ದಾವಣಗೆರೆ: ರೋಗಕ್ಕೆ ಔಷಧಿ ನೀಡುವ ಹೆಸರಿನಲ್ಲಿ ರೈತರಿಗೆ ವಂಚಿಸುತ್ತಿದ್ದ ಇಬ್ಬರು ಯುವಕರನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಚಿರಡೋಣಿ ಗ್ರಾಮದಲ್ಲಿ ನಡೆದಿದೆ.
ಮೆಡಿಕಲ್ ಕಾಲೇಜ್ನಿಂದ ಬಂದಿದ್ದೇವೆ ರೋಗಕ್ಕೆ ಔಷಧಿ ನೀಡುತ್ತೇವೆ ಎಂದು ಹೇಳಿ ರೈತರಿಂದ ಹಣ ವಸೂಲಿ ಮಾಡಿ ಪರಾರಿ ಆಗುತ್ತಿದ್ದ ಯುವಕರನ್ನು ಕಾಂಗ್ರೆಸ್ ಮುಖಂಡ ಬಸವಂತಪ್ಪ ಜೊತೆ ಸೇರಿ ಸ್ಥಳೀಯರು ವಂಚಕರನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಓರ್ವ ರೈತನ ಮಗಳಿಗೆ ಔಷಧಿ ನೀಡುವುದಾಗಿ ಹೇಳಿ ಐದು ಸಾವಿರ ರೂಪಾಯಿ ತೆಗೆದುಕೊಂಡು ಪರಾರಿ ಆಗುತ್ತಿದ್ದ ಸೋಮಶೇಖರ ಹಾಗೂ ಚಿರಂಜೀವಿ ಎಂಬ ಯುವಕರನ್ನು ಸ್ಥಳೀಯರು ಹಿಡಿದಿದ್ದಾರೆ. ಸ್ಥಳೀಯರ ಕೈಗೆ ಸಿಕ್ಕ ತಕ್ಷಣ ಯುವಕರು ಕಾಲಿಗೆ ಬಿದ್ದು ಕ್ಷಮೆ ಕೇಳಿದ ಪ್ರಸಂಗ ನಡೆದಿದೆ. ಬಸವಾ ಪಟ್ಟಣ ಪೊಲೀಸ್ ಠಾಣೆಗೆ ಯುವಕರನ್ನು ಒಪ್ಪಿಸಲಾಗಿದೆ.
ಧಾರವಾಡ ಜಿಲ್ಲೆಯ ಕಲಘಟಗಿಯ ಬಸ್ ನಿಲ್ದಾಣದ ಕೊಠಡಿಯಲ್ಲಿ ಸಾರಿಗೆ ಸಂಸ್ಥೆಯ ನಿಯಂತ್ರಣಾಧಿಕಾರಿ S.P.ಬುಲ್ಬುಲೆ ಶವ ಪತ್ತೆಯಾಗಿದೆ. ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಸ್ಥಳಕ್ಕೆ ಕಲಘಟಗಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಹಳ್ಳದ ನೀರಿನಲ್ಲಿ ಕೊಚ್ಚಿ ಹೋದ ಟಾಟಾ ಏಸ್ ಇನ್ನು ಮತ್ತೊಂದೆಡೆ ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಯತ್ತಿನಹಳ್ಳಿ ಗ್ರಾಮದಲ್ಲಿ ಹಳ್ಳದ ನೀರಿನಲ್ಲಿ ಟಾಟಾ ಏಸ್ ಕೊಚ್ಚಿಕೊಂಡು ಹೋದ ಘಟನೆ ನಡೆದಿದೆ. ಚಿಕ್ಕಹರಳಹಳ್ಳಿ ಗ್ರಾಮದ ಗುಡ್ಡಪ್ಪ ಎಂಬುವರಿಗೆ ಸೇರಿದ ವಾಹನ ಹಳ್ಳದ ಬಳಿ ನಿಲ್ಲಿಸಿದ್ದ ವೇಳೆ ಕೊಚ್ಚಿಕೊಂಡು ಹೋಗಿದೆ. ಟಾಟಾಏಸ್ ಚಾಲಕ ಕೆಳಗಿಳಿದಿದ್ರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇಲ್ಲದಿದ್ದರೆ ಅವರು ಕೂಡ ಮಳೆ ನೀರಿನಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದರು.
ಇನ್ನು ಹಳ್ಳದಲ್ಲಿ ಕೊಚ್ಚಿಕೊಂಡು ಹೋಗಿದ್ದ ಟಾಟಾ ಏಸ್ ವಾಹನವನ್ನು ಸ್ಥಳೀಯರು ಹೊರತೆಗೆದಿದ್ದಾರೆ. ಹಳ್ಳದ ನೀರಿನಲ್ಲಿ ಈಜಿಕೊಂಡು ಹೋಗಿ ವಾಹನಕ್ಕೆ ಹಗ್ಗ ಕಟ್ಟಿ, ಟ್ರ್ಯಾಕ್ಟರ್ ಮೂಲಕ ಹಳ್ಳದ ನೀರಿನಿಂದ ಟಾಟಾ ಏಸ್ ವಾಹನವನ್ನು ಮೇಲೆತ್ತಲಾಗಿದೆ.
ಇದನ್ನೂ ಓದಿ: Chennai Rains: ತಮಿಳುನಾಡಿನಲ್ಲಿ ನ.21ರವರೆಗೂ ಭಯಂಕರ ಮಳೆ ಸಾಧ್ಯತೆ; ಪರಿಸ್ಥಿತಿ ನಿಭಾಯಿಸಲು ವಾರ್ ರೂಂ ನಿರ್ಮಾಣ