CCB ಪೊಲೀಸರ ಕಾರ್ಯಾಚರಣೆ: ಖಲಿಸ್ತಾನದ ಪ್ರತ್ಯೇಕತಾವಾದಿ ಬೆಂಗಳೂರಲ್ಲಿ ಅರೆಸ್ಟ್​

ಬೆಂಗಳೂರು: ನಗರದ ಸಿಸಿಬಿ ಪೊಲೀಸರು ಬಹುದೊಡ್ಡ ಕಾರ್ಯಾಚರಣೆ ನಡೆಸಿ ಖಲಿಸ್ತಾನದ ಪ್ರತ್ಯೇಕತಾವಾದಿಯನ್ನು ಬಂಧಿಸಿದ್ದಾರೆ. ಕಳೆದ 6 ತಿಂಗಳಿಂದ ಬೆಂಗಳೂರಿನ ಸಂಪಿಗೆಹಳ್ಳಿಯಲ್ಲಿ ವಾಸವಿದ್ದ ಜರ್ನಲ್ ಸಿಂಗ್ ಸಿದ್ದುರನ್ನು ಅರೆಸ್ಟ್ ಮಾಡಿದ್ದಾರೆ.

ಮೂಲತಹ ಹೈದರಾಬಾದ್​ ನಿವಾಸಿಯಾದ ಜರ್ನಲ್ ಸಿಂಗ್ ಸಿದ್ದು ಸಂಪಿಗೆಹಳ್ಳಿಯ ರಾಧಾಕೃಷ್ಣ ಪಿಜಿಯಲ್ಲಿ ವಾಸವಿದ್ದ. ಇಂಜಿನಿಯರಿಂಗ್ ಮಾಡಿಕೊಂಡಿದ್ದ ಸಿದ್ದು, ನಗರದ ಬಾಗಮನೆ ಟೆಕ್ ಪಾರ್ಕ್​ನಲ್ಲಿ ಕೆಲಸ ಮಾಡುತ್ತಿದ್ದ. ಪ್ರತ್ಯೇಕ ಖಲಿಸ್ತಾನ ದೇಶಕ್ಕಾಗಿ ಹೋರಾಟ ನಡೆಸುತ್ತಿದ್ದ ಜರ್ನಲ್ ಸಿಂಗ್, ಸಿಖ್ ಧರ್ಮದವರಿಗಾಗಿಯೇ ಪ್ರತ್ಯೇಕ ದೇಶಬೇಕು ಎಂದು ಹೋರಾಟ ಮಾಡುತ್ತಿದ್ದ. ಪಂಜಾಬ್ ಅನ್ನು ಪ್ರತ್ಯೇಕ‌ ಖಲಿಸ್ತಾನ ಮಾಡಬೇಕೆಂದು ನಿರಂತರ ಹೋರಾಟ ಮಾಡುತ್ತಿದ್ದ.

ಕೇಸ್ ದಾಖಲಾಗುತ್ತಿದ್ದಂತೆ ಬೆಂಗಳೂರಿಗೆ ಎಸ್ಕೇಪ್ ಆಗಿದ್ದ:
ತೆಲಂಗಾಣದವನಾಗಿದ್ದರು ಪಂಜಾಬ್​ನಲ್ಲಿ ಉಗ್ರ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ. ಸಿಖ್ ಧರ್ಮದ ವಿರುದ್ಧ ಕೆಲಸ ಮಾಡುವವರ ವಿರುದ್ಧ ಸಮರ ಸಾರುತ್ತಿದ್ದ. ಗಲಾಟೆಯೊಂದರಲ್ಲಿ ಪಂಜಾಬ್​ನ ಮೊಹಾಲಿಯಲ್ಲಿ ಜರ್ನಲ್ ಸಿಂಗ್ ಮೇಲೆ ಪ್ರಕರಣ ದಾಖಲಾಗಿತ್ತು. 2019ರ ಫೆಬ್ರವರಿ ತಿಂಗಳಲ್ಲಿ ಮೊಹಾಲಿಯಲ್ಲಿ ಆಂತರಿಕ ಭದ್ರತಾ ವಿಭಾಗ ಪ್ರಕರಣ ದಾಖಲಿಸಿತ್ತು. ಕೇಸ್ ದಾಖಲಾಗುತ್ತಿದ್ದಂತೆ ಮೊಹಾಲಿಯಿಂದ ಬೆಂಗಳೂರಿಗೆ ಎಸ್ಕೇಪ್ ಆಗಿದ್ದ ಆರೋಪಿ.

ಜರ್ನಲ್ ಸಿಂಗ್ ಸಿದ್ದು, ಪಾಕಿಸ್ತಾನದ ಐಎಸ್ಐ ಏಜೆಂಟ್ ನಿಹಾಲ್ ಸಿಂಗ್ ಜೊತೆ ನಿರಂತರ ಸಂಪರ್ಕದಲ್ಲಿದ್ದ. ಪ್ರತ್ಯೇಕ ಖಲಿಸ್ತಾನದ ಹೋರಾಟಕ್ಕೆ ಸಹಾಯ ಮಾಡುವಂತೆ ಮನವಿ ಮಾಡಿದ್ದ. ನಿರಂತರವಾಗಿ ಹುಡುಕಾಟ ನಡೆಸುತ್ತಿದ್ದ ಪಂಜಾಬ್ ಪೊಲೀಸರು, ಬೆಂಗಳೂರು ಸಿಸಿಬಿ ಪೊಲೀಸರಿಗೆ ಮನವಿ ಮಾಡಿದ್ದರು. ಸಿಸಿಬಿ ಡಿಸಿಪಿ ರವಿಕುಮಾರ್ ನೇತೃತ್ವದಲ್ಲಿ ಆಪರೇಷನ್ ನಡೆಸಿದ ಪೊಲೀಸರು ಆರೋಪಿಯ ಹೆಡೆಮುರಿ ಕಟ್ಟಿ ಪಂಜಾಬ್ ಪೊಲೀಸರಿಗೆ ಒಪ್ಪಿಸಿದ್ದಾರೆ.

Related Tags:

Related Posts :

Category:

error: Content is protected !!