಿ ವರ್ತಿಸುತ್ತಿದ್ದಾರೆ. ಒಂದು ಕಡೆ ಸೂಕ್ತ ಚಿಕಿತ್ಸೆ ಸಿಗದೆ ಜನರು ಪರದಾಟ ಪಡುತ್ತಿದ್ದಾರೆ. ಇನ್ನೊಂದು ಕಡೆ ಕಾಳಸಂತೆಯಲ್ಲಿ ರೆಮ್​ಡಿಸಿವಿರ್ ಇಂಜೆಕ್ಷನ್ ಮಾರಾಟವಾಗುತ್ತಿದೆ. ಹೀಗೆ ಅಕ್ರಮವಾಗಿ ರೆಮ್​ಡಿಸಿವಿರ್ ಇಂಜೆಕ್ಷನ್ ಮಾರಾಟ ಮಾಡುತ್ತಿದ್ದ ಸುಮಾರು 10 ಜನರನ್ನು ಪೊಲೀಸರು ಬಂಧಿಸಿದ್ದಾರೆ.

ಪೊಲೀಸರು ಬಂಧಿತರಿಂದ 9 ರೆಮ್​ಡಿಸಿವಿರ್ ವಯಲ್ಸ್ ವಶಕ್ಕೆ ಪಡೆದಿದ್ದು, ಗೋಲಗುಂಬಜ್ ಠಾಣಾ ವ್ಯಾಪ್ತಿಯಲ್ಲಿ ಎರಡು ಪ್ರಕರಣ ಮತ್ತು ಗಾಂಧಿಚೌಕ್ ಠಾಣೆಯಲ್ಲಿ ಒಂದು ಪ್ರಕರಣ ದಾಖಲಾಗಿದೆ ಎಂದು ಎಸ್​ಪಿ ಅನುಪಮ್ ಅಗರ್ವಾಲ್ ಮಾಹಿತಿ ನೀಡಿದ್ದಾರೆ.

ರೆಮ್​ಡಿಸಿವಿರ್  ಔಷಧಿಯ ಬೇಡಿಕೆ ಹೆಚ್ಚಾಗಿದೆ. ಈ ಔಷಧಿಯ ಡಿಮ್ಯಾಂಡ್ ಈಗ ಹೆಚ್ಚಾಗಿರುವ ಕಾರಣ ಇದನ್ನು ಈಗ ಅಕ್ರಮವಾಗಿ ಮಾರಾಟ ಮಾಡುತ್ತಿದ್ದಾರೆ. ಇದರಿಂದಾಗಿ ನಿಜವಾಗಿ ಯಾರಿಗೆ ಔಷಧಿ ಅಗತ್ಯವಿದೆಯೋ ಅವರಿಗೆ ಸಿಗುತ್ತಿಲ್ಲ. ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆಗೆ ಇದನ್ನು ಮಾರಾಟ ಮಾಡಲಾಗುತ್ತಿದೆ. ಈ ಕುರಿತು ವಿಜಯಪುರ ಜಿಲ್ಲೆಯಲ್ಲಿ ಕಟ್ಟು ನಿಟ್ಟಿನ ಕ್ರಮಕೈಗೊಳ್ಳಲಾಗಿದೆ. ಈಗಾಗಲೇ ಜಿಲ್ಲೆಯಲ್ಲಿ ಮೂರು ಪ್ರಕರಣ ದಾಖಲಿಸಲಾಗಿದೆ. ಈ ಪ್ರಕರಣಗಳಲ್ಲಿ ಖಾಸಗಿ ಆಸ್ಪತ್ರೆಯ ಸ್ಟಾಪ್ ನರ್ಸ್​ಗಳು ಸಹಿತ ಶಾಮೀಲಾಗಿದ್ದಾರೆ ಎಂದು ಎಸ್​ಪಿ ಅನುಪಮ್ ಅಗರ್ವಾಲ್ ಹೇಳಿದರು.

ರೋಗಿಗಳ ಹೆಸರು ಮೇಲೆ ಇಂಜೆಕ್ಷನ್ ಪಡೆದು ಬ್ಲ್ಯಾಕ್ ಮಾರ್ಕೆಟ್​ನಲ್ಲಿ ಮಾರಾಟ ಮಾಡುತ್ತಿದ್ದಾರೆ. ವಿವಿಧ ಖಾಸಗಿ ಆಸ್ಪತ್ರೆಯಲ್ಲಿ ಮಾರಾಟ ಮಾಡಿದ ಮೂರು ಪ್ರಕರಣ ಜಿಲ್ಲೆಯಲ್ಲಿ ದಾಖಲಿಸಲಾಗಿದೆ. ಒಟ್ಟು ಮೂರು ಪ್ರಕರಣಗಳ ಪೈಕಿ ಹತ್ತು ಜನರ ಬಂಧನ ಹಾಗೂ 9 ಇಂಜೆಕ್ಷನ್ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ

ಇಷ್ಟಕ್ಕೂ ಕೊರೊನಾ ಸೋಂಕಿತ ವ್ಯಕ್ತಿಗೆ ಆಕ್ಸಿಜನ್​ ಎಷ್ಟು ಬೇಕು? ಆಕ್ಸಿಜನ್ ಕಾನ್ಸೆಂಟ್ರೇಟ್ ಮಾತ್ರವೇ ಸಾಕಾದೀತಾ?

ಚಾಮರಾಜನಗರ ರೋಗಿಗಳ ಸಾವು ಪ್ರಕರಣ; ಡೆತ್ ಆಡಿಟ್ ಕಮಿಟಿ ವರದಿ ಟಿವಿ9ಗೆ ಲಭ್ಯ

(Police arrested ten people who were illegally selling Remdesivir injection at Vijayapura)