ರೈತರಿಂದ ಪಡೆದ ಲಂಚ ವಾಪಸ್​ ಕೊಡ್ತೀನಿ ಎಂದ ಸರ್ಕಾರಿ ಅಧಿಕಾರಿ, ಎಲ್ಲಿ?

ಹೈದರಾಬಾದ್​: ಸಾಮಾನ್ಯವಾಗಿ ತಮ್ಮ ಕೆಲಸ ಮಾಡಿಸಿಕೊಳ್ಳಲು ಅಧಿಕಾರಿಗಳ ಒತ್ತಡದಿಂದ ಜನಸಾಮಾನ್ಯರು ಲಂಚ ನೀಡಬೇಕಾದ ಪ್ರಸಂಗ ಎದುರಾಗುವುದು ಖಚಿತ ಎಂಬಷ್ಟು ಸಾಮಾನ್ಯವಾಗಿದೆ. ಆದರೆ, ಜನರ ಹತ್ತಿರ ಪಡೆದ ಲಂಚವನ್ನ ಸರ್ಕಾರಿ ಅಧಿಕಾರಿಯೊಬ್ಬ ವಾಪಸ್​ ಮಾಡೋಕೆ ಲಿಖಿತ ಆಶ್ವಾಸನೆ ನೀಡಿರುವ ಸ್ವಾರಸ್ಯಕರ ಘಟನೆ ತೆಲಂಗಾಣದ ಕೊಮರಮ್​ ಭೀಮ್​ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

ಜಿಲ್ಲೆಯ ಚಿಂತಲಾ ಮಣೆಪಲ್ಲೆ ಮಂಡಲ್​ ವಿಭಾಗದಲ್ಲಿ ತೆಲಂಗಾಣ ಸರ್ಕಾರವು ರೈತರಿಗೆ ಕೃಷಿಗೆಂದು ಜಮೀನು ಮಂಜೂರು ಮಾಡಿತ್ತು. ಆದರೆ, ನಾಲ್ಕು ವರ್ಷವಾದರೂ ಆ ಜಮೀನು ರೈತರ ಪಾಲಿಗೆ ಬರಲೇ ಇಲ್ಲ. ಅದಕ್ಕೆ ಕಾರಣ ಸ್ಥಳೀಯ ಅಧಿಕಾರಿಗಳ ಲಂಚಬಾಕತನ. ಹೀಗಾಗಿ, ಈ ಸಲ ಏನೇ ಅದರೂ ಜಮೀನು ಪಡೆಯಲೇಬೇಕು ಎಂಬ ಹಠದಿಂದ ಗ್ರಾಮಸ್ಥರು ಮಂಡಲ್​ ಕಂದಾಯ ಅಧಿಕಾರಿಗೆ ಲಂಚ ನೀಡೋಕೆ ಮುಂದಾದರು. ಕೆಲವರು 40 ಸಾವಿರ ನೀಡಿದರೆ ಮತ್ತೆ ಕೆಲವರು 2 ಕ್ವಿಂಟಾಲ್​ ಈರುಳ್ಳಿ ಸಹ ಲಂಚವಾಗಿ ಕೊಟ್ಟಿದ್ದರಂತೆ. ಹೀಗೆ ಲಂಚ ಕೊಟ್ಟಿದ್ದ ಸುಮಾರು 200 ರೈತರಿಗೆ ಜಮೀನು ಮಂಜೂರು ಮಾಡುವುದಾಗಿ ಆ ಅಧಿಕಾರಿ ಭರವಸೆ ಸಹ ನೀಡಿದ್ದನಂತೆ.

ಗ್ರಾಮಸ್ಥರ ಪ್ರತಿಭಟನೆಗೆ ಮಣಿದ ಅಧಿಕಾರಿ, 2 ಕೋಟಿ ರೂ. ಲಂಚ!
ಆದರೆ, ನಿನ್ನೆ ಇದಕ್ಕಿದ್ದಂತೆ ಕಂದಾಯ ಅಧಿಕಾರಿಯನ್ನ ವರ್ಗಾವಣೆ ಮಾಡಲಾಯಿತಂತೆ. ಈ ಸುದ್ದಿ ತಮ್ಮ ಕಿವಿಗೆ ಬೀಳುತ್ತಿದ್ದಂತೆ ಕಚೇರಿಗೆ ಓಡಿ ಬಂದ ಗ್ರಾಮಸ್ಥರು ತಾವು ನೀಡಿದ್ದ ಲಂಚ ವಾಪಸ್​ ಮಾಡೋಕೆ ಡಿಮ್ಯಾಂಡ್​ ಇಟ್ಟಿದ್ದಾರೆ. ಪ್ರತಿಭಟನೆ ಸಹ ಮಾಡಿದ್ದಾರೆ. ಇದಕ್ಕೆ ಮಣಿದ ಆ ಅಧಿಕಾರಿ ಕೊನೆಗೆ ಹಣ ವಾಪಸ್​ ಮಾಡೋದಾಗಿ ಲಿಖಿತ ಆಶ್ವಾಸನೆ ಕೊಟ್ಟಿದ್ದಾನೆ.
ಅಂದ ಹಾಗೆ, ಅಧಿಕಾರಿ ಪಡೆದ ಒಟ್ಟು ಲಂಚ ಎಷ್ಟು ಗೊತ್ತಾ? ಬರೋಬ್ಬರಿ 2 ಕೋಟಿ ರೂಪಾಯಿ!

Related Tags:

Related Posts :

Category:

error: Content is protected !!