ನಮ್ಮ ಕನ್ನಡಿಗ ರಾಹುಲ್​ನನ್ನು ಭಾರತದ ಮಿಸ್ಟರ್ 360 ಎಂದ ಮಂಜ್ರೇಕರ್!

, ನಮ್ಮ ಕನ್ನಡಿಗ ರಾಹುಲ್​ನನ್ನು ಭಾರತದ ಮಿಸ್ಟರ್ 360 ಎಂದ ಮಂಜ್ರೇಕರ್!

ಕ್ರಿಕೆಟ್ ಜಗತ್ತಿನ ಮಿಸ್ಟರ್ 360 ಅಂದ್ರೆ ನೆನಪಾಗೋದೇ ದಕ್ಷಿಣ ಆಫ್ರಿಕಾದ ಸ್ಟಾರ್ ಆಟಗಾರ ಎ ಬಿ ಡಿವಿಲಿಯರ್ಸ್. ಎಬಿಡಿ ಬ್ಯಾಟಿಂಗ್ ಸ್ಟೈಲೇ ಒಂದು ವಿಶೇಷ. ಅಷ್ಟದಿಕ್ಕೂಗಳಿಗೂ ಬೌಲ್​​ಗಳನ್ನ ಪರಿಚಯಿಸುವ ಏಕೈಕ ಪರಾಕ್ರಮಿ ಡಿವಿಲಿಯರ್ಸ್.

ಮಿಸ್ಟರ್ 360 ಡಿವಿಲಿಯರ್ಸ್​ರಂತೆ ಮೈದಾನದಲ್ಲಿ ಅಬ್ಬರಿಸುವ ಹುಲಿಯೊಂದು ಟೀಮ್ ಇಂಡಿಯಾದಲ್ಲಿದೆ. ಅದು ನಮ್ಮ ಕನ್ನಡಿಗ ಅನ್ನೋದೇ ನಾವೆಲ್ಲರು ಹೆಮ್ಮೆಪಡುವಂತಹ ವಿಚಾರ. ಅಂದ್ಹಾಗೆ, ಈ ಕನ್ನಡ ಕಂಠೀರವ ಬೇರ್ಯಾರು ಅಲ್ಲ. ನಮ್ಮ ಹೆಮ್ಮೆಯ ಕನ್ನಡಿಗ ಕೆ.ಎಲ್.ರಾಹುಲ್.

ಭಾರತದ ಮಿಸ್ಟರ್ 360 ಕನ್ನಡಿಗ ಕೆ.ಎಲ್.ರಾಹುಲ್:
, ನಮ್ಮ ಕನ್ನಡಿಗ ರಾಹುಲ್​ನನ್ನು ಭಾರತದ ಮಿಸ್ಟರ್ 360 ಎಂದ ಮಂಜ್ರೇಕರ್!ನಮ್ಮ ರಾಹುಲ್ ನ್ಯೂಜಿಲೆಂಡ್ ಸರಣಿಯಲ್ಲಿ ಪ್ರತಿಯೊಂದು ಪಂದ್ಯದಲ್ಲೂ ಅದ್ಭುತ ಬ್ಯಾಟಿಂಗ್ ಮಾಡ್ತಿದ್ದಾರೆ. ಟಿಟ್ವೆಂಟಿ ಸರಣಿಯಲ್ಲಿ ವೀರ ಕನ್ನಡಿಗ ರಾಹುಲ್, ರನ್​ಸುಂಟರಗಾಳಿ ಎಬ್ಬಿಸಿದ್ರು. 5 ಪಂದ್ಯದಲ್ಲೂ ಬೊಂಬಾಟ್ ಬ್ಯಾಟಿಂಗ್ ಮಾಡಿದ್ದ ರಾಹುಲ್, ಒಟ್ಟು 224ರನ್​ಗಳನ್ನ ಗಳಿಸುವ ಮೂಲಕ ಸರಣಿ ಶ್ರೇಷ್ಠ ಪ್ರಶಸ್ತಿ ಗೆದ್ದು, ಚರಿತ್ರೆ ಸೃಷ್ಟಿಸಿದ್ದ.

ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಪಂದ್ಯವನ್ನ ಸೋತಿರಬಹುದು. ಆದ್ರೆ ನಮ್ಮ ರಾಹುಲ್ ತಮ್ಮ ಪ್ರದರ್ಶನದಲ್ಲಿ ಸೋತಿಲ್ಲ. ರನ್​ಗಳಿಸುವ ವಿಚಾರದಲ್ಲಿ ಕಿಂಚಿತ್ತೂ ರಾಜೀಯಾಗಿಲ್ಲ. 5ನೇ ಸ್ಲಾಟ್​ನಲ್ಲಿ ಕಣಕ್ಕಿಳಿದ್ರೂ ತಾವೊಬ್ಬ ಅತ್ಯದ್ಭುತ ಬ್ಯಾಟ್ಸ್​ಮನ್ ಅನ್ನೋದನ್ನ ರಾಹುಲ್ ಮತ್ತೊಮ್ಮೆ ಸಾಬೀತು ಮಾಡಿದ್ರು.

ಕನ್ನಡ ಕಂಠೀರವ ರಾಹುಲ್​ಗೆ ಈಗ ಮಿಸ್ಟರ್ 360 ಅನ್ನೋ ಪಟ್ಟ ತಂದುಕೊಟ್ಟಿದ್ದೇ ನ್ಯೂಜಿಲೆಂಡ್ ಸರಣಿ. ಮೊದಲ ಏಕದಿನ ಪಂದ್ಯದಲ್ಲಿ ರಾಹುಲ್ ಸಿಕ್ಸರ್​ಗಳ ಸುರಿಮಳೆ ಸುರಿಸಿದ್ರು. ಅದ್ರಲ್ಲೂ ಇನ್ನಿಂಗ್ಸ್ ಮುಗಿತಿರೋ ವೇಳೆ ಬ್ಯಾಟಿಂಗ್​ನಲ್ಲಿ ಅಬ್ಬರಿಸೋಕೆ ನಿಂತ ಕನ್ನಡದ ಕಲಿ ರಾಹುಲ್ ಸಿಡಿಸಿದ ಸೂಪರ್ ಸಿಕ್ಸ್ ಎಬಿಡಿಯನ್ನ ನೆನಪಿಸೋ ಹಾಗೇ ಮಾಡ್ತು.

ಜೇಮ್ಸ್ ನಿಶಾಮ್ ಎಸೆದ 48ನೇ ಓವರ್​ನ 5ನೇ ಬಾಲ್ ಅನ್ನ ರಾಹುಲ್ ಥರ್ಡ್ ಮ್ಯಾನ್​ನತ್ತ ಭರ್ಜರಿ ಸಿಕ್ಸರ್​ಗಟ್ಟಿದ್ರು. ಕೇವಲ ಇದೊಂದು ಸಿಕ್ಸರ್ ಸಿಡಿಸಿದ ಮಾತ್ರಕ್ಕೆ ರಾಹುಲ್​ಗೆ ಮಿಸ್ಟರ್ 360 ಪಟ್ಟ ಬಂದಿದ್ದಲ್ಲ. ರಾಹುಲ್ ನಿನ್ನೆ ಪಂದ್ಯದಲ್ಲಿ ಸಿಡಿಸಿದ ಒಂದೊಂದು ಬೌಂಡ್ರಿ ಜೊತೆಗೆ ಒಂದೊಂದು ಸಿಕ್ಸರ್​ಗಳು ಸಹ ಮತ್ತೆ ಮೈದಾನದಲ್ಲಿ ಡಿವಿಲಿಯರ್ಸ್ ಅನ್ನ ನೆನಪಿಸಿತ್ತು.

ರಾಹುಲ್ ಮಿ.360 ಅವತಾರ:
ಹ್ಯಾಮಿಲ್ಟನ್ ಮೈದಾನದಲ್ಲಿ ನಮ್ಮ ರಾಹುಲ್ 5ನೇ ಕ್ರಮಾಂಕದಲ್ಲಿ ಕ್ರೀಸ್​ಗಿಳಿದು ಬ್ಯಾಟಿಂಗ್ ಮಾಡಿದ್ರು. ಎದುರಿಸದ 64 ಬಾಲ್​ನಲ್ಲಿ 3 ಬೌಂಡ್ರಿ ಹಾಗೂ 6 ಸಿಕ್ಸರ್ ಸಹಿತ ಅಜೇಯ 88ರನ್ ಗಳಿಸಿದ್ರು.

ರಾಹುಲ್​ಗೆ ಮಿಸ್ಟರ್ 360 ಪಟ್ಟ ನೀಡಿದ ಮಾಂಜ್ರೇಕರ್!
, ನಮ್ಮ ಕನ್ನಡಿಗ ರಾಹುಲ್​ನನ್ನು ಭಾರತದ ಮಿಸ್ಟರ್ 360 ಎಂದ ಮಂಜ್ರೇಕರ್!ಕನ್ನಡಿಗ ರಾಹುಲ್​ಗೆ ಮಿಸ್ಟರ್ 360 ಪಟ್ಟ ನೀಡಿದ್ದು ಮಾಜಿ ಕ್ರಿಕೆಟಿಗ ಸಂಜಯ್ ಮಾಂಜ್ರೇಕರ್. ಹ್ಯಾಮಿಲ್ಟನ್ ಪಂದ್ಯದಲ್ಲಿ ಕನ್ನಡಿಗ ರಾಹುಲ್ ಬ್ಯಾಟಿಂಗ್​ಗೆ ಫಿದಾ ಆದ ಸಂಜಯ್ ಮಾಂಜ್ರೇಕರ್, ಟ್ವೀಟ್ ಮಾಡೋ ಮೂಲಕ ರಾಹುಲ್​ನನ್ನ ಹುರಿದುಂಬಿಸಿದ್ರು.

ರಾಹುಲ್ ಮಿಸ್ಟರ್ 360:
‘‘ 360 ಡಿಗ್ರಿ ಌಂಗಲ್​ನಲ್ಲಿ ಕ್ಲಾಸಿಕ್ ಆಗಿ ಬ್ಯಾಟಿಂಗ್ ಮಾಡೋದು ಕೆ.ಎಲ್.ರಾಹುಲ್​ರಿಂದ ಮಾತ್ರ ಸಾಧ್ಯ.”
– ಸಂಜಯ್ ಮಂಜ್ರೇಕರ್, ಮಾಜಿ ಕ್ರಿಕೆಟಿಗ

ದ್ವಿಪಾತ್ರದಲ್ಲಿ ಮಿಂಚುವ ಕನ್ನಡಿಗನೇ ತಂಡದ ಹೈಲೆಟ್!
ಈಗ ಟೀಮ್ ಇಂಡಿಯಾದಲ್ಲಿ ಕೊಹ್ಲಿ ಮತ್ತು ರೋಹಿತ್​ಗಿಂತ ರಾಹುಲ್​​ನದ್ದೇ ಸದ್ದು ಜಾಸ್ತಿಯಾಗಿದೆ. ಕನ್ನಡಿಗ ರಾಹುಲ್ ಬ್ಯಾಟಿಂಗ್ ಜೊತೆಗೆ ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನ ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದಾರೆ. ದ್ವಿಪಾತ್ರದಲ್ಲಿ ಮಿಂಚುತ್ತಿರುವ ರಾಹುಲ್ ಈಗ ತಂಡದ ಮೈನ್ ಅಟ್ರಾಕ್ಷನ್ ಪ್ಲೇಯರ್ ಅಂದ್ರೆ ತಪ್ಪಾಗೋದಿಲ್ಲ. ಬ್ಯಾಟ್ ಹಿಡಿದು ಹೊಡಿಬಡಿ ಆಟವಾಡುವ ರಾಹುಲ್, ವಿಕೆಟ್ ಕೀಪಿಂಗ್​ನಲ್ಲಿ ಸೂಪರ್ ಮ್ಯಾನ್ ಅವತಾರದಲ್ಲಿ ಮಿಂಚುತ್ತಾರೆ.

, ನಮ್ಮ ಕನ್ನಡಿಗ ರಾಹುಲ್​ನನ್ನು ಭಾರತದ ಮಿಸ್ಟರ್ 360 ಎಂದ ಮಂಜ್ರೇಕರ್!ಚಾಣಾಕ್ಷ ವಿಕೆಟ್ ಕೀಪಿಂಗ್ ಮಾಡೋ ರಾಹುಲ್, ಎದುರಾಳಿ ಬ್ಯಾಟ್ಸ್​ಮನ್​ಗಳನ್ನ ರನೌಟ್ ಮಾಡಿಸೋದ್ರಲ್ಲಿ ಪಂಟರ್. ಟಫ್ ಕ್ಯಾಚ್​ಗಳನ್ನೇ ಡೈವ್ ಹೊಡೆದು ಹಿಡಿಯುವ ರಾಹುಲ್, ದಿಗ್ಗಜರೇ ನಾಚುವಂತಹ ಪ್ರದರ್ಶನ ನೀಡ್ತಿದ್ದಾರೆ. ಸದ್ಯ ರಾಹುಲ್ ವಿಕೆಟ್ ಕೀಪಿಂಗ್​ಗೆ ಅಭಿಮಾನಿಗಳ ಜೊತೆಗೆ ಘಟಾನುಘಟಿಗಳೇ ಮನಸೋತಿದ್ದು, ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್, ಪಂತ್​ಗಿಂದ ರಾಹುಲ್ ಬೆಟರ್ ವಿಕೆಟ್ ಕೀಪರ್ ಅನ್ನೋದನ್ನ ಹೇಳಿದ್ದಾರೆ.

ಒಟ್ನಲ್ಲಿ. ಮಿಸ್ಟರ್ 360 ಕನ್ನಡಿಗ ರಾಹುಲ್, ಅಷ್ಟದಿಕ್ಕುಗಳಿಗೂ ಬೌಲ್​ಗಳನ್ನ ಪರಿಚಯಿಸುವ ಭಾರತದ ಎಬಿಡಿಯಾಗಿ ಮಿಂಚುತ್ತಿದ್ದಾರೆ. ವಿಕೆಟ್ ಕೀಪಿಂಗ್​ನಲ್ಲಿ ಚಮತ್ಕಾರ ತೋರುತ್ತಿರುವ ರಾಹುಲ್ ಸೂಪರ್ ಮ್ಯಾನ್ ಆಟಕ್ಕೆ ಫ್ಯಾನ್ಸ್ ಫುಲ್ ಮಾರ್ಕ್ಸ್ ನೀಡ್ತಿದ್ದಾರೆ.

Related Posts :

Leave a Reply

Your email address will not be published. Required fields are marked *

ತಾಜಾ ಸುದ್ದಿ

error: Content is protected !!