ಕಟಪಾಡಿ ವಿಶ್ವನಾಥ ಕ್ಷೇತ್ರದ ಜಾತ್ರೋತ್ಸವ: ದೈವದ ಮುಂದೆಯೇ ಭಕ್ತರ ಸಮಸ್ಯೆಗೆ ಪರಿಹಾರ!

ಉಡುಪಿ: ಕರಾವಳಿ ಭಾಗದಲ್ಲಿ ಆಚರಣೆಗಳು.. ಸಂಪ್ರದಾಯಗಳು ಒಂದಕ್ಕೊಂದು ಡಿಫರೆಂಟ್. ಅಂದ್ಹಾಗೆ ಉಡುಪಿ ಜಿಲ್ಲೆಯ ಕಾಪುವಿನ ಕಟಪಾಡಿಯ ವಿಶ್ವನಾಥ ಕ್ಷೇತ್ರದಲ್ಲಿ ಸಂಭ್ರಮ ಮೇಳೈಸಿತ್ತು. ವಿಶ್ವನಾಥ ಕ್ಷೇತ್ರದ ಜಾತ್ರೋತ್ಸವ ಅಂಗವಾಗಿ ಕಲ್ಕುಡ ಮತ್ತು ಪರಿವಾರ ದೈವಗಳಿಗೆ ನೇಮೋತ್ಸವ ನಡೆಯುತ್ತೆ.

ಆರಂಭದಲ್ಲಿ ದೈವಗಳು ನರ್ತನ ಸೇವೆ ಮಾಡ್ತವೆ. ಗಗ್ಗರ ಸೇವೆ, ಅಣಿ ಸೇವೆ ಮೂಲಕ ಕಲ್ಕುಡ ದೈವವನ್ನು ಸಂತೃಪ್ತಿ ಮಾಡಲಾಗುತ್ತೆ. ಅಣಿ ಸೇವೆ ನಂತರ ಕಾರ್ಣಿಕದ ಕಲ್ಕುಡ ದೈವದ ಸಮ್ಮುಖದಲ್ಲಿ ಪ್ರಶ್ನೋತ್ತರಗಳು ನಡೆಯುತ್ತೆ. ಇನ್ನು, ವಿಶ್ವನಾಥ ದೇವರು ಗುಡಿಯೊಳಗಿದ್ದು ಭಕ್ತರಿಗೆ ಅಭಯ ನೀಡಿದ್ರೆ, ಗುಡಿಯ ಹೊರಗೆ ಜನರ ಇಷ್ಟಾರ್ಥ ಈಡೇರಿಸುವುದು ಕಲ್ಕುಡ ದೈವ. ನೂರಾರು ಭಕ್ತರು ಆರೋಗ್ಯ ಸಮಸ್ಯೆ, ಆರ್ಥಿಕ ಸಮಸ್ಯೆ ಮತ್ತು ಕೆಲ ಕೌಟುಂಬಿಕ ಸಮಸ್ಯೆಗಳನ್ನ ದೈವದ ಮುಂದೆ ಹೇಳಿಕೊಳ್ತಾರೆ.

ಪ್ರತಿಯೊಬ್ಬರಿಗೂ ಕಲ್ಕುಡ ದೈವ ಒಂದೊಂದು ಪರಿಹಾರ ನೀಡಿ ಅಭಯ ಸೂಚಿಸುತ್ತೆ. ಉಡುಪಿ, ದಕ್ಷಿಣಕನ್ನಡ ಜಿಲ್ಲೆಯವರು ಮಾತ್ರವಲ್ಲದೇ ರಾಜ್ಯದ ನಾನಾ ಭಾಗಗಳಿಂದ ಭಕ್ತರು ಆಗಮಿಸ್ತಾರೆ. ಒಟ್ನಲ್ಲಿ ಕರಾವಳಿ ಜನ ದೇವರನ್ನು ಪೂಜಿಸುವಷ್ಟೇ ದೈವಗಳನ್ನು ಆರಾಧಿಸುತ್ತಾರೆ. ಅನಾದಿಕಾಲದಿಂದಲೂ ನಡೆದ್ಕೊಂಡು ಬರ್ತಿರೋ ಸಂಪ್ರದಾಯ ಇನ್ನೂ ಅದ್ಧೂರಿಯಾಗಿ ನಡೀತಿರೋದು ವಿಶೇಷ.

Related Posts :

Category:

error: Content is protected !!