‘ಕಿಚ್ಚ-ದಚ್ಚು’ ಫ್ಯಾನ್ಸ್​ ವಾರ್​; ದರ್ಶನ್ ಬಳಿಕ ಇದೀಗ ಸುದೀಪ್ ಟ್ವೀಟ್​!​

ಸಾಮಾಜಿಕ ಜಾಲತಾಣಗಳಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ‘ಕಿಚ್ಚ-ದಚ್ಚು’ ಫ್ಯಾನ್ಸ್​ ವಾರ್​ ಬಗ್ಗೆ ಮೊದಲ ಬಾರಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್​ ಟ್ವೀಟ್ ಮಾಡಿದ್ರು. ಸದ್ಯಕ್ಕೆ ನಾನು ಬೆಂಗಳೂರಿನಲ್ಲಿ ಇಲ್ಲ, ಶೂಟಿಂಗ್ ಅಲ್ಲಿ ಬ್ಯುಸಿಯಾಗಿದ್ದೀನಿ ಅಂತ ಟ್ವೀಟ್ ಮಾಡಿದ ದರ್ಶನ್, ನನ್ನ ಅನ್ನದಾತರು ಹಾಗೂ ಸೆಲೆಬ್ರಿಟಿಗಳನ್ನು ಕೆಣಕಲು ಬರದಿರಿ ಅಂತ ಪರೋಕ್ಷವಾಗಿ ಸುದೀಪ್ ಫ್ಯಾನ್ಸ್​ಗೆ ಖಡಕ್ ಎಚ್ಚರಿಕೆ ನೀಡಿದ್ದರು.

ಇದೀಗ ದರ್ಶನ್ ಟ್ವೀಟ್​ಗೆ ಪ್ರತಿಕ್ರಿಯಿಸಿರುವ ಕಿಚ್ಚ ಸುದೀಪ್​, ​ಕೆಲವೊಂದು ಮಾತುಗಳಿಗೆ ಕಣ್ಣು ಕಾಣಿಸದಂತೆ, ಕಿವಿ ಕೇಳಿಸದಂತೆ ಇರೋದು ಒಳಿತು ಎಂದಿದ್ದಾರೆ. ಇನ್ನು ಪೈಲ್ವಾನ್ ಸಿನಿಮಾದ ಪೈರಸಿ ಬಗ್ಗೆ ನಾನಾಗಲಿ, ನನ್ನ ತಂಡವಾಗಲಿ ಯಾವುದೇ ನಟನ ಹೆಸರು ತೆಗೆದುಕೊಂಡಿಲ್ಲ. ಆದ್ರೆ ಕೆಲವರು ಪೈರಸಿ ಲಿಂಕನ್ನು ವೇಗವಾಗಿ ಹರಡುವಂತೆ ಶೇರ್ ಮಾಡಿದ್ದಾರೆ. ಎಚ್ಚರಿಕೆ ಕೊಡೋದು ಹಾಗು ಎಲ್ಲಿಂದಲೋ ತೆಗೆದುಕೊಂಡಿರುವ ಸಾಲನ್ನು ಹಾಕೋದು ನನ್ನ ಜಾಯಮಾನವಲ್ಲ ಎಂದು ಸುದೀಪ್ ಟ್ವೀಟ್ ಮಾಡಿದ್ದಾರೆ.

ಬರೀ ಮಾತಿನಿಂದ ಯುದ್ಧ ಗೆಲ್ಲಲು ಸಾಧ್ಯವಿಲ್ಲ, ಹಾಗಾಗುವಂತಿದ್ದರೆ ಎಲ್ಲರೂ ರಾಜರಾಗಿ ಆಳಬಹುದಾಗಿತ್ತು. ನಾನು ನನ್ನ ಕೆಲಸದ ಮೂಲಕ ಜನರನ್ನ ಗೆಲ್ಲೋಕೆ ಪ್ರಯತ್ನಿಸ್ತೇನೆ ಅಂತ ಸುದೀಪ್ ಹೇಳಿದ್ದಾರೆ. ನಾವಿಲ್ಲಿ ಇರೋದು ಕೆಲವೇ ದಿನಗಳು ಮಾತ್ರ, ಜೀವನದ ಜೊತೆಗೆ ಹೋಗೋಣ. ಕಾಲವೇ ಎಲ್ಲದಕ್ಕೂ ಉತ್ತರ ಕೊಡುತ್ತೆ. ಜಗತ್ತನ್ನೇ ಗೆದ್ದ ಅಲೆಕ್ಸೆಂಡರ್ ಕೊನೆಗೆ ಬರೀಗೈಯಲ್ಲಿ ಹೋದ. ನಾವು ಒಳ್ಳೆ ದಿನಗಳನ್ನ ಮಾತ್ರ ತೆಗೆದುಕೊಂಡು ಹೋಗಲು ಸಾಧ್ಯ. ಒಳ್ಳೆಯ ನೆನಪುಗಳು ಮಾತ್ರ ನಮ್ಮನ್ನ ಜೀವಂತವಾಗಿಡುತ್ತವೆ ಎಂದು ಕಿಚ್ಚ ಸುದೀಪ್ ಸುದೀರ್ಘವಾದ ಪತ್ರವನ್ನು ಬರೆದಿದ್ದಾರೆ.

Related Posts :

Category:

error: Content is protected !!