ಪಾದಯಾತ್ರೆ ಯೋಗ! ಮೈಸೂರಿನಿಂದ ಪಾದಯಾತ್ರೆ ಮೂಲಕ ಕಾಶಿಗೆ ತಲುಪಿದ ಯೋಗ ಶಿಕ್ಷಕ ಕೃಷ್ಣ ನಾಯಕ್‌

ಪಾದಯಾತ್ರೆ ಯೋಗ! ಮೈಸೂರಿನಿಂದ ಪಾದಯಾತ್ರೆ ಮೂಲಕ ಕಾಶಿಗೆ ತಲುಪಿದ ಯೋಗ ಶಿಕ್ಷಕ ಕೃಷ್ಣ ನಾಯಕ್‌
ಪಾದಯಾತ್ರೆ ಯೋಗ! ಮೈಸೂರಿನಿಂದ ಪಾದಯಾತ್ರೆ ಮೂಲಕ ಕಾಶಿಗೆ ತಲುಪಿದ ಯೋಗ ಶಿಕ್ಷಕ ಕೃಷ್ಣ ನಾಯಕ್‌

ಯೋಗ ಶಿಕ್ಷಕ ಕೃಷ್ಣ ನಾಯಕ್‌, 2021ರ ನವೆಂಬರ್ 15ರಂದು ಮೈಸೂರಿನ ಕೋಟೆ ಆಂಜನೇಯ ಸ್ವಾಮಿ ದೇಗುಲದಿಂದ ಕಾಶಿಗೆ ಪಾದಯಾತ್ರೆ ಆರಂಭ ಮಾಡಿದ್ದರು. ಸದ್ಯ ಮೈಸೂರಿನಿಂದ ಕೈಗೊಂಡ ಪಾದಯಾತ್ರೆ ಪೂರ್ಣಗೊಂಡಿದೆ.

TV9kannada Web Team

| Edited By: Ayesha Banu

Jan 17, 2022 | 11:21 AM


ಮೈಸೂರು: ಯೋಗ ಶಿಕ್ಷಕ ಕೃಷ್ಣ ನಾಯಕ್‌ರ ಕಾಶಿ ಪಾದಯಾತ್ರೆ ಯಶಸ್ವಿಯಾಗಿದೆ. 2021ರ ನವೆಂಬರ್ 15ರಂದು ಮೈಸೂರಿನ ಕೋಟೆ ಆಂಜನೇಯ ಸ್ವಾಮಿ ದೇಗುಲದಿಂದ ಆರಂಭವಾಗಿದ್ದ ಪಾದಯಾತ್ರೆ ಪೂರ್ಣಗೊಂಡಿದೆ. 2 ತಿಂಗಳ ಅವಧಿಯಲ್ಲಿ 2,030 ಕಿಲೋಮೀಟರ್ ಪಾದಯಾತ್ರೆ ಮಾಡಿದ್ದಾರೆ.

ಯೋಗ ಶಿಕ್ಷಕ ಕೃಷ್ಣ ನಾಯಕ್‌, 2021ರ ನವೆಂಬರ್ 15ರಂದು ಮೈಸೂರಿನ ಕೋಟೆ ಆಂಜನೇಯ ಸ್ವಾಮಿ ದೇಗುಲದಿಂದ ಕಾಶಿಗೆ ಪಾದಯಾತ್ರೆ ಆರಂಭ ಮಾಡಿದ್ದರು. ಸದ್ಯ ಮೈಸೂರಿನಿಂದ ಕೈಗೊಂಡ ಪಾದಯಾತ್ರೆ ಪೂರ್ಣಗೊಂಡಿದೆ. 28 ವರ್ಷದ ಕೃಷ್ಣ ನಾಯಕ್ ಮೈಸೂರು ತಾಲೂಕು ಉದ್ಬೂರು ಗ್ರಾಮದ ನಿವಾಸಿ. ಇವರು ಯೋಗದ ಬಗ್ಗೆ ಜಾಗೃತಿಗಾಗಿ ಪಾದಯಾತ್ರೆ ಹಮ್ಮಿಕೊಂಡಿದ್ದರು. ಎರಡು ತಿಂಗಳ ಅವಧಿಯಲ್ಲಿ ಮೈಸೂರಿನಿಂದ ಕಾಶಿಗೆ ಪಾದಯಾತ್ರೆ ಮಾಡಿದ್ದಾರೆ. ಸುಮಾರು 2,030 ಕಿಲೋ ಮೀಟರ್ ನಡೆದು ಕಾಶಿಗೆ ಯಾತ್ರೆ ಮುಗಿಸಿದ್ದಾರೆ. ಮಾರ್ಗ ಮಧ್ಯೆ ಪ್ರಾಣಾಯಾಮ ಆಧ್ಯಾತ್ಮಿಕ ವಿಚಾರದ ಬಗ್ಗೆ ಶಿಬಿರಗಳನ್ನು ಮಾಡುತ್ತ ವಿದ್ಯಾರ್ಥಿಗಳು, ಸಾರ್ವಜನಿಕರಿಗೆ ಯೋಗ, ಆಧ್ಯಾತ್ಮದ ಬಗ್ಗೆ ಮಾಹಿತಿ ನೀಡುತ್ತ ಪಾದಯಾತ್ರೆ ಪೂರ್ಣಗೊಳಿಸಿದ್ದಾರೆ.

ಇದನ್ನೂ ಓದಿ: Oxfam India Survey: ಭಾರತದ ಟಾಪ್ 10​ ಶ್ರೀಮಂತರ ಸಂಪತ್ತಲ್ಲಿ 25 ವರ್ಷಗಳ ತನಕ ಮಕ್ಕಳಿಗೆ ನೀಡಬಹುದಂತೆ ಶಿಕ್ಷಣ


Follow us on

Related Stories

Most Read Stories

Click on your DTH Provider to Add TV9 Kannada