ಯಾದಗಿರಿ: ಜಿಲ್ಲೆಯ ಗುರುಮಠಕಲ್ ತಾಲೂಕಿನ ನಜರಾಪುರ ಬಳಿಯ ಧಬೆ ಧಬೆ ಫಾಲ್ಸ್ ನೋಡಲು ಬಂದಿದ್ದ ಮೂವರು ಯುವಕರು ನೀರುಪಾಲಾಗಿದ್ದಾರೆ.
ದಬಧಭಾ ಅಂತಾ ಧುಮ್ಮಿಕ್ಕುತ್ತಿದ್ದ ನೀರು ನೋಡಲು ಬಂದಿದ್ದ ಯುವಕರು
ಯುವಕರು ತೆಲಂಗಾಣದ ಹೈದರಾಬಾದ್ ಮೂಲದವರು ಎಂದು ತಿಳಿದುಬಂದಿದೆ. ಎತ್ತರದಿಂದ ಧುಮ್ಮಿಕ್ಕುವ ನೀರು ನೋಡಲು ಬಂದಿದ್ದ ಯುವಕರ ಗುರುತು ಇನ್ನೂ ತಿಳಿದು ಬಂದಿಲ್ಲ. ಓರ್ವ ಯುವಕನ ಶವ ಪತ್ತೆಯಾಗಿದ್ದು, ಇನ್ನು ಇಬ್ಬರ ಶವಗಳಿಗಾಗಿ ಶೋಧಕಾರ್ಯ ನಡೆಸಲಾಗುತ್ತಿದೆ. ಸ್ಥಳಕ್ಕೆ ಗುರುಮಠಕಲ್ ಪೊಲೀಸರು ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದಾರೆ.