KPCC ಸೋಶಿಯಲ್ ಮೀಡಿಯಾ ಸೆಕ್ರೆಟರಿ ಅರೆಸ್ಟ್, ಕಾರಣವೇನು ಗೊತ್ತಾ?

ಬೆಂಗಳೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪಾರ್ಹ ಬರಹ ಬರೆದ ಹಿನ್ನೆಲೆಯಿಂದ KPCC ಸೋಶಿಯಲ್ ಮೀಡಿಯಾ ಸೆಕ್ರೆಟರಿ ಆನಂದ ಪ್ರಸಾದ್ ಅವರನ್ನು ಬೆಂಗಳೂರಿನ ಪೊಲೀಸರು ನಿನ್ನೆ ರಾತ್ರಿ ಬಂಧಿಸಿದ್ದಾರೆ.

KPCC ಸೋಶಿಯಲ್ ಮೀಡಿಯಾ ಸೆಕ್ರೆಟರಿ ಆನಂದ ಪ್ರಸಾದ್ ಸಾಮಾಜಿಕ ಜಾಲತಾಣ ಟ್ವಿಟರ್ನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಅವಹೇಳನಕಾರಿ ಬರಹ ಬರೆದಿದ್ದರೆಂದು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 505 (1)(b), 505(1) (C),153 ಅಡಿ ಎಫ್ಐಆರ್ ದಾಖಲಾಗಿತ್ತು. ದೂರಿನ ಅನ್ವಯ ನೆನ್ನೆ ರಾತ್ರಿ ಕೆಆರ್ ಪುರಂ ನಲ್ಲಿರುವ ನಿವಾಸದಲ್ಲಿ ಆನಂದ್ ಪ್ರಸಾದ್ ರವರನ್ನು ಕಬ್ಬನ್ ಪಾರ್ಕ್ ಪೊಲೀಸರು ಅರೆಸ್ಟ್ ಮಾಡಿದ್ದು, ಸದ್ಯ ಟ್ವಿಟರ್ ನಲ್ಲಿ ಆನಂದ ಪ್ರಸಾದ್ ಬರೆದಿದ್ದ ಬರಹವನ್ನು ಡಿಲೀಟ್ ಮಾಡಲಾಗಿದೆ.

Related Tags:

Related Posts :

Category: