ಅತ್ಯಾಚಾರದ ಕೇಸ್​ ದಾಖಲಿಸಲು ಬಂದ ಸಂತ್ರಸ್ತೆಯಿಂದ ಖಾಕಿಗೆ ಕೊರೊನಾ​, ಎಲ್ಲಿ?

ಚಾಮರಾಜನಗರ: ಮಹಿಳಾ ದೂರುದಾರರಿಂದ ಪೊಲೀಸರಿಗೆ ಕೊರೊನಾ ತಗಲಿರುವ ಘಟನೆ ಜಿಲ್ಲೆಯ ಕೊಳ್ಳೇಗಾಲದಲ್ಲಿ ನಡೆದಿದೆ. ಇದರ ಪರಿಣಾಮ ಸರ್ಕಲ್ ಇನ್​ಸ್ಪೆಕ್ಟರ್​ ಕಚೇರಿ ಸೀಲ್​ಡೌನ್ ಆಗಿದೆ.

ಮಹಿಳೆಯು ತನ್ನ ಮೇಲೆ ಅತ್ಯಾಚಾರವಾಗಿದೆ ಎಂದು ಠಾಣೆಗೆ ಬಂದು ದೂರು ದಾಖಲಿಸಿದ್ದರು. ಇನ್ನು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದ ವೇಳೆ ಮಹಿಳೆಗೆ ಕೊರೊನಾ ಪಾಸಿಟಿವ್​ ಎಂದು ತಿಳಿದುಬಂದಿದೆ. ಇದೀಗ, ಸಂತ್ರಸ್ತೆಯಿಂದ ಠಾಣೆಯ ಪೊಲೀಸರಿಗೆ ಸಹ ವೈರಸ್​ ಅಂಟಿದೆ.

ಇನ್ನು ಸಿಬ್ಬಂದಿಗೆ ಕೊರೊನಾ ದೃಢವಾಡ ಹಿನ್ನೆಲೆಯಲ್ಲಿ ಸಿಪಿಐ ಕಚೇರಿ ಸೀಲ್​ಡೌನ್ ಮಾಡಲಾಗಿದೆ.

Related Tags:

Related Posts :

Category: