ಆ ರೈತ ಪ್ರತಿ ವರ್ಷ ಸಾಂಪ್ರದಾಯಿಕ ಬೆಳೆಗಳಾದ ಹತ್ತಿ, ತೊಗರಿ ಬೆಳೆಗಳನ್ನ ಬೆಳೆಯುತ್ತಿದ್ದ. ಆದ್ರೆ ಮಳೆ ಬಂದ್ರೆ ಬೆಳೆ, ಇಲ್ಲ ಅಂದ್ರೆ ಖಾಲಿ ಕೈಯಲ್ಲಿ ಕುಳಿತುಕೊಳ್ಳಬೇಕಾದ ಪರಸ್ಥಿತಿ ಇತ್ತು. ಸಾಂಪ್ರದಾಯಿಕ ಬೆಳೆಗಳನ್ನೆ ಬೆಳೆಯುತ್ತಿದ್ದ ರೈತ ಈಗ ತೋಟಗಾರಿಕೆ ಬೆಳೆಗಳನ್ನ ಬೆಳೆಯಲು ಮುಂದಾಗಿ ಯಶ ಕಂಡಿದ್ದಾರೆ. ಹಾಗಾದ್ರೆ ರೈತ ತನ್ನ ಜಮೀನಿನಲ್ಲಿ ಬೆಳೆದಂತಹ ಬೆಳೆಗಳಾದರೂ ಯಾವುವು ಅಂತೀರಾ? ಈ ಸಕ್ಸಸ್ ಸ್ಟೋರಿ (Success Story) ನೋಡಿ. ಸಾಂಪ್ರದಾಯಿಕ ಬೆಳೆಗಳನ್ನ ಕೈಬಿಟ್ಟು ಹೊಸ ಮಾದರಿಯ ಕೃಷಿಗೆ (Progressive Farmer) ಕೈ ಹಾಕಿದ ರೈತ.. 6 ಎಕರೆಯಲ್ಲಿ ನಾನಾ ರೀತಿಯ ತೋಟಗಾರಿಕೆ ಬೆಳೆ ಬೆಳೆಯುತ್ತಿದ್ದಾನೆ. ನಿತ್ಯ ಸಾವಿರಕ್ಕೂ ಅಧಿಕ ಲಾಭ ಗಳಿಸುತ್ತಿದ್ದಾರೆ. ಪೇರಲ, ಸಪೋಟ ಸೇರಿದಂತೆ ಅನೇಕ ಹಣ್ಣಗಳನ್ನ ಬೆಳೆದಿದ್ದಾರೆ ರೈತ. ಯಸ್, ಈ ದೃಶ್ಯಗಳು ಕಂಡು ಬರುವುದು ಯಾದಗಿರಿ (Yadagiri) ಜಿಲ್ಲೆಯ ಮುಂಡರಗಿ (Mundargi) ಗ್ರಾಮದಲ್ಲಿ.. ಹೌದು ಯಾದಗಿರಿ ನಗರದ ನಿವಾಸಿ ರೈತ ಮರೆಪ್ಪ ತನ್ನ ಆರು ಎಕರೆ ಜಮೀನಿನಲ್ಲಿ ಪ್ರತಿ ವರ್ಷ ಸಾಂಪ್ರದಾಯಿಕ ಬೆಳೆಗಳಾದ ಹತ್ತಿ ಹಾಗೂ ತೊಗರಿ ಬೆಳೆಗಳನ್ನ ಬೆಳೆಯುತ್ತಿದ್ದ.
ಆದ್ರೆ ಈ ಬೆಳೆಗಳಿಂದ ನಿರೀಕ್ಷಿಸಿದಷ್ಟು ಲಾಭ ಸಿಗ್ತಾಯಿರಲಿಲ್ಲ.. ಹೀಗಾಗಿ ತನ್ನ ಆರು ಎಕರೆ ಜಮೀನಿನಲ್ಲಿ ಒಂದು ಬೋರ್ ವೆಲ್ ಕೊರೆಯಿಸಿ ತೋಟಗಾರಿಕೆ ಬೆಳೆಗಳನ್ನ ಬೆಳೆಯಲು ಮುಂದಾಗಿದ್ದಾರೆ. ಕಳೆದ ನಾಲ್ಕೈದು ವರ್ಷಗಳಿಂದ ಇಡೀ ಆರು ಎಕರೆ ಜಮೀನನ್ನ ತೋಟವಾಗಿ ಬದಲಿಸಿ ಬಿಟ್ಟಿದ್ದಾನೆ. ಇದೇ ಆರು ಎಕರೆಯಲ್ಲಿ ಸಮಗ್ರ ಕೃಷಿ ಮಾಡುವ ಮೂಲಕ ಸಾಕಷ್ಟು ಲಾಭ ಪಡೆಯುತ್ತಿದ್ದಾನೆ.
ನಾನಾ ರೀತಿಯ ಹಣ್ಣುಗಳನ್ನ ಬೆಳೆದಿರುವ ಮರೆಪ್ಪ ನಿತ್ಯ ಸಾವಿರಾರು ರೂಪಾಯಿ ಲಾಭವನ್ನ ಪಡೆಯುತ್ತಿದ್ದಾರೆ. ತನ್ನ ಜಮೀನಿನಲ್ಲಿ ಸಪೋಟಾ ಹಾಗೂ ಪೇರಲ ಹಣ್ಣುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಹಾಕಿದ್ದಾರೆ. ಮೂರು ವರ್ಷಗಳ ಹಿಂದೆ ಆಂಧ್ರ ಪ್ರದೇಶದ ಸಂಗಾರೆಡ್ಡಿ ಜಿಲ್ಲೆಯಿಂದ ಸುಮಾರು 300 ಕ್ಕೂ ಅಧಿಕ ಸಪೋಟಾ ಗಿಡಗಳನ್ನ ತಂದು ಹಾಕಿದ್ದಾರೆ.
ಇನ್ನು ಬೆಂಗಳೂರು ಹಾಗೂ ಯಾದಗಿರಿಯಿಂದ ಪೇರಲ ಗಿಡಗಳನ್ನ ತಂದು ಹಾಕಿದ್ದಾರೆ. ಕಳೆದ ವರ್ಷ ಈ ಎರಡು ಬೆಳೆಗಳಿಂದ ಉತ್ತಮ ಫಸಲು ಬಂದಿದೆ. ಆದ್ರೆ ಆರಂಭಿಕ ವರ್ಷ ಆಗಿದ್ದರಿಂದ ಅಷ್ಟೊಂದು ಲಾಭ ಬಂದಿಲ್ಲ. ಅದೇ ಈ ವರ್ಷ ಎರಡು ಬೆಳೆಗಳಿಂದ ಸುಮಾರು ತಲಾ 1 ಲಕ್ಷ ರೂ ಲಾಭ ಸಿಗುವ ನಿರೀಕ್ಷೆಯಲ್ಲಿದ್ದಾರೆ ರೈತ ಮರೆಪ್ಪ.
ಇನ್ನು ಈ ಗಿಡಗಳು ಈ ಬಾರಿ ಹೆಚ್ಚು ಲಾಭ ಕೊಡುವ ನಿರೀಕ್ಷೆಯನ್ನ ರೈತ ಮರೆಪ್ಪ ಇಟ್ಟುಕೊಂಡಿದ್ದಾರೆ. ಇದರ ಜೊತೆಗೆ ಇಡೀ ಜಮೀನಿನಲ್ಲಿ ಪೇರಲ ಮತ್ತು ಸಪೋಟಾ ಗಿಡಗಳ ಪಕ್ಕದಲ್ಲಿ ಕರಿಬೇವು ಗಿಡಗಳನ್ನೂ ಸಹ ಹಾಕಿದ್ದಾರೆ. ಬೋರ್ವೆಲ್ ನಿಂದ ಸಾಕಷ್ಟು ನೀರು ಬರ್ತಾಯಿದ್ದ ಕಾರಣಕ್ಕೆ ದಿನಾ ನೀರು ಬಿಟ್ಟು ಬೆಳೆಗಳನ್ನ ಬೆಳೆಯುತ್ತಿದ್ದಾನೆ. ಇನ್ನು ಬೇವು ಗಿಡಳಿಂದಲೇ ನಿತ್ಯ ಸಾವಿರಾರು ರೂಪಾಯಿ ಹಣ ಸಂಪಾದನೆ ಮಾಡುತ್ತಿದ್ದಾರೆ ರೈತ ಮರೆಪ್ಪ.
ಇದರ ಜೊತೆಗೆ ಮೂಸಂಬಿ ಗಿಡಗಳನ್ನು ಸಹ ರೈತರ ಮರೆಪ್ಪ ತನ್ನ ತೋಟದಲ್ಲಿ ಹಾಕಿದ್ದಾರೆ. ಇದರಿಂದಲೂ ಸಾಕಷ್ಟು ಲಾಭ ಸಿಗ್ತಾಯಿದೆ. ಇದರ ಜೊತೆಗೆ ಈ ಮಣ್ಣಿಗೆ ಹೊಂದಿಕೊಳ್ಳುತ್ತವೋ, ಇಲ್ಲವೋ ಅಂತಾ ಪರೀಕ್ಷೆ ಮಾಡುವ ಉದ್ದೇಶದಿಂದ ಬೇರೆ ಬೇರೆ ರೀತಿಯ ಹೊಸ ಗಿಡಗಳನ್ನ ಹಾಕಿದ್ದಾರೆ. ಈ ಭಾಗದ ಜನ ನೋಡದೆ ಇರುವಂತಹ ಬೆಣ್ಣೆ ಹಣ್ಣು ಹಾಗೂ ಲೀಚಿ ಹಣ್ಣಿನ ಗಿಡಗಳನ್ನು ಸಹ ಹಾಕಿದ್ದಾರೆ.
ನಾಲ್ಕೈದು ಗಿಡಗಳನ್ನ ಮಾತ್ರ ಹಾಕಿದ್ದು ಒಂದು ವೇಳೆ ಗಿಡಗಳು ಸರಿಯಾಗಿ ಬೆಳೆದು ಫಸಲು ಚೆನ್ನಾಗಿ ಬಂದ್ರೆ ಮುಂದೆ ಇನ್ನಷ್ಟು ಗಿಡಗಳನ್ನ ತಂದು ಹಾಕುವ ಪ್ಲಾನ್ ಮಾಡಿಕೊಂಡಿದ್ದಾರೆ. ತೋಟ ಮಾಡಿ ಬೇರೆ ಬೇರೆ ರೀತಿಯ ಹಣ್ಣುಗಳನ್ನ ಬೆಳೆದಿದ್ದಕ್ಕೆ ಹೆಚ್ಚು ಲಾಭ ಬರುತ್ತೆ ಅನ್ನೋ ಆಸೆಯಿಂದ ತೋಟ ಮಾಡಿದವನಲ್ಲ ನಾನು. ಬದಲಿಗೆ ನನಗೆ ತೋಟ ಮಾಡಬೇಕು ಎಂದು ಕನಸಿತ್ತು. ಇದೇ ಕಾರಣಕ್ಕೆ ತೋಟ ಮಾಡಿದ್ದೇನೆ.
ಇನ್ನು ತೋಟದಲ್ಲಿ ನಿತ್ಯ ಒಂದೆರಡು ರೌಂಡ್ಸ್ ಹಾಕಿದ್ರೆ ಆರೋಗ್ಯ ಕೂಡ ಚೆನ್ನಾಗಿರುತ್ತೆ ಎನ್ನುವ ಕಾರಣಕ್ಕೆ ಮಾಡಿದ್ದೇನೆ ಎನ್ನುತ್ತಾರೆ ರೈತ ಮರೆಪ್ಪ. ಇನ್ನು ತೋಟಗಾರಿಕೆ ಇಲಾಖೆಯಿಂದ ಸಿಗುವ ಸವಲತ್ತುಗಳನ್ನ ಬಳಸಿಕೊಂಡು ಈ ಬೆಳೆಗಳನ್ನ ಬೆಳೆದು ಉಳಿದ ರೈತರಿಗೆ ಮಾದರಿಯಾಗಿದ್ದಾರೆ. ಮರೆಪ್ಪ ಅವರ ಮಾದರಿ ತೋಟಕ್ಕೆ ಇತರೆ ರೈತರನ್ನ ಕರೆದುಕೊಂಡು ಬಂದು, ಪ್ರಾತ್ಯಕ್ಷಿಕೆ ತೋರಿಸಲಾಗುತ್ತೆ ಅಂತಾರೆ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಅಜೀಮೋದ್ದಿನ್.
ಒಟ್ನಲ್ಲಿ ಅದದೇ ಹಳೆಯ ಸಂಪ್ರದಾಯವನ್ನ ಮುಂದುವರೆಸಿಕೊಂಡು ಬಂದು ಬೆಳೆಗಳನ್ನ ಬೆಳೆದು ಲಾಸ್ ಆಗಿದ್ದ ರೈತ ಈಗ ಹೊಸ ಪ್ರಯತ್ನಕ್ಕೆ ಮುಂದಾಗಿ ಯಶಸ್ವಿಯಾಗಿದ್ದಾರೆ. ರೈತರು ಹಳೆ ಪದ್ದತಿಯನ್ನ ಬಿಟ್ಟು ಸಮಗ್ರ ಕೃಷಿ ಪದ್ದತಿಯನ್ನ ಅಳವಡಿಸಿಕೊಂಡರೆ ಲಾಭ ಪಡೆಯಬಹುದಾಗಿದೆ.
ವರದಿ: ಅಮೀನ್ ಹೊಸುರ್, ಟಿವಿ9, ಯಾದಗಿರಿ