Green crackers: ಹಸಿರು ಪಟಾಕಿ ಬಳಕೆಗೆ ಮಾತ್ರ ಅವಕಾಶ.. ಏನಿದು ಹಸಿರು ಪಟಾಕಿ? ಇದರ ಪತ್ತೆ ಹೇಗೆ?
ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಹಾವಳಿ ಹಿನ್ನೆಲೆಯಲ್ಲಿ ಸಾರ್ವಜನಿಕರು ಮತ್ತು ಮಕ್ಕಳ ಆರೋಗ್ಯ ಹಿತದೃಷ್ಟಿಯಿಂದ ರಾಜ್ಯ ಸರ್ಕಾರ ಪಟಾಕಿ ಬ್ಯಾನ್ ಮಾಡಿದೆ. ಆದರೆ ಪಟಾಕಿ ಪ್ರಿಯರಿಗೆ ಗುಡ್ ನ್ಯೂಸ್ ಕೊಟ್ಟಿದೆ. ಪಟಾಕಿ ಬ್ಯಾನ್ ಆದ್ರೂ ಪರಿಸರ ಸ್ನೇಹಿ ‘ಹಸಿರು ಪಟಾಕಿ’ ಬಳಕೆಗೆ ಅವಕಾಶ ನೀಡಿದೆ. ಗ್ರೀನ್ ಪಟಾಕಿ ಮಾತ್ರ ಮಾರಟ ಮಾಡುವಂತೆ ಆದೇಶ ಮಾಡಲಾಗಿದೆ. ಆದ್ರೆ ಬೆಂಗಳೂರಿನಲ್ಲಿ ಬಹಳಷ್ಟು ಪ್ರಮಾಣದಲ್ಲಿ ಹಸಿರು ಪಟಾಕಿ ಲಭ್ಯವೇ ಇಲ್ಲ. ಸಾರ್ವಜನಿಕರಿಗೆ ಹಸಿರು ಪಟಾಕಿಗಳ ಬಗ್ಗೆ ಜಾಗೃತಿಯೂ ಇಲ್ಲ. ಹಸಿರು ಪಟಾಕಿ ಪತ್ತೆ […]

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಹಾವಳಿ ಹಿನ್ನೆಲೆಯಲ್ಲಿ ಸಾರ್ವಜನಿಕರು ಮತ್ತು ಮಕ್ಕಳ ಆರೋಗ್ಯ ಹಿತದೃಷ್ಟಿಯಿಂದ ರಾಜ್ಯ ಸರ್ಕಾರ ಪಟಾಕಿ ಬ್ಯಾನ್ ಮಾಡಿದೆ. ಆದರೆ ಪಟಾಕಿ ಪ್ರಿಯರಿಗೆ ಗುಡ್ ನ್ಯೂಸ್ ಕೊಟ್ಟಿದೆ. ಪಟಾಕಿ ಬ್ಯಾನ್ ಆದ್ರೂ ಪರಿಸರ ಸ್ನೇಹಿ ‘ಹಸಿರು ಪಟಾಕಿ’ ಬಳಕೆಗೆ ಅವಕಾಶ ನೀಡಿದೆ.
ಗ್ರೀನ್ ಪಟಾಕಿ ಮಾತ್ರ ಮಾರಟ ಮಾಡುವಂತೆ ಆದೇಶ ಮಾಡಲಾಗಿದೆ. ಆದ್ರೆ ಬೆಂಗಳೂರಿನಲ್ಲಿ ಬಹಳಷ್ಟು ಪ್ರಮಾಣದಲ್ಲಿ ಹಸಿರು ಪಟಾಕಿ ಲಭ್ಯವೇ ಇಲ್ಲ. ಸಾರ್ವಜನಿಕರಿಗೆ ಹಸಿರು ಪಟಾಕಿಗಳ ಬಗ್ಗೆ ಜಾಗೃತಿಯೂ ಇಲ್ಲ. ಹಸಿರು ಪಟಾಕಿ ಪತ್ತೆ ಮಾಡೊದು ಕೂಡಾ ಸಾರ್ವಜನಿಕರಿಗೆ ಗೊಂದಲ ಹೀಗಾಗಿ ಈ ಬಾರಿ ದೀಪಾವಳಿಗೆ ಹಸಿರು ಪಟಾಕಿ ಖರೀದಿಸುವ ಮುನ್ನ ಈ ವರದಿ ಓದಿ..
ಏನಿದು ಹಸಿರು ಪಟಾಕಿ:
ಸಾಮಾನ್ಯ ಪಟಾಕಿಗಳಲ್ಲಿ ನೈಟ್ರೇಟ್, ಬೇರಿಯಂ ಕೆಮಿಕಲ್ ಬಳಸಲಾಗಿರುತ್ತೆ. ಈ ರಾಸಾಯನಿಕಗಳು ಪರಿಸರಕ್ಕೆ ಹಾನಿ ಮಾಡುತ್ತವೆ. ಆದರೆ ಹಸಿರು ಪಟಾಕಿಗಳಲ್ಲಿ ಈ ರಾಸಾಯನಿಕಗಳು ಇರುವುದಿಲ್ಲ. ಹಸಿರು ಪಟಾಕಿಗಳು ಸ್ಫೋಟಿಸಿದಾಗ ನೀರಿನ ಆವಿ, ಮತ್ತು ಹೊಗೆ ಹೊರ ಹಾಕುವುದಿಲ್ಲ. ಸಾಮಾನ್ಯ ಪಟಾಕಿಗಿಂತಲೂ ಹಸಿರು ಪಟಾಕಿಗಳು ಸುರಕ್ಷಿತ ಏಕೆಂದರೆ ಅದರಲ್ಲಿ ಅಲ್ಯೂಮಿನಿಯಂ ಮತ್ತು ಥರ್ಮೈಟ್ ಇರುತ್ತದೆ. ಹೀಗಾಗಿ ಹಸಿರು ಪಟಾಕಿ ಅಷ್ಟಾಗಿ ಮಾಲಿನ್ಯ ಉಂಟು ಮಾಡುವುದಿಲ್ಲ. ಕಡಿಮೆ ಅಪಾಯಕಾರಿ ಮತ್ತು ಹೆಚ್ಚು ಹಾನಿಕಾರಕವಲ್ಲದ ರಾಸಾಯನಿಕಗಳಿಂದ ತಯಾರಿಸಲಾಗಿರುತ್ತೆ. ಹಸಿರು ಪಟಾಕಿಗಳನ್ನ ಲ್ಯಾಬ್ನಲ್ಲಿ ತಯಾರು ಮಾಡಲಾಗುತ್ತೆ. ತೀವ್ರ ಮುತುವರ್ಜಿ ವಹಿಸಿ ಪರಿಸರ ಪಟಾಕಿ ತಯಾರಿಸುತ್ತಾರೆ. ಹೀಗಾಗಿ ‘ಹಸಿರು ಪಟಾಕಿ’ಗಳಿಂದ ಅಪಾಯ ತುಂಬಾ ಕಡಿಮೆ.
ಹಸಿರು ಪಟಾಕಿ ಪತ್ತೆ ಹೇಗೆ: -ಹಸಿರು ಪಟಾಕಿಗಳ ಪತ್ತೆಗಾಗಿ ಅವುಗಳ ಮೇಲೆ ಗ್ರೀನ್ ಲೋಗೋ ಅಳವಡಿಸಲಾಗಿರುತ್ತೆ. – ‘ಗೋ ಗ್ರೀನ್’ ಅಂತಾ ಪಟಾಕಿ ಮೇಲೆ ಬರೆಯಲಾಗಿರುತ್ತದೆ -ಪಟಾಕಿಯ ಮೇಲೆ ಕೋಡಿಂಗ್ ವ್ಯವಸ್ಥೆ ಅಳವಡಿಸಿರುತ್ತಾರೆ -ಗ್ರೀನ್ ಮಾರ್ಕಿಂಗ್ ವ್ಯವಸ್ಥೆ ಇರುತ್ತೆ -ಹಸಿರು ಪಟಾಕಿಗಳ ಬಾಕ್ಸ್ ಮೇಲೆ ಗ್ರೀನ್ ಕ್ರ್ಯಾಕಲ್ಸ್ ಅಂತಾ ದೊಡ್ಡದಾಗಿ ನಮೋದಿಸಲಾಗಿರುತ್ತೆ -ನಾರ್ಮಲ್ ಪಟಾಕಿ ಹಾಗೂ ಗ್ರೀನ್ ಪಟಾಕಿಗಳನ್ನ ನೋಡಿದ ತಕ್ಷಣವೇ ಗುರುತಿಸಬಹುದು. ಹೀಗಾಗಿ ಹಸಿರು ಪಟಾಕಿಗಳನ್ನು ಪತ್ತೆ ಮಾಡುವುದು ಸುಲಭ
ಹಸಿರು ಪಟಾಕಿಗಳಿಂದ ಲಾಭ ಏನು?
ಸಾಮಾನ್ಯ ಪಟಾಕಿಗಿಂತ ಹಸಿರು ಪಟಾಕಿಗಳಿಂದ ಅಪಾಯ ಕಮ್ಮಿ. ಶಬ್ದ ಮಾಲಿನ್ಯ ಹಾಗೂ ವಾಯು ಮಾಲಿನ್ಯವೂ ಸಾಕಷ್ಟು ಕಡಿಮೆಯಾಗಿರುತ್ತೆ. ಮುಖ್ಯವಾಗಿ ಅಪಾಯಕಾರಿ ಕೆಮಿಕಲ್ಗಳನ್ನು ಹಾಕಿರುವುದಿಲ್ಲ. ಪರಿಸರಕ್ಕೆ ಕಡಿಮೆ ಮಟ್ಟದಲ್ಲಿ ಮಾಲಿನ್ಯವಾಗುತ್ತೆ. ಆದರೆ ಬೆಂಗಳೂರಲ್ಲಿ ಹಸಿರು ಪಟಾಕಿಗೆ ಕೊರತೆ ಉಂಟಾಗಿದೆ. ರಾಜ್ಯ ಸರ್ಕಾರದ ಏಕಾಏಕಿ ನಿರ್ಧಾರದಿಂದಾಗಿ ಭಾರಿ ಗೊಂದಲ ನಿರ್ಮಾಣವಾಗಿದೆ. ಹಸಿರು ಪಟಾಕಿಗಾಗಿ ಬೆಂಗಳೂರಿಗರು ತಮಿಳುನಾಡಿನತ್ತ ಹೊರಟಿದ್ದಾರೆ. ಕರ್ನಾಟಕದ ಗಡಿ ಅತ್ತಿಬೆಲೆಗೆ ಪಟಾಕಿ ಪ್ರಿಯರು ತೆರಳುತ್ತಿದ್ದಾರೆ.
Published On - 8:35 am, Sun, 8 November 20