AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒನ್ ವೇ ಓಡಾಟ; ಲಾಕ್​ಡೌನ್ ವಿಸ್ತರಣೆ ಹಿನ್ನೆಲೆ ಮೈಸೂರು ರಸ್ತೆಯಲ್ಲಿ ವೈಟ್ ಟಾಪಿಂಗ್ ಕಾಮಗಾರಿ ಚುರುಕು

ಮೈಸೂರು ರಸ್ತೆಯಲ್ಲಿ ವೈಟ್ ಟಾಪಿಂಗ್ ಕಾಮಗಾರಿ ಆರಂಭವಾದ ಹಿನ್ನೆಲೆಯಲ್ಲಿ ಓನ್ ವೇ ಓಡಾಟಕ್ಕೆ ಅವಕಾಶ ಮಾಡಿಕೊಡಲಾಗಿದೆ. ಲಾಕ್​ಡೌನ್​ ಇದ್ದರು ಬೆಳ್ಳಂಬೆಳಗ್ಗೆ ಹೆಚ್ಚಾಗಿರುವ ವಾಹನ ದಟ್ಟಣೆಯ ಪರಿಣಾಮ ವೈಟ್ ಟಾಪಿಂಗ್ ಕೆಲಸವಾಗುತ್ತಿರುವ ಮೈಸೂರು ರಸ್ತೆಯಲ್ಲಿ ಒನ್ ವೇ ಓಡಾಟಕ್ಕೆ ಅನುವುಮಾಡಿಕೊಡಲಾಗಿದೆ.

ಒನ್ ವೇ ಓಡಾಟ; ಲಾಕ್​ಡೌನ್ ವಿಸ್ತರಣೆ ಹಿನ್ನೆಲೆ ಮೈಸೂರು ರಸ್ತೆಯಲ್ಲಿ ವೈಟ್ ಟಾಪಿಂಗ್ ಕಾಮಗಾರಿ ಚುರುಕು
ಪ್ರಾತಿನಿಧಿಕ ಚಿತ್ರ
preethi shettigar
|

Updated on: May 25, 2021 | 9:24 AM

Share

ಬೆಂಗಳೂರು: ಕೊರೊನಾ ಎರಡನೇ ಅಲೆ ತೀವ್ರತೆಯ ಹಿನ್ನೆಲೆಯಲ್ಲಿ ಪರಿಸ್ಥಿತಿಯನ್ನು ಹತೋಟಿಗೆ ತರಲು ರಾಜ್ಯ ಸರ್ಕಾರ ಲಾಕ್​ಡೌನ್ ಅನ್ನು ವಿಸ್ತರಣೆ ಮಾಡಿದ್ದು, ಜೂನ್ 7ರವರೆಗೆ ಲಾಕ್​ಡೌನ್ ಘೋಷಿಸಿದೆ. ಈ ನಿಟ್ಟಿನಲ್ಲಿ ಈಗ ಬೆಂಗಳೂರಿನ ರಸ್ತೆಗಳಲ್ಲಿ ವೈಟ್ ಟಾಪಿಂಗ್ ಕಾಮಗಾರಿ ಚುರುಕುಗೊಂಡಿದೆ. ಕೆ.ಆರ್.ಮಾರ್ಕೆಟ್ ಫ್ಲೈ ಓವರ್ ಕೊನೆಯಿಂದ ಈ ಕಾಮಗಾರಿ ಆರಂಭವಾಗಿದೆ.

ಮೈಸೂರು ರಸ್ತೆಯಲ್ಲಿ ವೈಟ್ ಟಾಪಿಂಗ್ ಕಾಮಗಾರಿ ಆರಂಭವಾದ ಹಿನ್ನೆಲೆಯಲ್ಲಿ ಓನ್ ವೇ ಓಡಾಟಕ್ಕೆ ಅವಕಾಶ ಮಾಡಿಕೊಡಲಾಗಿದೆ. ಲಾಕ್​ಡೌನ್​ ಇದ್ದರು ಬೆಳ್ಳಂಬೆಳಗ್ಗೆ ಹೆಚ್ಚಾಗಿರುವ ವಾಹನ ದಟ್ಟಣೆಯ ಪರಿಣಾಮ ವೈಟ್ ಟಾಪಿಂಗ್ ಕೆಲಸವಾಗುತ್ತಿರುವ ಮೈಸೂರು ರಸ್ತೆಯಲ್ಲಿ ಒನ್ ವೇ ಓಡಾಟಕ್ಕೆ ಅನುವುಮಾಡಿಕೊಡಲಾಗಿದೆ.

ಉಡುಪಿಯಲ್ಲಿ ರಸ್ತೆ ಕಾಮಗಾರಿ ವಿರುದ್ಧ ಸಿಡಿದೆದ್ದ ಜನತೆ ಊರಿಗೊಂದು ರಸ್ತೆ ಮಾಡಿಕೊಡಿ, ಯಾರಿಗಾದರೂ ಅನಾರೋಗ್ಯ ಆಯ್ತು ಎಂದರೆ ರೋಗಿಯನ್ನು ಸಾಗಿಸುವುದಕ್ಕೂ ಸಾಧ್ಯವಿಲ್ಲ ಎಂದು ಹಳ್ಳಿಗಳಲ್ಲಿ ಲಕ್ಷಾಂತರ ಜನ ಹೊಸ ರಸ್ತೆಗಾಗಿ ಬಕಪಕ್ಷಿಗಳಂತೆ ಕಾಯುತ್ತಿದ್ದಾರೆ. ಆದರೆ ಉಡುಪಿಯಲ್ಲಿ ಸುಸ್ಥಿತಿಯಲ್ಲಿರುವ ರಸ್ತೆಗೆ ಮತ್ತೆ ತೇಪೆ ಹಾಕಲಾಗುತ್ತಿದೆ. ಇದಕ್ಕಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಲು ಲೋಕೋಪಯೋಗಿ ಇಲಾಖೆ ಸಿದ್ಧತೆ ಮಾಡಿಕೊಂಡಿದೆ. ರಸ್ತೆ ಇಲ್ಲದ ಊರುಗಳಲ್ಲಿ, ಹದಗೆಟ್ಟಿರುವ ಪ್ರದೇಶಗಳಲ್ಲಿ ಅಭಿವೃದ್ಧಿ ಕೈಗೊಳ್ಳುವ ಬದಲು ಚೆನ್ನಾಗಿ ಇರುವ ರಸ್ತೆಗೆ ಮತ್ತೆ ಹಣ ಸುರಿದು ದುಂದು ವೆಚ್ಚ ಮಾಡುತ್ತಿರುವ ಇಲಾಖೆಯ ನಡೆ ವಿರುದ್ಧ ಪ್ರಜ್ಞಾವಂತ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.

ಮಳೆಗಾಲ ಶುರುವಾಗುವುದಕ್ಕಿಂತ ಮುಂಚೆ ಒಳ್ಳೆ ರಸ್ತೆ ಮಾಡಬೇಕು ಎಂದು ಜನ ಬೇಡಿಕೆ ಇಡುವುದು, ಓಡಾಡಲು ಆಗುತ್ತಿಲ್ಲ ರಸ್ತೆ ಮಾಡಿಕೊಡಿ ಎಂದು ಪರಿಪರಿಯಾಗಿ ಆಗ್ರಹಿಸುವುದು ಆ ಆಗ್ರಹಕ್ಕೆ ಎರಡು ಮೂರು ವರ್ಷ ಆಯಸಸು ಆಗಿ ಕೊನೆಗೆ ರಸ್ತೆಯೇ ಇಲ್ಲ ಎನ್ನುವಂತಹ ದುಸ್ಥಿತಿ ಎದುರಾದ ಮೇಲೆ ಸರ್ಕಾರದ ವತಿಯಿಂದ ಹೊಸ ರಸ್ತೆ ಮಂಜೂರು ಆಗುವುದನ್ನು ಕೇಳಿದ್ದೇವೆ, ಆದರೆ ಇಲ್ಲಿ ಯಾರ ಆಗ್ರಹವೂ ಇಲ್ಲದೆ ರಸ್ತೆ ಕಾಮಗಾರಿಯೊಂದನ್ನು ಲೋಕೋಪಯೋಗಿ ಇಲಾಖೆ ಕೈಗೆತ್ತಿಕೊಂಡಿದೆ. ರಸ್ತೆ ಮಾಡಿಕೊಡಿ ಎಂದು ಬೇಡಿಕೆ ಇಡಬೇಕಾದ ಜನರೇ ನೀವು ರಸ್ತೆ ಮಾಡಿದ್ದು ಸಾಕು ಎಂದು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ.

ಕಾಪು ಕ್ಷೇತ್ರದ ಶಿರ್ವ- ಕಟಪಾಡಿ ರಸ್ತೆಯನ್ನು ಮೂರು ವರ್ಷಗಳ ಹಿಂದಷ್ಟೇ ಏಳು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿತ್ತು. ಇದೀಗ ಇದೇ ರಸ್ತೆಗೆ ಕಾಂಕ್ರೀಟ್ ತೇಪೆ ಹಾಕಲು ರಸ್ತೆ ಅಗೆಯಲಾಗುತ್ತಿದೆ. ಅತ್ಯುತ್ತಮ ಸ್ಥಿತಿಯಲ್ಲಿರುವ ರಸ್ತೆಯನ್ನು ಕೆಡವಿ ಸುಮಾರು ಎಂಟು ಮೀಟರ್ ಅಗಲ 140 ಮೀಟರ್ ಉದ್ದದ ಕಾಂಕ್ರಿಟೀಕರಣಕ್ಕೆ ಈಗಾಗಲೇ ಶಾಸಕರು ಗುದ್ದಲಿ ಪೂಜೆಯನ್ನು ಮಾಡಿದ್ದಾರೆ.

ತರಾತುರಿಯಲ್ಲಿ ಕಾಮಗಾರಿ ನಡೆಸಲು ಸಿದ್ಧತೆಗಳು ಕೂಡಾ ನಡೆಯುತ್ತಿವೆ. ಮಳೆಹಾನಿ ನಿರ್ವಹಣೆಗೆ ಬಂದಿರುವ ಅನುದಾನವನ್ನು ವ್ಯಯಿಸಲೇ ಬೇಕು ಎಂಬ ಒಂದೇ ಉದ್ದೇಶದಿಂದ ಸಮರ್ಪಕವಾಗಿರುವ ರಸ್ತೆಯನ್ನು ಹಾಳುಗೆಡವಿ ಪುನಃ ಸರಿಪಡಿಸಲಾಗುತ್ತದೆ. ಈ ರೀತಿಯ ಅನಾವಶ್ಯಕ ಕಾಮಗಾರಿ ತರವಲ್ಲ. ಕೋಟ್ಯಾಂತರ ರೂಪಾಯಿ ಸುರಿದರೂ ಈಗ ಮತ್ತೆ 20 ಲಕ್ಷದಷ್ಟು ಬಾರಿ ಮೊತ್ತದಲ್ಲಿ ಈ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಎಂದು ಸ್ಥಳೀಯರಾದ ರಮೇಶ್ ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ

ಕೋಟೆನಾಡಿನಲ್ಲಿ ಮುಗಿಯದ ರಸ್ತೆ ಕಾಮಗಾರಿ: ಹೆಚ್ಚಿನ ಧೂಳಿನಿಂದ ಸೃಷ್ಟಿಯಾಯ್ತು ಕೊರೊನಾ ಆತಂಕ

ಉತ್ತರ ಕರ್ನಾಟಕ ಸೇರಿದಂತೆ ಅತಿವೃಷ್ಟಿಯಿಂದ ಹಾನಿಗೀಡಾದ ಅಷ್ಟೂ ರಸ್ತೆಗಳ ನಿರ್ಮಾಣ ಪೂರ್ಣ: ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ