ಕಿಡ್ನ್ಯಾಪ್​ ಮಾಡಿ ಹನಿಟ್ರ್ಯಾಪ್​ ಕೇಸ್​: ಪ್ರಮುಖ ಆರೋಪಿಗಳು ಅರೆಸ್ಟ್​

ಮಂಗಳೂರು: ಕಿಡ್ನ್ಯಾಪ್​ ಮಾಡಿ ರೆಸಾರ್ಟ್​ನಲ್ಲಿ ಹನಿಟ್ರ್ಯಾಪ್ ಪ್ರಕರಣ ಸಂಬಂಧ ಪ್ರಮುಖ ಆರೋಪಿ ಸೇರಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಟ್ವಾಳ ತಾಲೂಕಿನ ವಿಟ್ಲ ನಿವಾಸಿ ಜಮಾಲುದ್ದೀನ್ ಅಲಿಯಾಸ್ ಜಮಾಲು, ಕುಶಾಲನಗರ ನಿವಾಸಿ ಲೋಹಿತ್ ಬಿ.ಬಿ ಹಾಗು ನೆತ್ತರಕೆರೆ ನಿವಾಸಿ ಮಹಮ್ಮದ್ ಶರೀಫ್ ಬಂಧಿತ ಆರೋಪಿಗಳು.

ಜ.7ರ ಮಧ್ಯರಾತ್ರಿ ನಾಲ್ವರನ್ನು ಕೇರಳಾದಿಂದ ಕರೆಸಿ ಹನಿಟ್ರ್ಯಾಪ್ ಮಾಡಲಾಗಿತ್ತು. ಪ್ರಭಾವಿ ರಾಜಕಾರಣಿಯೊಬ್ಬರಿಗೆ ಸೇರಿದ ರೆಸಾರ್ಟ್​ನಲ್ಲಿ ಅಕ್ರಮವಾಗಿ ಬಂಧನ ಮಾಡಿದ್ದರು ಎನ್ನಲಾಗಿದೆ. ಈ ಸಂಬಂಧ ಉಪ್ಪಿನಂಗಡಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣವನ್ನು ಬೆನ್ನಟ್ಟಿದ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಹನಿಟ್ರ್ಯಾಪ್​ನಲ್ಲಿ ಭಾಗಿಯಾದ ಇಬ್ಬರು ಯುವತಿಯರು ಮತ್ತು ಉಳಿದ ಇಬ್ಬರು ಆರೋಪಿಗಳಿಗಾಗಿ ಉಪ್ಪಿನಂಗಡಿ ಪೊಲೀಸರು ಶೋಧ ಮುಂದುವರೆಸಿದ್ದಾರೆ.
Related Tags:

Related Posts :

Category:

error: Content is protected !!