ವೀಕೆಂಡ್ ಕಾರ್ಮೋಡದ ಮಧ್ಯೆ ಮರೆಮಾಚಿದ ಸಂಕ್ರಾಂತಿ ಸಂಭ್ರಮ, ಬಿಕೋ ಅನ್ನುತ್ತಿವೆ ಮಾರುಕಟ್ಟೆಗಳು

ಇಂದು ಹಬ್ಬದ ಸಂಭ್ರಮದ ನಡುವೆ ರಾಜ್ಯದಲ್ಲಿ ವೀಕೆಂಡ್ ಕರ್ಫ್ಯೂ ಹಿನ್ನೆಲೆಯಲ್ಲಿ ಹಬ್ಬ ವಿದ್ದರೂ ಬೆಂಗಳೂರು ಕೆ.ಆರ್ ಮಾರುಕಟ್ಟೆ ಖಾಲಿ ಹೊಡೆಯುತ್ತಿದೆ. ಮಲ್ಲೇಶ್ವರಂನ ಹೂವಿನ ಮಾರುಕಟ್ಟೆ ಪ್ರತಿ ಹಬ್ಬದಲ್ಲೂ ಜನಜಂಗುಳಿಯಿಂದ ಕೂಡಿರುತ್ತಿತ್ತು. ಆದ್ರೆ ಮಕರ ಸಂಕ್ರಾಂತಿಗೆ ಮಾರ್ಕೆಟ್ ಖಾಲಿ‌ ಖಾಲಿ ಇದೆ.

ವೀಕೆಂಡ್ ಕಾರ್ಮೋಡದ ಮಧ್ಯೆ ಮರೆಮಾಚಿದ ಸಂಕ್ರಾಂತಿ ಸಂಭ್ರಮ, ಬಿಕೋ ಅನ್ನುತ್ತಿವೆ ಮಾರುಕಟ್ಟೆಗಳು
ಮಲ್ಲೇಶ್ವರಂನ ಹೂವಿನ ಮಾರುಕಟ್ಟೆ

ಬೆಂಗಳೂರು: ಇಂದು ಮಕರ ಸಂಕ್ರಾಂತಿ ಹಬ್ಬ. ಮನೆಗಳ ಮುಂದೆ ಬಣ್ಣ ಬಣ್ಣದ ರಂಗೋಲಿಗಳು, ಮನೆ ಬಾಗಿಲಿಗೆ ತೋರಣಗಳು, ಹೂವಿನ ಅಲಂಕಾರ, ಸಿಹಿ ತಿಂಡಿಗಳ ಘಮ, ಮನೆಯಲ್ಲಿ ಸಂತೋಷ- ಸಂಭ್ರಮ. ಸದ್ಯ ರಾಜ್ಯದ ಮನೆಗಳಲ್ಲಿ ಇಂದು ಇಂತಹದೊಂದು ಚಿತ್ರಣ ಕಂಡುಬರುತ್ತದೆ. ಆದ್ರೆ ವಿಪರ್ಯಾಸವೆಂದರೆ ಕಳೆದೆರಡು ವರ್ಷಗಳಿಂದ ಕೊರೊನಾ ಕಾಟದಿಂದ ಹಬ್ಬದ ಸಂಭ್ರಮಕ್ಕೆ ಕರಿ ನೆರಳು ಆವರಿಸಿದೆ. ಜೊತೆಗೆ ವೀಕೆಂಡ್ ಕರ್ಫ್ಯೂಗಳು ಗ್ರಾಹಕರಿಗೆ-ವ್ಯಾಪಾರಿಗಳಿಗೆ ದೊಡ್ಡ ಹೊಡೆತ ಕೊಟ್ಟಿವೆ.

ಇಂದು ಹಬ್ಬದ ಸಂಭ್ರಮದ ನಡುವೆ ರಾಜ್ಯದಲ್ಲಿ ವೀಕೆಂಡ್ ಕರ್ಫ್ಯೂ ಹಿನ್ನೆಲೆಯಲ್ಲಿ ಹಬ್ಬ ವಿದ್ದರೂ ಬೆಂಗಳೂರು ಕೆ.ಆರ್ ಮಾರುಕಟ್ಟೆ ಖಾಲಿ ಹೊಡೆಯುತ್ತಿದೆ. ಮಲ್ಲೇಶ್ವರಂನ ಹೂವಿನ ಮಾರುಕಟ್ಟೆ ಪ್ರತಿ ಹಬ್ಬದಲ್ಲೂ ಜನಜಂಗುಳಿಯಿಂದ ಕೂಡಿರುತ್ತಿತ್ತು. ಆದ್ರೆ ಮಕರ ಸಂಕ್ರಾಂತಿಗೆ ಮಾರ್ಕೆಟ್ ಖಾಲಿ‌ ಖಾಲಿ ಇದೆ. ಬೆಳ್ಳಂ ಬೆಳಗ್ಗೆ ಹೂ-ಹಣ್ಣು ಇಟ್ಟುಕೊಂಡು ವ್ಯಾಪಾರಕ್ಕೆ ಕುಳಿತವರು 10 ರೂ ವ್ಯಾಪಾರವಾಗದಿರುವ ಕಾರಣ ಕಂಗಾಲಾಗಿದ್ದಾರೆ. ಹಬ್ಬದ ದಿನವೂ ವ್ಯಾಪಾರವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇನ್ನು ಕೆ.ಆರ್ ಮಾರುಕಟ್ಟೆ ಸ್ಥಳಾಂತರಿಸಲಾಗಿದೆ. ವಿವಿಪುರ, ಅವೆನ್ಯೂ ರಸ್ತೆ, ಕಲಾಸಿಪಾಳ್ಯಗೆ ವಿಭಜನೆ ಮಾಡಲಾಗಿದೆ. ಹೀಗಾಗಿ ಮಾರ್ಕೆಟ್ನಲ್ಲಿ ಜನ ಸಂಚಾರ ಕಡಿಮೆ ಇದೆ.

ವೀಕೆಂಡ್ ಕರ್ಫ್ಯೂ ಹಿನ್ನೆಲೆ ದೇವಸ್ಥಾನಗಳಿಗೆ ಭಕ್ತರ ನಿರ್ಬಂಧ ಹೇರಲಾಗಿದ್ದು ಸಂಕ್ರಾಂತಿ ಹಬ್ಬವಿದ್ದರೂ ದೇವರ ದರ್ಶನ ಪಡೆಯಲಾಗದೆ ಭಕ್ತರಿಗೆ ನಿರಾಸೆಯಾಗಿದೆ. ಬೆಳಗಿನ ಪೂಜೆ ಮಾಡಿ ದೇವಸ್ಥಾನಗಳಿಗೆ ಅರ್ಚಕರು ಬೀಗ ಹಾಕಿದ್ದಾರೆ. ಹೀಗಾಗಿ ದೇವಸ್ಥಾನದ ಹೊರಗಿನಿಂದಲೇ ಕೆಲ ಭಕ್ತರು ದೇವರಿಗೆ ನಮಸ್ಕರಿಸಿ ಹೊರಡುತ್ತಿದ್ದಾರೆ.

ಮೈಸೂರು, ತುಮಕೂರು, ಕೊಪ್ಪಳ, ಚಿತ್ರದುರ್ಗ, ಹಾಸನ ಸೇರಿದಂತೆ ಕೆಲ ಕಡೆ ವೀಕೆಂಡ್ ಕರ್ಫ್ಯೂ ನಿಯಮ ಉಲ್ಲಂಘಿಸಿ ಜನ ಸೇರಿದ್ದು ಹಬ್ಬಕ್ಕಾಗಿ ಹೂ, ಹಣ್ಣು ಖರೀದಿಯಲ್ಲಿ ತೊಡಗಿದ್ದಾರೆ. ಆದ್ರೆ ವೀಕೆಂಡ್ ಕರ್ಫ್ಯೂ ಜಾರಿ ಹಿನ್ನೆಲೆ ಅನಾವಶ್ಯಕವಾಗಿ ತಿರಗಾಡುವವರಿಗೆ, ಹಾಗೂ ಕೊರೊನಾ ಮರೆತು ಖರೀದಿಗೆ ಗುಂಪು ಸೇರಿರುವವರಿಗೆ ಪೊಲೀಸರು ಎಚ್ಚರಿಕೆ ನೀಡಿ ದಂಡ ವಸೂಲಿ ಮಾಡುತ್ತಿದ್ದಾರೆ. ಕಟ್ಟು ನಿಟ್ಟಿನ ಕ್ರಮಕ್ಕೆ ಮುಂದಾಗಿದ್ದಾರೆ.

ಇನ್ನು ಮತ್ತೊಂದೆಡೆ ವೀಕೆಂಡ್ ಕರ್ಪ್ಯೂ ಹಿನ್ನಲೆ ವ್ಯಾಪಾರವಿಲ್ಲದೆ ಹಣ್ಣು, ಹೂ ವ್ಯಾಪಾರಿಗಳು ಕುಳಿತ ದೃಶ್ಯಗಳು ಕಣ್ಣಿಗೆ ರಾಚುತ್ತಿವೆ. ಮುಂಜಾನೆ ಐದು ಗಂಟೆ ಇಂದ ಕೂತ್ರು ವ್ಯಾಪಾರ ಆಗಿಲ್ಲ ಎಂದು ಅಜ್ಜಿಯೊಬ್ಬರು ತಮ್ಮ ಅಳಲು ತೋಡಿಕೊಂಡಿದ್ದಾರೆ. ಬೆಳಗ್ಗೆಯಿಂದ 100 ರೂ ವ್ಯಾಪಾರ ಆಗಿಲ್ಲ, ನಮಗೆ ವ್ಯಾಪಾರ ಆದ್ರೆ ಊಟ ಇಲ್ಲ ಅಂದ್ರೆ ಇಲ್ಲ ಎಂದು ಕಣ್ಣಿರು ಹಾಕಿದ್ದಾರೆ.

ಇದನ್ನೂ ಓದಿ: Makar Sankranti: ಮಕರ ಸಂಕ್ರಾಂತಿ ಹಬ್ಬದ ಮಹತ್ವ ಮತ್ತು ಈ ವರ್ಷ ಸಂಕ್ರಾಂತಿ ಜನವರಿ 15 ಏಕೆ?

Click on your DTH Provider to Add TV9 Kannada