AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Tv9 Digital Live: 10 ಸಾವಿರ ಇ-ಮೇಲ್​ಗೂ ಕಿವಿಗೊಡದ ವಿಟಿಯು; ಒಂದೇ ದಿನದ ಅಂತರದಲ್ಲಿ ಕಠಿಣ ವಿಷಯಗಳ ಪರೀಕ್ಷೆ ನಡೆಸಲು ಸಿದ್ಧತೆ

TV9 Digital Live: 5ನೇ ಸೆಮ್​ನಲ್ಲಿ ಒಂದು ವಿಷಯ ಫೇಲ್ ಆದರೂ ಸಹ ಮುಂದಿನ ಇಡೀ ಜೀವನದಲ್ಲಿ ಕಪ್ಪುಚುಕ್ಕೆಯಾಗಲಿದೆ. ಇದನ್ನು ವಿಟಿಯು ಮರೆತುಬಿಟ್ಟಿದೆ..

Tv9 Digital Live: 10 ಸಾವಿರ ಇ-ಮೇಲ್​ಗೂ ಕಿವಿಗೊಡದ ವಿಟಿಯು; ಒಂದೇ ದಿನದ ಅಂತರದಲ್ಲಿ ಕಠಿಣ ವಿಷಯಗಳ ಪರೀಕ್ಷೆ ನಡೆಸಲು ಸಿದ್ಧತೆ
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (VTU)
Follow us
guruganesh bhat
|

Updated on:Feb 18, 2021 | 8:04 PM

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ಒಂದಲ್ಲ ಒಂದು ವಿವಾದವನ್ನು ಮೈಮೇಲೆ ಎಳೆದುಕೊಳ್ಳುತ್ತಲೇ ಬಂದಿದೆ. ಈಗ ವಿಟಿಯುನ ಐದನೇ ಸೆಮಿಸ್ಟರ್​ ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ವಿರುದ್ಧ ತಮ್ಮ ದನಿ ಎತ್ತಿದ್ದಾರೆ. ಇಂಜಿನಿಯರಿಂಗ್ ಎಂಬ ಕಬ್ಬಿಣದ ಕಡಲೆಯನ್ನು ಆನ್ ಲೈನ್ ಕ್ಲಾಸ್ ಅಟೆಂಡ್ ಮಾಡಿದ ವಿದ್ಯಾರ್ಥಿಗಳು ಒಂದೇ ದಿನದ ಅಂತರದಲ್ಲಿ ಐದನೇ ಸೆಮ್​ನ ಪರೀಕ್ಷೆಗಳನ್ನು ಬರೆಯುವ ಒತ್ತಡಕ್ಕೆ ಸಿಲುಕಿಸಿದೆ ವಿಟಿಯು (VTU). ಇದು ಯಾರಿಗೂ ಸುಲಭವಲ್ಲ, ಅದರಲ್ಲೂ ಆನ್​ಲೈನ್ ಕ್ಲಾಸ್​ನಲ್ಲಿ ಪಾಠ ಕೇಳಿದ ವಿದ್ಯಾರ್ಥಿಗಳಿಗಂತೂ ಇದು ಮಾನಸಿಕ ಹಿಂಸೆಯೇ ಹೌದು. ವಿಟಿಯು ಮೈಮೇಲೆ ಎಳೆದುಕೊಂಡ ವಿವಾದದ ಕುರಿತು ಟಿವಿ9 ಕನ್ನಡ ಡಿಜಿಟಲ್ ಲೈವ್​ನಲ್ಲಿ (Tv9 Kannada Digital Live) ನಿರೂಪಕ ಆನಂದ್ ಬುರಲಿ, ಇಂಜಿನಿಯರಿಂಗ್ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಚರ್ಚಿಸಿದರು.

ಸ್ವತಃ ಪರೀಕ್ಷೆ ಬರೆಯುತ್ತಿರುವ ಇಂಜಿನಿಯರಿಂಗ್ 5ನೇ ಸೆಮ್​ನ ವಿದ್ಯಾರ್ಥಿ ಶಿವಕುಮಾರ್ ತಮ್ಮ ಅಳಲನ್ನು ತೋಡಿಕೊಂಡರು. ಐದನೇ ಸೆಮ್​ನಲ್ಲಿ ನಾಲ್ಕು ಕಷ್ಟಕರ ವಿಷಯಗಳಿವೆ. ಶಿಕ್ಷಕರ ಬಳಿಯೇ ಬಗೆಹರಿಸಲಾಗದಂತಹ ಸಮಸ್ಯೆಗಳು ಸಹ ಕೆಲವೊಮ್ಮೆ ಕಂಡುಬಂದ ಉದಾಹರಣೆಗಳಿವೆ. ಹೀಗಿರುವಾಗ, ಈ ಬಾರಿ ಆನ್​ಲೈನ್​ನಲ್ಲಿಯೇ ಸಂಪೂರ್ಣ ಪಠ್ಯವನ್ನು ಕಲಿತ ವಿದ್ಯಾರ್ಥಿಗಳ ಬಳಿ ಕೇವಲ ಒಂದು ದಿನದ ಅಂತರದಲ್ಲಿ ಪರೀಕ್ಷೆ ಬರೆಯಿರಿ ಎಂದರೆ ಪರಿಸ್ಥಿತಿ ಹೇಗಿರಬೇಡ? ಎಂದು ಪ್ರಶ್ನಿಸಿದರು.

ಮೊದಲಿಂದಲೂ ಒಂದು ದಿನದ ಅಂತರದ ಪರೀಕ್ಷೆ ನಡೆಸುವ ಪದ್ಧತಿಯ ತಡೆಯಲು ಮನವಿ ಕೊಡುತ್ತಲೇ ಬಂದಿದ್ದೇವೆ. ಆದರೂ ಯಾವುದೇ ಪರಿಹಾರ ಆಗಿಲ್ಲ ಎಂದು ವಿವರಿಸಿದರು. ಥಿಯರಿ ವಿಷಯಗಳನ್ನು ಬರೆಯಬಹುದಾದರೂ, ಪ್ರಾಯೋಗಿಕ ವಿಷಯಗಳನ್ನು ಒಂದೇ ದಿನದ ಅಂತರದಲ್ಲಿ ಬರೆಯುವುದು ಯಾವುದೇ ಕಾರಣಕ್ಕೂ ಸಾಧ್ಯವಿಲ್ಲ. ಅದರಲ್ಲೂ, ಆನ್​ಲೈನ್ ಕ್ಲಾಸ್​ಗಳು ಎಷ್ಟು ವಿದ್ಯಾರ್ಥಿಗಳಿಗೆ ತಲುಪಿದೆ ಎಂದು ವಿಟಿಯುಗೆ ಮಾಹಿತಿಯೇ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ಹೀಗೆ ಪರೀಕ್ಷೆ ನಡೆಸುವುದು ಎಷ್ಟು ಸರಿ ಎಂದು ಅವರು ಪ್ರಶ್ನಿಸಿದರು.

ತಾಂತ್ರಿಕ ವಿವಿಯಲ್ಲೇ ತಾಂತ್ರಿಕ ತೊಂದರೆ! ಎಷ್ಟೋ ಕಾಲೇಜುಗಳಲ್ಲಿ  ಪಾಠ ಪ್ರವಚನಗಳು ಇನ್ನೂ ಪೂರ್ಣಗೊಂಡಿಲ್ಲ, ಅಂತರ್ಜಾಲ ತೊಂದರೆಯಿಂದ ಆನ್​ಲೈನ್ ಪರೀಕ್ಷೆ ಮಾಡಲಾಗುತ್ತಿಲ್ಲ. ತಾಂತ್ರಿಕ ವಿವಿಯಲ್ಲೇ ತಾಂತ್ರಿಕ ತೊಂದರೆ ಇದ್ದರೆ ಸಾಮಾನ್ಯ ವಿದ್ಯಾರ್ಥಿಗಳು ಹೇಗೆ ತಾಂತ್ರಿಕವಾಗಿ ಆನ್​ಲೈನ್​ನಲ್ಲಿ ತರಗತಿಗೆ ಕೂರಲು ಸಾಧ್ಯ ಎಂದು ವಾಸ್ತವ ಪರಿಸ್ಥಿತಿ ಬಿಚ್ಚಿಟ್ಟರು. ಒಂದೊಂದು ವಿಷಯಕ್ಕೂ ಐದಾರು ಪುಸ್ತಕಗಳಿದ್ದೂ ಎಲ್ಲ ಪ್ರಶ್ನೆಗಳನ್ನೂ ಬಿಡಿಸಿ ಪರೀಕ್ಷೆಗೆ ತಯಾರಿ ನಡೆಸಲು ಕೇವಲ ಒಂದು ದಿನದ ಅವಧಿಯಲ್ಲಿ ಸಾಧ್ಯವಿಲ್ಲ. ಡಿಪ್ಲೋಮಾದಿಂದ ಇಂಜಿನಿಯರಿಂಗ್​ಗೆ ಸೇರಿದವರಿಗೆ ಇನ್ನೂ ಇಂಜಿನಿಯರಿಂಗ್​ನ ವಿಷಯಗಳು ಕರಗತವೇ ಆಗಿಲ್ಲ. ಹೀಗಾಗಿ ಪರೀಕ್ಷೆ ಬರೆಯುವುದು ಅಸಾಧ್ಯ ಎಂದರು. ಐದನೇ ಸೆಮ್​ನಲ್ಲಿ ಒಂದು ವಿಷಯ ಫೇಲ್ ಆದರೂ ಸಹ ಮುಂದಿನ ಇಡೀ ಜೀವನದಲ್ಲಿ ಕಪ್ಪುಚುಕ್ಕೆಯಾಗಲಿದೆ, ಇದನ್ನು ವಿಟಿಯು ಮರೆತುಬಿಟ್ಟಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಈ ಕುರಿತು ತಮ್ಮ ಅನುಭವವನ್ನು ವಿವರಿಸಿದ ಈಗಾಗಲೇ ಇಂಜಿನಿಯರಿಂಗ್ ಮುಗಿಸಿರುವ, ವಿದ್ಯಾರ್ಥಿಗಳ ಪರ ಹೋರಾಡಿ ಅನುಭವವಿರುವ ವೇಣುಗೋಪಾಲ ಅವರು,  ಗೇಟ್ ಪರೀಕ್ಷೆ ಮತ್ತು ವಿಟಿಯು ಪರೀಕ್ಷಾ ದಿನಾಂಕ ಒಂದೇ ದಿನ ಬಂದು ತೊಂದರೆಯಾದಾಗ ಪ್ರಧಾನಮಂತ್ರಿಯವರ ಕಚೇರಿಗೆ (Prime Minister Office) ಪತ್ರ ಬರೆದು, ಅಲ್ಲಿಂದ ವಿಶ್ವವಿದ್ಯಾಲಯಕ್ಕೆ ನಿರ್ದೇಶನ ಬಂದಾಗಲಷ್ಟೇ ಪರೀಕ್ಷಾ ದಿನಾಂಕವನ್ನು ಮುಂದೂಡಿದ್ದರು. ಈಗಲೂ ವಿಟಿಯು ವಿದ್ಯಾರ್ಥಿಗಳಿಗೆ ತೊಂದರೆಯಾಗುವಂತಹ ಕ್ರಮವನ್ನೇ ಅನುಸರಿಸುತ್ತಿದೆ ಎಂದು ತೊಳಲಾಟ ಬಿಚ್ಚಿಟ್ಟರು.

VTU STUDENTS EXAMS

ಸಂವಾದದಲ್ಲಿ ವಿದ್ಯಾರ್ಥಿ ಶಿವಕುಮಾರ್, ನಿರೂಪಕ ಆನಂದ ಬುರಲಿ, ಎನ್​ಎಸ್​ಯುಐ ಪ್ರತಿನಿಧಿ ಅನ್ವೀತ್ ಕಟೀಲ್

ಈಗ ಒಂದೇ ದಿನ ಅಂತರದಲ್ಲಿ ಪರೀಕ್ಷೆ ಮಾಡಿದರೆ ರಿವಿಜನ್ ಮಾಡಲು ಸಮಯ ಸಾಲದು.  ಪ್ರಾಯೋಗಿಕ ವಿಷಯಗಳ ಪಾಠ ಪ್ರವಚನಗಳನ್ನು ಆನ್​ಲೈ ನ್​ನಲ್ಲಿ‌ ಕಲಿಸಿ ಆಫ್​ಲೈನ್​ನಲ್ಲಿ ಪರೀಕ್ಷೆ ಆಯೋಜಿಸುತ್ತಿದ್ದಾರೆ. ಇದನ್ನು ರಾಜ್ಯಪಾಲರ ಗಮನಕ್ಕೂ ತಂದಿದ್ದೆವು.  ವಿಶ್ವವಿದ್ಯಾಲಯಕ್ಕೆ 10,000ಕ್ಕೂ ಹೆಚ್ಚು ಮೇಲ್ ಮಾಡಿದ್ದೆವು. ಉಪ ಮುಖ್ಯಮಂತ್ರಿ, ರಾಜ್ಯಪಾಲರಿಗೂ ಸಹ ಮೇಲ್ ಮಾಡಿದ್ದೆವು. ಅಲ್ಲದೇ, ಪ್ರಧಾನಮಂತ್ರಿ ಕಚೇರಿಯಲ್ಲಿ 40 ದೂರುಗಳು ದಾಖಲಾಗಿವೆ.  ಇವೆಲ್ಲದರ ಮಾಹತಿ ವಿಟಿಯು ಬಳಿ ಇದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.

ಫೇಲ್ ಎಂಬುದು ಗೊತ್ತಿರದ ಹೆಣ್ಣುಮಕ್ಕಳ ಕಥೆಯೇನು.. ಹೆಚ್ಚಾಗಿ ಹೆಣ್ಣುಮಕ್ಕಳು ಇದುವರೆಗೂ ಒಂದು ಸಬ್ಜೆಕ್ಟನ್ನೂ ಫೇಲ್ ಆಗದೇ ಎಲ್ಲ ವಿಷಯಗಳಲ್ಲೂ ಉತ್ತಮ ಅಂಕ ತೆಗೆದುಕೊಂಡು ಬಂದಿರುತ್ತಾರೆ. ಈಗ, ಒಂದೇ ಒಂದು ವಿಷಯದಲ್ಲಿ ಫೇಲ್ ಆದರೂ ಅಂಥವರ ಭವಿಷ್ಯವೇ ದುರಂತವಾಗುತ್ತದೆ ಎಂದು ವಿವರಿಸಿದರು. ವಿಟಿಯು ತೆಗೆದುಕೊಂಡ ಇಂತಹ ಸಮಸ್ಯಾತ್ಮಕ ನಿಲುವುಗಳ ಬಗ್ಗೆ ಟಿವಿ9ಕನ್ನಡ ವಾಹಿನಿಯಲ್ಲಿ ಈಮೊದಲೇ ವರದಿ ಪ್ರಸಾರವಾಗಿತ್ತು ಎಂಬುದನ್ನು ಅವರು ನೆನೆಸಿಕೊಂಡರು.

ಅಖಿಲ ಭಾರತ ವಿದ್ಯಾರ್ಥಿ ಪರಿಷತ್​ನ ಪ್ರತಿನಿಧಿ ಸೂರಜ್ ಮಾತನಾಡಿ, ಕಳೆದ 20 ದಿನಗಳ ಹಿಂದಷ್ಟೇ ಪ್ರಾಕ್ಟಿಕಲ್ ವಿಷಯಗಳ ಬೋಧನೆ ಮುಗಿದಿದೆ. ಇರುವ 6-7 ವಿಷಯಗಳಲ್ಲಿ 2-3 ವಿಷಯಗಳು ನಿಜಕ್ಕೂ ಕಠಿಣವಾಗಿವೆ. ಈ ಕಷ್ಟದ ವಿಷಯಗಳ ಪರೀಕ್ಷೆ ಬರೆಯಲು 2-3 ದಿನಗಳ ಅವಕಾಶ ನೀಡಬೇಕು. ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟದಲ್ಲಿ ವಿಟಿಯು ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆ ನೀಡಬಾರದು ಎಂದು ಎಬಿವಿಪಿ ಮನವಿ ಮಾಡುತ್ತದೆ ಎಂದರು. ಸಾಧ್ಯವಾದರೆ ಕಠಿಣ ವಿಷಯಗಳಿಗಾದರೂ ಪರೀಕ್ಷೆಗೆ ಹೆಚ್ಚಿನ ಅವಧಿ ನೀಡಬೇಕು ಎಂದ ವಿವರಿಸಿದರು.

ಎನ್​ಎಸ್​ಯುಐ ಸಂಘಟನೆಯ ಪ್ರತಿನಿಧಿ ಅನ್ವೀತ್ ಕಟೀಲ್ ಮಾತನಾಡಿ, ಕಾಲೇಜಿನಿಂದಲೇ ಆನ್​ಲೈನ್​ನಲ್ಲಿ ಪಾಠ ಪೂರ್ಣಗೊಳಿಸಲಾಗಿದೆ ಎಂಬ ತಪ್ಪು ಮಾಹಿತಿ ರವಾನೆಯಾಗಿರುತ್ತದೆ. ಹೀಗಾಗಿ, ವಿಟಿಯು ಒಂದೇ ದಿನದ ಅಂತರದಲ್ಲಿ ಪರೀಕ್ಷೆ ನಡೆಸಲು ತಯಾರಿ ನಡೆಸಿದೆ. ಮೂರು ದಿನಗಳಿಂದ ಉಪ ಮುಖ್ಯಮಂತ್ರಿ ಅಶ್ವತ್ಥ ನಾರಾಯಣ್ ಅವರನ್ನು ಭೇಟಿಯಾಗಲು ಪ್ರಯತ್ನಿಸಿದರೂ ಅವರು ಕೈಗೆ ಸಿಗುತ್ತಿಲ್ಲ. ಎಷ್ಟೋ ಮಕ್ಕಳು ಖಿನ್ನತೆಯಲ್ಲಿದ್ದು ಆತ್ಮಹತ್ಯೆ ಮಾಡಿಕೊಳ್ಳುವ ಭೀತಿಯೂ ಇದೆ. ತಮ್ಮ ದ್ವಂದ್ವ ಹೇಳಿಕೆಗಳಿಂದ ಶಿಕ್ಷಣ ಸಚಿವರು ವಿದ್ಯಾರ್ಥಿಗಳು ಶಿಕ್ಷಣ ಸಚಿವರು ಗೊಂದಲ ಸೃಷ್ಟಿಸುತ್ತಿದ್ದಾರೆ. ವಿದ್ಯಾರ್ಥಿಗಳ ತೊಂದರೆ ನಿಭಾಯಿಸಲು ಸಾಧ್ಯವಾಗದ ಶಿಕ್ಷಣ ಸಚಿವರು/ ಉಪ ಮುಖ್ಯಮಂತ್ರಿಗಳು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು. ಉಪ ಮುಖ್ಯಮಂತ್ರಿ ಅಶ್ವತ್ಥ ನಾರಾಯಣ್ ಅವರು  ಈ ವಿಷಯದಲ್ಲಿ ಮಧ್ಯಪ್ರವೇಶಿಸಿ ಪರೀಕ್ಷೆ ಮುಂದೆ ಹಾಕದಿದ್ದರೆ ಪರೀಕ್ಷೆಯನ್ನು ಬಹಿಷ್ಕಾರ ಹಾಕುವುದಾಗಿ ವಿದ್ಯಾರ್ಥಿಗಳು ತಿಳಿಸಿದ್ದಾರೆ.  ಟಿವಿ9 ಕನ್ನಡ ಡಿಜಿಟಲ್​ ಮೂಲಕ ಈ ಸಮಸ್ಯೆ ಪರಿಹಾರವಾಗಲಿ ಎಂದು ಅವರು ಆಶಿಸಿದರು.

ಇದೇ ವೇಳೆ ಟಿವಿ9 ಕನ್ನಡ ಡಿಜಿಟಲ್ ವಿಟಿಯುವಿನ ವೈಸ್ ಛಾನ್ಸಲರ್ ಕರಿಸಿದ್ದಯ್ಯ ಅವರನ್ನು ಸಂಪರ್ಕಿಸಲು ಪ್ರಯತ್ನಸಿದರೂ, ಅವರು ನಂಬರ್ ಸ್ವಿಚ್ಛಾಫ್ ಆಗಿತ್ತು.

ವಿದ್ಯಾರ್ಥಿಗಳ ಸಮಸ್ಯೆ ನಿವಾರಿಸಲು ಎನ್​ಎಸ್​ಯು ಮತ್ತು ಎಬಿಎಪಿ ಒಂದಾಗಬೇಕು. ವಿದ್ಯಾರ್ಥಿಗಳ ಸಮಸ್ಯೆ ಪರಿಹಾರವೇ ಅಂತಿಮ ಗುರಿಯಾಗಲಿ ಎಂದು ನಿರೂಪಕ ಆನಂದ್ ಬುರಲಿ ಆಶಯ ವ್ಯಕ್ತಪಡಿಸಿದರು.

ಇದನ್ನೂ ಓದಿ: Tv9 Digital Live | ಬಡವರು ನ್ಯಾಯಾಲಯಕ್ಕೆ ಹೋಗಿ ಪ್ರಯೋಜನವಿಲ್ಲ ಎನ್ನುವುದು ಎಷ್ಟು ನಿಜ?

TV9 Digital Live | ದಿಶಾ ರವಿ ಬಂಧನ ಹುಟ್ಟುಹಾಕಿದ ‘ದೇಶದ್ರೋಹ’ದ ಪ್ರಶ್ನೆಗಳು

Published On - 8:02 pm, Thu, 18 February 21

ಉಗ್ರರ ವಿರುದ್ಧ ಕ್ರಮಕೈಗೊಳ್ಳಿ, ಮೋದಿ ಜೊತೆ ನಾವಿದ್ದೇವೆ: ಮುಸ್ಲಿಂ ಮುಖಂಡರು
ಉಗ್ರರ ವಿರುದ್ಧ ಕ್ರಮಕೈಗೊಳ್ಳಿ, ಮೋದಿ ಜೊತೆ ನಾವಿದ್ದೇವೆ: ಮುಸ್ಲಿಂ ಮುಖಂಡರು
‘ಕಿತ್ಗೊಂಡು ತಿನ್ನುವವರಿಗೆ ಹೊಟ್ಟೆ ತುಂಬಲ್ಲ’; ಹಾಡು ಹೇಳಿದ ಸಾಧು ಕೋಕಿಲ
‘ಕಿತ್ಗೊಂಡು ತಿನ್ನುವವರಿಗೆ ಹೊಟ್ಟೆ ತುಂಬಲ್ಲ’; ಹಾಡು ಹೇಳಿದ ಸಾಧು ಕೋಕಿಲ
ಅಮಿತ್ ಶಾ ಆದೇಶ ಕೇಳಿ ಪಾಕಿಸ್ತಾನಿ ಮಹಿಳೆಯ ಅತ್ತೆಗೆ ಹೃದಯಾಘಾತ
ಅಮಿತ್ ಶಾ ಆದೇಶ ಕೇಳಿ ಪಾಕಿಸ್ತಾನಿ ಮಹಿಳೆಯ ಅತ್ತೆಗೆ ಹೃದಯಾಘಾತ
‘ಅವರು ಹೇಡಿಗಳು, ಗಂಡಸ್ತನ ಇದ್ರೆ ಸೈನಿಕರ ವಿರುದ್ಧ ಹೋರಾಡಲಿ’; ಚಂದನ್ ಶೆಟ್ಟ
‘ಅವರು ಹೇಡಿಗಳು, ಗಂಡಸ್ತನ ಇದ್ರೆ ಸೈನಿಕರ ವಿರುದ್ಧ ಹೋರಾಡಲಿ’; ಚಂದನ್ ಶೆಟ್ಟ
ಬರವಣಿಗೆ ನನ್ನ ಶಕ್ತಿಯಾಗಿತ್ತು ಎನ್ನುತ್ತಾರೆ 425 ನೇ ರ‍್ಯಾಂಕ್ ಪಡೆದ ಮೇಘನಾ
ಬರವಣಿಗೆ ನನ್ನ ಶಕ್ತಿಯಾಗಿತ್ತು ಎನ್ನುತ್ತಾರೆ 425 ನೇ ರ‍್ಯಾಂಕ್ ಪಡೆದ ಮೇಘನಾ
ಇಂದಿನಿಂದ ಹುಬ್ಬಳ್ಳಿಯಲ್ಲಿ ಆರಂಭವಾಗಿರುವ 2-ದಿನದ ಎಜುಕೇಶನ್ ಎಕ್ಸ್​ಪೋ
ಇಂದಿನಿಂದ ಹುಬ್ಬಳ್ಳಿಯಲ್ಲಿ ಆರಂಭವಾಗಿರುವ 2-ದಿನದ ಎಜುಕೇಶನ್ ಎಕ್ಸ್​ಪೋ
ಯುದ್ಧದ ಬಗ್ಗೆ ಸಿಎಂ ಸಿದ್ದರಾಮಯ್ಯ ಏನು ಹೇಳಿದ್ದಾರೆ ಗೊತ್ತಿಲ್ಲ: ಲಕ್ಷ್ಮಿ
ಯುದ್ಧದ ಬಗ್ಗೆ ಸಿಎಂ ಸಿದ್ದರಾಮಯ್ಯ ಏನು ಹೇಳಿದ್ದಾರೆ ಗೊತ್ತಿಲ್ಲ: ಲಕ್ಷ್ಮಿ
ಕೋಲಾರದಲ್ಲಿ ಜನಪದ ಗಾಯಕನಿಂದ ನಿರ್ಮಾಣವಾದ ಹೈಟೆಕ್ ​ಬಸ್ ನಿಲ್ದಾಣ
ಕೋಲಾರದಲ್ಲಿ ಜನಪದ ಗಾಯಕನಿಂದ ನಿರ್ಮಾಣವಾದ ಹೈಟೆಕ್ ​ಬಸ್ ನಿಲ್ದಾಣ
ಪಾಕಿಸ್ತಾನಕ್ಕೆ ಅದರದ್ದೇ ಭಾಷೆಯಲ್ಲಿ ಉತ್ತರ ಕೊಡಬೇಕು: ಧ್ರುವ ಸರ್ಜಾ
ಪಾಕಿಸ್ತಾನಕ್ಕೆ ಅದರದ್ದೇ ಭಾಷೆಯಲ್ಲಿ ಉತ್ತರ ಕೊಡಬೇಕು: ಧ್ರುವ ಸರ್ಜಾ
ಪಾಕಿಸ್ತಾನಕ್ಕೆ ಉತ್ತರ ನೀಡುವ ಕೆಲಸ ವರಿಷ್ಠರು ಮಾಡುತ್ತಿದ್ದಾರೆ: ಯದುವೀರ್
ಪಾಕಿಸ್ತಾನಕ್ಕೆ ಉತ್ತರ ನೀಡುವ ಕೆಲಸ ವರಿಷ್ಠರು ಮಾಡುತ್ತಿದ್ದಾರೆ: ಯದುವೀರ್