KCG ಆಸ್ಪತ್ರೆಯ ನರ್ಸಿಂಗ್‌ ಆಫೀಸರ್ ಕೊರೊನಾ ಸೋಂಕಿಗೆ ಬಲಿ

ಬೆಂಗಳೂರು: ನಗರದಲ್ಲಿ ಕೊರೊನಾ ವಾರಿಯರ್‌ ಒಬ್ಬರು ಕೋವಿಡ್‌ಗೆ ಬಲಿಯಾಗಿದ್ದಾರೆ. ಕೊರೊನಾ ಸೋಂಕಿತರಾಗಿದ್ದ KC ಜನರಲ್‌ ಆಸ್ಪತ್ರೆಯ 55 ವರ್ಷದ ನರ್ಸಿಂಗ್‌ ಆಫೀಸರ್‌ ಚಿಕಿತ್ಸೆ ಫಲಕಾರಿಯಾಗದೇ ಇವತ್ತು ಕೋವಿಡ್‌ನಿಂದಾಗಿ ಕೊನೆಯುಸಿರೆಳೆದಿದ್ದಾರೆ.

ಕಳೆದ ವಾರವಷ್ಟೇ ದುರ್ಗಕ್ಕೆ ಹೋಗಿ ಬಂದಿದ್ದರು
ಕೋವಿಡ್‌ ಸೋಂಕಿತರಿಗೆ ಚಿಕಿತ್ಸೆ ನೀಡುವ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಅವರು, ಕಳೆದ ವಾರವಷ್ಟೇ ಅವರ ಮೂಲ ಸ್ಥಳ ಚಿತ್ರದುರ್ಗಕ್ಕೆ ಹೋಗಿದ್ದರು. ಅಲ್ಲೇ ಅವರಿಗೆ ಕೊರೊನಾ ಸೋಂಕು ತಗುಲಿಕೊಂಡಿತ್ತು ಎನ್ನಲಾಗ್ತಿದೆ. ಆದ್ರೆ ಇಂದು ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.

Related Tags:

Related Posts :

Category:

error: Content is protected !!