ಡಿಜೆ-ಕೆಜಿ ಹಳ್ಳಿ ಪ್ರಕರಣ: ಬೆಂಕಿ ಹಚ್ಚಿದ್ಯಾರು? DCP ಶರಣಪ್ಪ ನೀಡಿದ್ದಾರೆ ಫ್ರೇಂ-ಟು-ಫ್ರೇಂ ಮಾಹಿತಿ

  • Ayesha Banu
  • Published On - 11:11 AM, 30 Oct 2020

ಬೆಂಗಳೂರು: ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಗಲಭೆ ಪ್ರಕರಣದ ತನಿಖೆ ತಾರ್ಕಿಕ ಅಂತ್ಯಕ್ಕೆ ಬಂದು ನಿಂತಿದೆ. ಬೆಂಕಿ ಹಚ್ಚಿದ್ಯಾರು? ಕಾರಣ ಏನು ಅನ್ನೋ ಚರ್ಚೆ ನಡೆಯುವಾಗ್ಲೇ ಕೋರ್ಟ್‌ಗೆ ಚಾರ್ಜ್‌ಶೀಟ್‌ ಸಲ್ಲಿಕೆಯಾಗಿದೆ. ಬರೋಬ್ಬರಿ 4,900 ವಿಡಿಯೋ ಕ್ಲಿಪ್‌ಗಳು ಘಟನೆ ಬಗ್ಗೆ ಸಾಕ್ಷ್ಯ ಹೇಳುತ್ತಿವೆ.

422 ಆರೋಪಿಗಳು.. ಮೂರು ಸ್ಥಳಗಳು.. 72 ಪ್ರಕರಣ.. 4,900 ವಿಡಿಯೋ ಕ್ಲಿಪ್‌ಗಳು..
ಇದು ಬೆಂಗಳೂರು ಬೆಂಕಿಯ ಡಿಟೇಲ್ಸ್‌.. ಡಿಜೆ ಹಳ್ಳಿ, ಕೆಜಿ ಹಳ್ಳಿ ಹೊತ್ತಿ ಉರಿದಿದ್ದು ಹೇಗೆ ಅನ್ನೋ ಡಿಟೇಲ್ಸ್‌ . ಹೌದು.. ಆವತ್ತು ಬೆಂಕಿ ಹಚ್ಚಿದ್ದು ಯಾರು? ಬಂಧನವಾದ ಆರೋಪಿಗಳ ಸಂಖ್ಯೆ ಎಷ್ಟು? ಬೆಂಕಿ ಎಲ್ಲಿಂದ ಹೊತ್ತಿಕೊಳ್ತು ಅನ್ನೋ ಡಿಟೇಲ್ಸ್‌ ಟಿವಿ9 ಗೆ ಲಭ್ಯವಾಗಿದೆ. ಡಿಸಿಪಿ ಡಾ. ಶರಣಪ್ಪ ಈ ಬಗ್ಗೆ ಟಿವಿ9 ಗೆ ಫ್ರೇಂ-ಟು-ಫ್ರೇಮ್ ಮಾಹಿತಿ ನೀಡಿದ್ದಾರೆ.

72 ಪ್ರಕರಣ.. 422 ಆರೋಪಿಗಳು ಅರೆಸ್ಟ್‌!
ಡಿ.ಜೆ ಹಳ್ಳಿ-ಕೆ.ಜಿ ಹಳ್ಳಿ ಗಲಭೆ ಪ್ರಕರಣ ಸಂಬಂಧ ಪ್ರಾಥಮಿಕ ಚಾರ್ಜ್‌ಶೀಟ್‌ನ್ನ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಪ್ರಕರಣದ ತನಿಖೆ ನಡೆಸುತ್ತಿರುವ ಪೂರ್ವ ವಿಭಾಗದ ಪೊಲೀಸರು, ಸದ್ಯ ಆರು ಕೇಸ್‌ನಲ್ಲಿ ನ್ಯಾಯಾಲಯಕ್ಕೆ ಮೊದಲ ಹಂತದ ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ. ಘಟನೆ ಸಂಬಂಧ ಒಟ್ಟು 72 ಪ್ರಕರಣ ದಾಖಲಾಗಿದ್ದು, ಇದುವರೆಗೆ 422 ಆರೋಪಿಗಳನ್ನ ಅರೆಸ್ಟ್‌ ಮಾಡಲಾಗಿದೆ.

ಬೆಂಕಿಯ ಆರಂಭ!
ಫೇಸ್‌ಬುಕ್‌ನಲ್ಲಿ ಎರಡು ಧರ್ಮಗಳ ಬಗ್ಗೆ ಅವಹೇಳನವಾಗ್ತಿತ್ತು. ಈ ವೇಳೆ ನವೀನ್‌ ಧಾರ್ಮಿಕ ಭಾವನೆ ಕೆರಳುವಂತೆ ಕಮೆಂಟ್‌ ಮಾಡಿದ್ದ. ಕಮೆಂಟ್‌ ನೋಡಿ ಗರಂ ಆದ ಮೀನು ಮಾರುವ ಯುವಕ, ಆರೋಪಿಗಳಾದ ಸೈಯದ್, ಮುಕ್ಬುಲ್, ಶೇಕ್ ಮುನೀರ್,‌ ಸಂಪತ್‌ರಾಜ್‌ ಆಪ್ತ ಅರುಣ್‌ ಜತೆ ಚರ್ಚಿಸಿದ್ರು.

ಈ ವೇಳೆ ಸಂಪತ್‌ರಾಜ್ ಆಪ್ತ ಅರುಣ್‌ ಗಲಾಟೆಗೆ ಕುಮ್ಮಕ್ಕು ಕೊಟ್ಟಿದ್ದ. ಇದ್ರಿಂದ ಪ್ರೇರಿತರಾದ ಆರೋಪಿಗಳು ಗುಂಪು ಕಟ್ಟಿಕೊಂಡು ನವೀನ್ ಮನೆ ಬಳಿಗೆ ಹೋಗಿದ್ರು. ನವೀನ್ ಮನೆ ಧ್ವಂಸ ಮಾಡಿ ಮನೆ ಮುಂದೆ ಬೈಕ್‌ಗೆ ಬೆಂಕಿ ಹಚ್ಚಿದ್ರು. ಪೊಲೀಸ್‌ ಠಾಣೆಗಳ ಮುಂದೆ ಕೂಡಾ ಇದೇ ರೀತಿ ಬೆಂಕಿ ಹಚ್ಚಿ ದಾಂಧಲೆ ನಡೆಸಿದ್ರು.

ಹೀಗೆ ಆರೋಪಿಗಳು ಬೆಂಕಿ ಹಾಕಿದ್ದರ ಬಗ್ಗೆ ಸಿಸಿಟಿವಿ ಮೂಲಕ ಬರೋಬ್ಬರಿ 4,900 ವಿಡಿಯೋ ಕ್ಲಿಪ್‌ಗಳನ್ನ ಸಂಗ್ರಹಿಸಿದ್ದ ಪೊಲೀಸರು ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ. ಒಟ್ನಲ್ಲಿ ಡಿಜೆಹಳ್ಳಿ, ಕೆಜಿ ಹಳ್ಳಿ ಪ್ರಕರಣದಲ್ಲಿ ವಿಡಿಯೋ ಸಾಕ್ಷ್ಯಗಳ ಮೂಲಕವೇ ಆರೋಪಿಗಳನ್ನ ಅರೆಸ್ಟ್‌ ಮಾಡಿರೋ ಪೊಲೀಸರು ಕೋರ್ಟ್‌ಗೆ ಪ್ರಾಥಮಿಕ ಚಾರ್ಜ್‌ಶೀಟ್‌ ಸಲ್ಲಿಸಿದ್ದಾರೆ.