ಕೋರ್ಟ್​ಗೆ ಹಾಜರುಪಡಿಸುವ ಮುನ್ನ ಕಿಶೋರ್​ಗೆ ಕೊವಿಡ್ ಟೆಸ್ಟ್

ಪಾರ್ಟಿಗಳನ್ನು ಆಯೋಜಿಸಿ ಹುಡುಗಿಯರಿಗೆ ಡ್ರಗ್ಸ್ ನೀಡುತ್ತಿದ್ದ ಆರೋಪದಲ್ಲಿ ಬಂಧನಕೊಳ್ಳಗಾಗಿರುವ ಮಂಗಳೂರಿನ ಡ್ಯಾನ್ಸರ್‌ ಕಿಶೋರ್ ಶೆಟ್ಟಿಯನ್ನು ಇಂದು ರಾತ್ರಿ ಇಲ್ಲವೇ ನಾಳೆ ಕೊವಿಡ್‌ ಟೆಸ್ಟ್‌ ಮಾಡಿಸುವುದಾಗಿ ಮಂಗಳೂರು ಪೊಲೀಸ್ ಮೂಲಗಳು ತಿಳಿಸಿವೆ.

ಮೂಲಗಳ ಪ್ರಕಾರ ಕೊವಿಡ್‌ ಟೆಸ್ಟ್‌ನ ರಿಪೋರ್ಟ್‌ ಬಂದ ಬಳಿಕವೇ ಕಿಶೋರ್​ನನ್ನು ಎನ್‌ಡಿಪಿಎಸ್‌ ಕೋರ್ಟ್‌ಗೆ ಹಾಜರುಪಡಿಸಲಾಗುವುದು.. ಲ್ಯಾಬ್ ರಿಪೋರ್ಟ್‌ ಸೋಮವಾದ ಸಿಗುವ ಸಾಧ್ಯತೆಯಿದ್ದು ಅಲ್ಲಿಯವರೆಗೂ ಪೊಲೀಸರು ವಿಚಾರಣೆ ಮುಂದುವರಿಸಲಿದ್ದಾರೆ.

ಇತ್ತೀಚೆಗಷ್ಟೇ ಮಂಗಳೂರಲ್ಲಿ ನಡೆದ ಒಂದು ಡ್ರಗ್ ಪಾರ್ಟಿಯಲ್ಲಿ ಕಿಶೋರ್ ಬೆಂಗಳೂರಿನ ಖ್ಯಾತ ಆ್ಯಂಕರ್ ಕಮ್ ನಟಿ ಜತೆಗೂ ಪಾರ್ಟಿ ಮಾಡಿರುವ ಸಂಗತಿ ಹೊರಬಿದ್ದಿದೆ.

Related Tags:

Related Posts :

Category:

error: Content is protected !!