ಕೊಡವ ಮಂದ್ ನಮ್ಮೆ: ಬಣ್ಣದ ಸೀರೆ, ಉದ್ದದ ಜಡೆಯಲ್ಲಿ ನೀರೆಯರು ಮಿಂಚಿಂಗ್.. ದಪ್ಪ ಮೀಸೆ ಬಿಟ್ಕೊಂಡು ಪುರುಷರ ಶೌರ್ಯ ಪ್ರದರ್ಶನ

ಆ ಸಾಂಪ್ರದಾಯಿಕ ಉತ್ಸವದಲ್ಲಿ ಕೊಡವರ ಸಂಸ್ಕೃತಿಯ ಪ್ರದರ್ಶನದ ರಂಗು ಒಂದ್ಕಡೆಯಾದ್ರೆ, ಜಾನಪದ ಕಲೆಗಳ ಸ್ಪರ್ಧೆಯ ರಂಗು ಮತ್ತೊಂದ್ಕಡ್‌. ಕೊಡಗಿನಲ್ಲಿ ನಡೆದ ಕೊಡವ ಮಂದ್ ನಮ್ಮೆಯ ಝಲಕ್ ಇಲ್ಲಿದೆ ಓದಿ.

  • ಸುರೇಶ್
  • Published On - 8:39 AM, 13 Jan 2021
ಕೊಡವ ಮಂದ್ ನಮ್ಮೆ ಸಂಭ್ರಮ.. ದಪ್ಪ ಮೀಸೆ ಬಿಟ್ಕೊಂಡು ಪುರುಷರ ಶೌರ್ಯ ಪ್ರದರ್ಶನ

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಕೊಡವರು ಮಂದ್ ನಮ್ಮೆ ಕಾರ್ಯಕ್ರಮವನ್ನು ಅದ್ಧೂರಿಯಿಂದ ಆಚರಿಸಿದ್ರು. ಬಣ್ಣ ಬಣ್ಣದ ಸೀರೆಯುಟ್ಟ ನಾರಿಯರು ವೈಯ್ಯಾರದಿಂದಿದ್ರೆ ಸಾಂಪ್ರದಾಯಿಕ ಉಡುಗೆಯಲ್ಲಿ ಕೊಡವರ ಗತ್ತು, ಉದ್ದುದ್ದ ಮೀಸೆ ಬೆಳೆಸಿದ ಪುರುಷರ ಗಮ್ಮತ್ತು ಕಡಿಮೇ ಏನ್ ಇರಲಿಲ್ಲ.

ಕೊಡವರ ಜೀವನದ ಭಾಗವಾಗಿರುವ ಮಂದ್‍ಗಳ ಉಳಿಸುವ ನಿಟ್ಟಿನಲ್ಲಿ ಕಳೆದ 7ವರ್ಷದಿಂದ ‘ಮಂದ್ ನಮ್ಮೆ’ ಕಾರ್ಯಕ್ರಮವನ್ನು ಆಯೋಜನೆ ಮಾಡಿಕೊಂಡು ಬರಲಾಗುತ್ತಿದೆ. ಈ ಬಾರಿ ವಿರಾಜಪೇಟೆ ತಾಲೂಕಿನ ಅಮ್ಮತ್ತಿಯಲ್ಲಿ ಮಂದ್ ನಮ್ಮೆ ಕಾರ್ಯಕ್ರಮ ನಡೆಯಿತು. ಕೊರೊನಾ ಹಿನ್ನೆಲೆಯಲ್ಲಿ ಸರಳವಾಗಿ ಹಮ್ಮಿಕೊಂಡಿದ್ರೂ ಕೂಡಾ ಜಾನಪದ ಸಿರಿವಂತಿಕೆಗೇನೂ ಕೊರತೆಯಿರಲಿಲ್ಲ. ಉದ್ದ ಜಡೆಯ ಮಹಿಳೆಯರು, ಉದ್ದ ಮೀಸೆಯ ಪುರುಷರ ಸ್ಪರ್ಧೆ ಗಮನ ಸೆಳೆಯಿತು.

ಮಹಿಳೆಯರು ಉದ್ದುದ್ದ ಜಡೆಯನ್ನ ಪ್ರದರ್ಶಿಸುತ್ತಿದ್ರೆ, ಅಯ್ಯೋ ನಮ್ಗೆ ಆ ಥರ ಉದ್ದ ಕೂದ್ಲು ಬರಲೇ ಇಲ್ವಲ್ಲ ಅಂತ ಬೇರೆಯವ್ರು ಕುತೂಹಲದಿಂದ ನೋಡುತ್ತಿದ್ರು. ಇನ್ನು ಶೌರ್ಯಕ್ಕೆ ಹೆಸರಾದ ಕೊಡವ ಪುರುಷರ ಮುಖ್ಯ ಆಕರ್ಷಣೆ ಅಂದ್ರೆ ಮೀಸೆ. ಕೊಡಗಿನಲ್ಲಿ ಎಲ್ಲೇ ಹೋದ್ರೂ ಡಿಫರೆಂಟ್ ಆಗಿ, ಉದ್ದುದ್ದ ದಪ್ಪನೆಯ ಮೀಸೆ ಬಿಟ್ಟ ಪುರುಷರು ಕಾಣೋದಕ್ಕೆ ಸಿಗುತ್ತಾರೆ. ಇಲ್ಲಿ ಕೂಡಾ ಯುವಕರು, ಹಿರಿಯರೆಂಬ ಬೇಧವಿಲ್ಲದೆ ಮೀಸೆ ತಿರುವಿ ಗತ್ತು, ಗಾಂಭೀರ್ಯ ಪ್ರದರ್ಶಿಸಿದ್ರು.

ಅಷ್ಟಕ್ಕೂ ಇಂಥಾ ವಿಶೇಷ ಕಾರ್ಯಕ್ರಮ ಆಯೋಜನೆ ಮಾಡಿದ್ದು ಯುನೈಟೆಡ್ ಕೊಡವ ಆರ್ಗನೈಸೇಷನ್. ಈ ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಡೆಡೆಯಿಂದ ಬಂದ ಕೊಡವರು ಜಡೆಯ ಅಂದ, ಮೀಸೆಯ ಗತ್ತು, ಗಾಂಭೀರ್ಯ ಪ್ರದರ್ಶಿಸಿ ಎಂಜಾಯ್ ಮಾಡಿದ್ರು.