ಯಾದಗಿರಿಯಲ್ಲಿ ಕೋಳಿ ಪಂದ್ಯ ನಡೆಸುತ್ತಿದ್ದ ಐವರ ಬಂಧನ

ಯಾದಗಿರಿ ಜಿಲ್ಲೆಯಲ್ಲಿ ಕೋಳಿ ಪಂದ್ರ ನಡೆಯುತ್ತಿದ್ದ ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಪಂದ್ಯದಲ್ಲಿ ತೊಡಗಿದ್ದ ಐವರನ್ನು ಬಂಧಿಸಲಾಗಿದೆ.

ಯಾದಗಿರಿಯಲ್ಲಿ ಕೋಳಿ ಪಂದ್ಯ ನಡೆಸುತ್ತಿದ್ದ ಐವರ ಬಂಧನ
ಯಾದಗಿರಿಯಲ್ಲಿ ಕೋಳಿ ಪಂದ್ಯ ನಡೆಸುತ್ತಿದ್ದ ಐವರ ಬಂಧನ

ಯಾದಗಿರಿ: ಜಿಲ್ಲೆಯಲ್ಲಿ ಕೋಳಿ ಪಂದ್ಯ ನಡೆಯುತ್ತಿದ್ದ ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಪಂದ್ಯದಲ್ಲಿ ತೊಡಗಿದ್ದ ಐವರನ್ನು ಬಂಧಿಸಲಾಗಿದೆ. ಜಿಲ್ಲೆಯ ಸುರಪುರ ತಾಲೂಕಿನ ಕರ್ನಾಳ್ ಗ್ರಾಮದ ಹೊರ ವಲಯದಲ್ಲಿ ಕೋಳಿ ಪಂದ್ಯ ನಡೆಯುತ್ತಿತ್ತು. ಸುರಪುರ ಡಿವೈಎಸ್ಪಿ ವೆಂಕಟೇಶ್ ಉಗಿಬಂಡಿ ನೇತೃತ್ವದಲ್ಲಿ ದಾಳಿ ನಡೆದಿದೆ. ಐವರು ಜತೆ ಕೋಳಿಯನ್ನೂ ಸಹ ವಶಕ್ಕೆ ಪಡೆಯಲಾಗಿದೆ. ಸುರಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಯಾದಗಿರಿಯಲ್ಲಿ ಕೋಳಿ ಪಂದ್ಯ ನಡೆಸುತ್ತಿದ್ದ 30 ಮಂದಿ ಅರೆಸ್ಟ್, 22 ಹುಂಜ ಜಪ್ತಿ
ಈ ಹಿಂದೆ ಕಳೆದ ಮಾರ್ಚ್​ ತಿಂಗಳಿನಲ್ಲಷ್ಟೇ ಕೋಳಿ ಪಂದ್ಯ ನಡೆಯುತ್ತಿದ್ದ ಅಡ್ಡೆ ಮೇಲೆ ಪೊಲೀಸರ ದಾಳಿ ನಡೆಸಿದ್ದರು. ಸುರಪುರ ಡಿವೈಎಸ್ಪಿ ವೆಂಕಟೇಶ್ ಉಗಿಬಂಡಿ ನೇತೃತ್ವದಲ್ಲಿ ಈ ದಾಳಿ ನಡೆದಿತ್ತು. ಜಿಲ್ಲೆಯ ಹುಣಸಗಿ ತಾಲೂಕಿನ ರಾಯಗೇರಿ ಗ್ರಾಮದಲ್ಲಿ ಕೋಳಿ ಪಂದ್ಯ ಆಡುತ್ತಿದ್ದ 30 ಜನರನ್ನು ಪೊಲೀಸರು ಸೆರೆ ಹಿಡಿದಿದ್ದರು. 22 ಹುಂಜ, 15ಕ್ಕೂ ಹೆಚ್ಚು ಮೊಬೈಲ್, ₹32 ಸಾವಿರ ಜಪ್ತಿ ಮಾಡಲಾಗಿತ್ತು. ಕೊಡೆಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಮೈಸೂರು: ನೀರು ಕುಡಿಯುವ ವೇಳೆ ನಾಲೆಗೆ ಬಿದ್ದು ಜಿಂಕೆ ಸಾವು
ನೀರು ಕುಡಿಯುವ ವೇಳೆ ನಾಲೆಗೆ ಬಿದ್ದು ಜಿಂಕೆ ಸಾವಿಗೀಡಾದ ಘಟನೆ ನಂಜನಗೂಡು ತಾಲ್ಲೂಕು ಕಲ್ಕುಂದ ಗ್ರಾಮದಲ್ಲಿ ನಡೆದಿದೆ. ಬಾಯಿರಿಕೆಯಿಂದಾಗಿ ಕುಡಿಯುವ ನೀರನ್ನು ಅರಸಿ ಕಬಿನಿ ಬಲದಂಡೆ ಬಳಿ ಬಂದಿತ್ತು. ಈ ವೇಳೆ ಬಿದ್ದು ಸಾವಿಗೀಡಾಗಿದೆ. ಸುಮಾರು 5 ವರ್ಷದ ಗಂಡು ಜಿಂಕೆ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ಪರಿಶೀಲನೆ ನಡೆದಿದ್ದಾರೆ.

ಇದನ್ನೂ ಓದಿ:

Cockfight: ಯಾದಗಿರಿಯಲ್ಲಿ ಕೋಳಿ ಪಂದ್ಯ ನಡೆಸುತ್ತಿದ್ದ 30 ಮಂದಿ ಅರೆಸ್ಟ್, 22 ಹುಂಜ ಜಪ್ತಿ