ಕೆಪಿಎಲ್‌ ಫಿಕ್ಸಿಂಗ್: 2-3 ವರ್ಷದಿಂದ್ಲೂ ಚಾಲ್ತಿಯಲ್ಲಿದ್ದ ಭಾರೀ ಕುಳ ಅಲಿ ಅರೆಸ್ಟ್

ಕೆಪಿಎಲ್‌ ಬೆಟ್ಟಿಂಗ್ ಮತ್ತು ಮ್ಯಾಚ್ ಫಿಕ್ಸಿಂಗ್ ಪ್ರಕರಣ ಸಂಬಂಧ ಬೆಳಗಾವಿ ಪ್ಯಾಂಥರ್ಸ್ ಮಾಲೀಕ ಮುಷ್ತಾಕ್ ಅಲಿ ಬಂಧನವಾಗಿದೆ. ಆರೋಪಿ ಮುಷ್ತಾಕ್ ಅಲಿನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಅಲಿ, ದುಬೈ ಮೂಲದ ಬುಕ್ಕಿ ಜತೆ ಸೇರಿ ಬೆಟ್ಟಿಂಗ್‌ ನಡೆಸ್ತಿದ್ದ ಎಂದು ಆರೋಪಿಸಲಾಗಿದೆ. ಹಲವು ಆಟಗಾರರ ಜತೆಯೂ ಸಂಪರ್ಕ ಸಾಧಿಸಿ, ಮುಷ್ತಾಕ್ ಅಲಿ ಈ ಧಂಧೆಯಲ್ಲಿ ತೊಡಗಿದ್ದ ಎನ್ನಲಾಗಿದೆ. ಸಿಸಿಬಿ ಪೊಲೀಸರು ಮುಷ್ತಾಕ್​ನಿಂದ 2 ಮೊಬೈಲ್ ವಶಕ್ಕೆ ಪಡೆದಿದ್ದಾರೆ.

ಇನ್ನು, ಇದೇ ಕೆಪಿಎಲ್​ ಕ್ರಿಕೆಟ್​ ಬೆಟ್ಟಿಂಗ್, ಮ್ಯಾಚ್ ಫಿಕ್ಸಿಂಗ್ ಪ್ರಕರಣದಲ್ಲಿ ಇಬ್ಬರು ಅಂತಾರಾಷ್ಟ್ರೀಯ ಮಾಜಿ ಆಟಗಾರರು ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ. ಮುಷ್ತಾಕ್​ ಅಲಿನನ್ನು ಬಂಧಿಸಿ, ವಿಚಾರಣೆ ನಡೆಸಿರುವ ವೇಳೆ ಈ ಮಾಹಿತಿ ಬಯಲಾಗಿದೆ.

ಬೆಂಗಳೂರು ಪೊಲೀಸರಿಗೆ ಬಿಸಿಸಿಐ ದೂರು ನೀಡಿದ್ದರ ಹಿನ್ನೆಲೆ ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ನೇತೃತ್ವದಲ್ಲಿ ತನಿಖೆ ನಡೆದಿದೆ. ಬುಕ್ಕಿಂಗ್ ಬಗ್ಗೆ ಕೆಲ ರಣಜಿ ಆಟಗಾರರಿಗೂ ಮಾಹಿತಿ ಇತ್ತು. ಮಾಹಿತಿ ಇದ್ದರೂ ಆ ಆಟಗಾರರು ಏನೂ ಮಾಡದ ಸ್ಥಿತಿಯಲ್ಲಿದ್ದರು ಎಂದು ವಿಚಾರಣೆ ವೇಳೆ ಮುಷ್ತಾಕ್​ ಅಲಿ ಮಾಹಿತಿ ಹೊರಹಾಕಿದ್ದಾನೆ.

ಫೋನ್​ನಲ್ಲಿ ಅಲಿ ಜತೆ 20ಕ್ಕೂ ಹೆಚ್ಚು ಆಟಗಾರರ ಸಂಪರ್ಕ ಸಾಧಿಸಿದ್ದ. ಪಂದ್ಯ ಆರಂಭಕ್ಕೂ ಮುನ್ನ ಆಟಗಾರರ ಜತೆ ಅಲಿ ಸಂಪರ್ಕದಲ್ಲಿರುತ್ತಿದ್ದ. ಆಟಗಾರರ ಜತೆ ಅಲಿ ಸಂಪರ್ಕಿಸಿರುವ ಸಾಕ್ಷ್ಯಗಳು ಲಭ್ಯವಾಗಿವೆ. ಬೇರೆ ಬೇರೆ ಜಿಲ್ಲೆಗಳಿಂದ ಬರುವ ಆಟಗಾರರಿಗೆ ಇಂದಿರಾನಗರದ ಅಪಾರ್ಟ್​ಮೆಂಟ್​ನಲ್ಲಿ ವ್ಯವಸ್ಥೆ ಮಾಡಿರುತ್ತಿದ್ದ ಅಲಿ. ಊಟ, ತಿಂಡಿ, ಪಾರ್ಟಿ, ಹಣ ಎಲ್ಲವನ್ನೂ ಅವನೇ ನೋಡಿಕೊಳ್ಳುತ್ತಿದ್ದ.

ಕಳೆದ 2-3 ವರ್ಷಗಳಿಂದಲೂ ಇಂತಹುದ್ದೇ ವ್ಯವಸ್ಥೆ ಮಾಡುತ್ತಿದ್ದ ಅಲಿ. ಪಂದ್ಯಾವಳಿ ವೇಳೆ ಬೇರೆ ಬೇರೆ ತಂಡಗಳಲ್ಲಿರುವ ಆಟಗಾರರನ್ನು ತನ್ನ ಬುಟ್ಟಿಗೆ ಬೀಳಿಸಿಕೊಂಡು, ಫಿಕ್ಸಿಂಗ್ ಮಾಡ್ತಿದ್ದ. ನೋ ಬಾಲ್, ವೈಡ್​  ಮುಂತಾದುವನ್ನು ಮೊದಲೇ ಫಿಕ್ಸ್​ ಮಾಡ್ತಿದ್ದ ಅಲಿ. ಅಲಿ ಟೂರ್ಸ್ & ಟ್ರಾವೆಲ್ಸ್​ ಕಂಪನಿ ನಡೆಸುತ್ತಿದ್ದಾನೆ. ದುಬೈನಲ್ಲೂ ಸಹ ಕಚೇರಿ ತೆರೆದಿದ್ದ ಮುಷ್ತಾಕ್ ಅಲಿ. ದುಬೈ, ಮುಂಬೈನಲ್ಲಿನ ಬುಕ್ಕಿಗಳ ಜತೆಯೂ ಸಂಪರ್ಕದಲ್ಲಿರುತ್ತಿದ್ದ. ಒಂದು ಟೂರ್ನಮೆಂಟ್​ ವೇಳೆ 50 ಕೋಟಿ ದಂಧೆ ಮಾಡ್ತಿದ್ದ ಎಂದು ಸಿಸಿಬಿ ಆಯುಕ್ತ ಸಂದೀಪ್ ಪಾಟೀಲ್ ಹೇಳಿದ್ದಾರೆ.

 

Related Tags:

Related Posts :

Category:

error: Content is protected !!