ಈ ಬಾರಿಯೂ ವಿಮೆ ಕಂಪನಿಗಳಿಂದ ರೈತರಿಗೆ ಮೋಸ, ಕೃಷಿ ಇಲಾಖೆ ಶಾಮೀಲು: ರೈತನ ‘ಕೈ’ಹಿಡಿಯುವವರು ಯಾರು?

Pradhan Mantri Fasal Bima Yojana: ಬೆಳೆ ಪರಿಹಾರದಲ್ಲಿ ಯಾದಗಿರಿ ರೈತರಿಗೆ ಮಹಾ ಮೋಸ.. ವಿಮೆ‌ ಹಣ ಕಟ್ಟಿದ್ದರೂ ಪರಿಹಾರ ನೀಡದೆ ಮಕ್ಮಲ್ ಟೋಪಿ.. ವಿಮೆ ಕಂಪನಿ ಜೊತೆ ಕೃಷಿ ಅಧಿಕಾರಿಗಳು ಶಾಮೀಲು ರೈತರ ಆರೋಪ.. ಯಸ್ ಈ ವಿದ್ಯಮಾನಗಳು ಯಾದಗಿರಿ ಜಿಲ್ಲಾಧಿಕಾರಿ ಕಚೇರಿ ಮುಂದೆ ನಿನ್ನೆ ಗುರುವಾರ ನಡೆದಿದೆ. ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನೊಂದರಲ್ಲೇ 200 ಕ್ಕೂ ಅಧಿಕ ರೈತರಿಗೆ ಇದರಿಂದ ಅನ್ಯಾಯವಾಗಿದೆ.

ಈ ಬಾರಿಯೂ ವಿಮೆ ಕಂಪನಿಗಳಿಂದ ರೈತರಿಗೆ ಮೋಸ, ಕೃಷಿ ಇಲಾಖೆ ಶಾಮೀಲು: ರೈತನ 'ಕೈ'ಹಿಡಿಯುವವರು ಯಾರು?
ಈ ಬಾರಿಯೂ ವಿಮೆ ಕಂಪನಿಗಳಿಂದ ರೈತರಿಗೆ ಮೋಸ, ರೈತನ 'ಕೈ'ಹಿಡಿಯುವವರು ಯಾರು?
Follow us
ಅಮೀನ್​ ಸಾಬ್​
| Updated By: ಸಾಧು ಶ್ರೀನಾಥ್​

Updated on:May 17, 2024 | 10:48 AM

ರೈತರು ಅತಿವೃಷ್ಟಿ ಅನಾವೃಷ್ಟಿಯಿಂದ ಬೆಳೆ ಕಳೆದುಕೊಂಡಾಗ ಅನುಕೂಲ ಆಗಲಿ ಎನ್ನುವ ಕಾರಣಕ್ಕೆ ಬೆಳೆಗೆ ವಿಮೆ (Crop Insurance) ಮಾಡಿಸುತ್ತಾರೆ. ಸಂಕಷ್ಟದಲ್ಲಿರುವ ರೈತರಿಗೆ (Farmers) ವಿಮೆಯ ಪರಿಹಾರ ಹಣ ತುಂಬಾ ನೆರವಿಗೆ ಬರುತ್ತದೆ. ಆದ್ರೆ ಜಿಲ್ಲೆಯಲ್ಲಿ (Yadgir) ವಿಮೆ ಹಣ ತುಂಬಿದ ರೈತರಿಗೆ ಬೆಳೆ ಪರಿಹಾರ ಕೊಡುವ ಬದಲು ಮೋಸ ಮಾಡಲಾಗಿದೆ. ಬೆಳೆ ಕಳೆದುಕೊಂಡ ರೈತರಿಗೆ ಪರಿಹಾರ ನೀಡಬೇಕಾದ ಕಂಪನಿ ನೇರವಾಗಿ ಮಕ್ಮಲ್‌ ಟೋಪಿ ಹಾಕಿದೆ.

ಹೌದು ಈ ಬಾರಿ ಭೀಕರ ಬರಗಾಲ ಉಂಟಾಗಿದೆ. ಬಿತ್ತನೆ‌ ಮಾಡಿದ ಬೆಳೆಗೆ ಸರಿಯಾಗಿ ನೀರು ಸಿಗದ ಕಾರಣಕ್ಕೆ ಬಂಗಾರದಂತ ಬೆಳೆಗಳು ಒಣಗಿ ಹೋಗಿವೆ. ಎಕರೆಗೆ ಸಾವಿರಾರು ರೂ. ಖರ್ಚು ಮಾಡಿರುವ ರೈತರು ಕಂಗಲಾಗಿ ಹೋಗಿದ್ದಾರೆ. ರೈತರಿಗೆ ಇಂತಹ ಸಂಕಷ್ಟದ ಕಾಲ ಬಂದಾಗ ಸಹಕಾರ ಆಗಲಿ ಎನ್ನುವ ಕಾರಣಕ್ಕೆ ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ (Pradhan Mantri Fasal Bima Yojana) ಜಾರಿಗೆ ತಂದಿದೆ. ಈ ಯೋಜನೆಯಡಿ ವರ್ಷಕ್ಕೆ ಕೋಟ್ಯಾಂತರ ರೈತರು ಬೆಳೆಗೆ ವಿಮೆಯನ್ನ ಪಾವತಿ ಮಾಡುತ್ತಾರೆ.

ಅದರಂತೆ ಯಾದಗಿರಿ ಜಿಲ್ಲೆಯ ರೈತರು ಸಹ ಫಸಲ್ ಭೀಮಾ ಯೋಜನೆಯಡಿ ಬೆಳೆಗೆ ವಿಮೆ ಮಾಡಿಸಿದ್ದಾರೆ. ಹೆಚ್ಚಾಗಿ ರೈತರು ತೊಗರಿ ಹಾಗೂ ಹತ್ತಿ ಬೆಳೆಗೆ ವಿಮೆಯನ್ನ ಮಾಡಿಸಿದ್ದಾರೆ. ಬೆಳೆ ಹಾಳಾದ ಸಂದರ್ಭದಲ್ಲಿ ವಿಮೆ ಕಂಪನಿ ಪಾವತಿಸಿದ ವಿಮೆ ಹಣಕ್ಕೆ 20 ಪಟ್ಟಿನಷ್ಟು ಪರಿಹಾರದ ರೂಪದಲ್ಲಿ ಹಣವನ್ನ ನೀಡಬೇಕು. ಆದ್ರೆ ಈ ಬಾರಿ ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನೊಂದರಲ್ಲೇ 200 ಕ್ಕೂ ಅಧಿಕ ರೈತರು ಮೋಸ ಹೋಗಿದ್ದಾರೆ. ತಾಲೂಕಿನ ಪ್ರತಿಯೊಂದು ಗ್ರಾಮದಲ್ಲೂ ನೂರಕ್ಕೆ ಹತ್ತೆನರಡು ಜನರಿಗೆ ಮಾತ್ರ ಪರಿಹಾರ ನೀಡಿದ್ರೆ‌ ಉಳಿದವರಿಗೆ ನಾನಾ ಕಾರಣಗಳನ್ನ ಹೇಳಿ ಪರಿಹಾರ ಬಾರದಂತೆ ಮಾಡಿದ್ದಾರೆ ಎಂಬುದು ರೈತರ ಆರೋಪವಾಗಿದೆ.

ಈ ಬಾರಿ ಭೀಕರ ಬರಗಾಲ ಆವರಿಸಿಕೊಂಡಿದೆ. ರೈತರು ಪ್ರತಿ ಎಕರೆಗೆ ಸಮಾರು 20 ರಿಂದ 25 ಸಾವಿರ ಖರ್ಚು ಮಾಡಿ ತೊಗರಿ ಹಾಗೂ ಹತ್ತಿ‌ ಬೆಳೆಯನ್ನ ಬೆಳೆದಿದ್ರು. ಆದ್ರೆ ಸರಿಯಾಗಿ ಮಳೆ ಆಗದ ಕಾರಣಕ್ಕೆ ಬೆಳೆ ಹಾಳಾಗಿ ಹೋಗಿದೆ. ಬೆಳೆಯನ್ನ ಕಳೆದುಕೊಂಡ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಂಕಷ್ಟದಲ್ಲಿರು ರೈತರಿಗೆ ವಿಮೆ ಹಣ ಸಹಕಾರಿಯಾಗಬೇಕಿತ್ತು. ಆದ್ರೆ ಇಲ್ಲಿ ಬೆಳೆ ಕಳೆದುಕೊಂಡ ರೈತರಿಗೆ ಸರಿಯಾಗಿ ಪರಿಶೀಲನೆ ಮಾಡದೆ ಪರಿಹಾರ ನೀಡಿಲ್ಲ.

ಓರ್ವ ರೈತ ಒಂದು ಎಕರೆಗೆ ರೈತರು ಒಂದು ಸಾವಿರ ರೂ. ವಿಮೆ ಮಾಡಿಸಿದ್ದರೆ ಇನ್ನು ಐದು ಎಕರೆಗೆ 5 ಸಾವಿರ ಹಣವನ್ನ ವಿಮೆ ಪಾವತಿಸಿದ್ದಾರೆ. ಈಗ ಬೆಳೆ ಹಾಳಾಗಿದ್ದರಿಂದ ರೈತನಿಗೆ ವಿಮೆ ಕಂಪನಿ ತಮ್ಮ ನಿಯಮದ ಪ್ರಕಾರವೇ 1 ಲಕ್ಷ ಪರಿಹಾರವನ್ನ ನೀಡಬೇಕು. ಹೀಗೆ ಸಾಕಷ್ಟು ರೈತರು ತಮಗೆ ಬೇಕಾದಷ್ಟು ವಿಮೆಯನ್ನ ಮಾಡಿಸಿಕೊಂಡಿದ್ದಾರೆ. ವಿಮೆ ಪ್ರೀಮಿಯಂ ಹಣಕ್ಕೆ 20 ಪಟ್ಟು ಸೇರಿಸಿ ಕಂಪನಿಗೆ ರೈತರಿಗೆ ಬೆಳೆ ಪರಿಹಾರದ ರೂಪದಲ್ಲಿ ಕೊಡಬೇಕು.

ಇದನ್ನೂ ಓದಿ: ಆಧುನಿಕ ಕಾಲದಲ್ಲಿಯೂ ಆದಿವಾಸಿಗಳ ಪಾಡು ಹೀಗಿದೆ.. ಡೋಲಿಯಲ್ಲಿ ಸಾಗುವ ಜೀವನ ಚಿತ್ರಣ ನೋಡಿ

ಆದ್ರೆ ಇಲ್ಲಿ ರೈತರಿಗೆ ವಿಮೆ ಕಂಪನಿ ಮೋಸ ಮಾಡಿದೆ. ಇನ್ನು ಬೆಳೆ ಹಾಳಾದ ಸಂದರ್ಭದಲ್ಲಿ ವಿಮೆ ಕಂಪನಿ, ಕೃಷಿ ಇಲಾಖೆ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಸರ್ವೆ ಮಾಡ್ತಾರೆ. ಬಳಿಕ ವರದಿ ಸಿದ್ದಪಡಿಸಿ ಬೆಳೆ ಕಳೆದುಕೊಂಡ ರೈತರಿಗೆ ಪರಿಹಾರವನ್ನ ನೀಡ್ತಾರೆ. ಆದ್ರೆ ಇಲ್ಲಿ ಕೃಷಿ ಇಲಾಖೆ ಅಧಿಕಾರಿಗಳು ವಿಮೆ ಕಂಪನಿ ಜೊತೆ ಶಾಮೀಲಾಗಿ ಹಣದ ಆಸೆಗೆ ತಪ್ಪು ಮಾಹಿತಿಯನ್ನ ನೀಡಿದ್ದಾರೆ. ಇದೆ ಕಾರಣಕ್ಕೆ ರೈತರಿಗೆ ಪರಿಹಾರ ಸಿಗ್ತಾಯಿಲ್ಲ ಎಂದು ರೈತರು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ್ರು.

ಒಟ್ನಲ್ಲಿ ರೈತರಿಗೆ ಪ್ರತಿ ಸಲವೂ ವಿಮೆ ಕಂಪನಿಗಳು ಮೋಸ ಮಾಡ್ತಾನೆ ಬಂದಿವೆ. ಇದರಲ್ಲಿ ಕೃಷಿ ಇಲಾಖೆ ಅಧಿಕಾರಿಗಳು ಶಾಮೀಲಾಗದೆ ಈ ಅನ್ಯಾಯವೆಸಗಲು ಆಗದು. ಹೀಗಾಗಿ ಕೂಡಲೇ ಜಿಲ್ಲಾಧಿಕಾರಿ ಮಧ್ಯಸ್ಥಿಕೆ ವಹಿಸಿ ಸಂಕಷ್ಟದಲ್ಲಿರುವ ರೈತರ ನೆರವಿಗೆ ನಿಲ್ಲಬೇಕಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:47 am, Fri, 17 May 24

ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ