ವಿಘ್ನ ಗಣಪನಿಗೆ ವಂದಿಸಿ ಸುದೀಪ್ ಫ್ಯಾಂಟಮ್ ಚಿತ್ರೀಕರಣ ಮರು ಆರಂಭ

ಕೊರೊನಾ ಹಾವಳಿಯಿಂದ ಕನ್ನಡ ಚಿತ್ರರಂಗ ಸೈಲೆಂಟ್ ಆಗಿತ್ತು. ಸೂಪರ್​ಸ್ಟಾರ್​ಗಳು ಕೂಡ ತಮ್ಮ ಸಿನಿಮಾಗಳಿಗೆ ಬ್ರೇಕ್ ಕೊಟ್ಟು ಮನೆಯಲ್ಲೇ ಇದ್ರೂ. ಆದ್ರೀಗ ಕಿಚ್ಚ ಸುದೀಪ್ ಅಭಿನಯದ ಫ್ಯಾಂಟಮ್ ಸಿನಿಮಾದ ಚಿತ್ರೀಕರಣ ಮತ್ತೆ ಆರಂಭ ಆಗಿದೆ.

ಕಿಚ್ಚ ಸುದೀಪ್ ಹಾಗೂ ನಿರ್ದೇಶಕ ಅನೂಪ್ ಭಂಡಾರಿ ಕಾಂಬಿನೇಷನ್​ನ ಚೊಚ್ಚಲ ಸಿನಿಮಾ ಫ್ಯಾಂಟಮ್ ಒಂದು ಶೆಡ್ಯೂಲ್ ಮುಗಿತ್ತು. ಇನ್ನೇನು ಎರಡನೇ ಹಂತದ ಚಿತ್ರೀಕರಣ ಆರಂಭಿಸಬೇಕು ಎನ್ನುವಷ್ಟರಲ್ಲೇ ಕೊರೊನಾ ವಕ್ಕರಿಸಿದ್ದರಿಂದ ಚಿತ್ರೀಕರಣವನ್ನ ಅರ್ಧಕ್ಕೆ ನಿಲ್ಲಿಸಲಾಗಿತ್ತು. ಈಗ ಸುಮಾರು ಮೂರೂವರೆ ತಿಂಗಳ ಬಳಿಕ ಮತ್ತೆ ಫ್ಯಾಂಟಮ್ ಚಿತ್ರೀಕರಣವನ್ನ ಹೈದ್ರಾಬಾದಿನ ಅನ್ನಪೂರ್ಣ ಸ್ಟುಡಿಯೋದಲ್ಲಿ ಆರಂಭಿಸಲಾಗಿದೆ.

ವಿಘ್ನೇಶ್ವರನಿಗೆ ಪೂಜೆ ಸಲ್ಲಿಸೋ ಮೂಲಕ ಫ್ಯಾಂಟಮ್ ಚಿತ್ರೀಕರಣ ಆರಂಭ ಮಾಡಲಾಗಿದೆ. ಎಲ್ಲಕ್ಕಿಂತ ವಿಶೇಷ ಅಂದ್ರೆ, ಕನ್ನಡದ ಕಾರ್ಮಿಕರಿಗೆ ಕೆಲಸ ನೀಡಲಾಗಿದೆ. ಕೊರೊನಾದಿಂದಾಗಿ ಕನ್ನಡ ಚಿತ್ರರಂಗದ ಕಾರ್ಮಿಕರು ಸಂಕಷ್ಟದಲ್ಲಿದ್ದರು. ಹೀಗಾಗಿ ಕಾರ್ಮಿಕರ ಒಕ್ಕೂಟ ಫ್ಯಾಂಟಮ್ ಚಿತ್ರತಂಡದ ಬಳಿ ಮನವಿ ಮಾಡಿಕೊಂಡಿತ್ತು. ಆದ್ರಿಂದ ಸ್ವತ: ಸುದೀಪ್ ಅವರೇ ಕರ್ನಾಟಕದ ಕಾರ್ಮಿಕರನ್ನ ಹೈದ್ರಾಬಾದಿಗೆ ಕರೆತರುವಂತೆ ಸೂಚಿಸಿದ್ದರು. ಹೀಗಾಗಿ ಕನ್ನಡ ಚಿತ್ರರಂಗದ ಕಾರ್ಮಿಕರು ಫ್ಯಾಂಟಮ್ ಸಿನಿಮಾದಲ್ಲಿ ಕೆಲಸ ಮಾಡುತ್ತಿದ್ದಾರೆ.

Related Tags:

Related Posts :

Category:

error: Content is protected !!