ಬೆಂಗಳೂರು: ಕೆಪಿಎಲ್ ಕ್ರಿಕೆಟ್ ಬೆಟ್ಟಿಂಗ್ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಮ್ಯಾಚ್ ಫಿಕ್ಸಿಂಗ್ ರಿಂಗ್ ಮಾಸ್ಟರ್ ಸುಧೀಂದ್ರ ಶಿಂಧೆನನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇಂದಿರಾ ನಗರದಲ್ಲಿರುವ ಮಾಜಿ ರಣಜಿ ಆಟಗಾರ ಸುಧೀಂದ್ರ ಶಿಂಧೆ ಅವರ ಮನೆ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ಮಾಡಿದ್ದರು. ಶಿಂಧೆ, ಹಾಲಿ ಕೆಎಸ್ಸಿಎ ಆಡಳಿತ ಮಂಡಳಿ ಸದಸ್ಯ ಹಾಗೂ ಅಂಡರ್ 19 ತಂಡದ ಕೋಚ್ ಮತ್ತು ಬೆಳಗಾವಿ ಪ್ಯಾಂಥರ್ಸ್ ಕೋಚ್ ಸಹ ಆಗಿದ್ದರು. ಕೆಪಿಎಲ್ ಟೂರ್ನಿಗೆ ಆಟಗಾರರ ಆಯ್ಕೆಯಲ್ಲೂ ಹಣ ಪಡೆದಿದ್ದಾರೆಂದು ಗಂಭೀರ ಆರೋಪ ಕೇಳಿಬಂದಿದೆ.
ಹಣ ನೀಡಿದವರನ್ನ ಮಾತ್ರ ಆಯ್ಕೆ ಮಾಡ್ತಿದ್ದ:
ಆಟಗಾರರು ಗ್ರೌಂಡ್ಗೆ ಇಳಿಯಬೇಕೆಂದ್ರೆ ಶಿಂಧೆಗೆ ಹಣ ನೀಡಬೇಕಿತ್ತು. ಹಣ ನೀಡಿದವರನ್ನಷ್ಟೇ ಸುಧೀಂದ್ರ ಶಿಂಧೆ ಆಯ್ಕೆ ಮಾಡ್ತಿದ್ದ. ಕೆಎಸ್ಸಿಎ ಮಾನ್ಯತೆ ಪಡೆದ ಕ್ಲಬ್ಗಳ ಮಾರಾಟದಲ್ಲಿ ದೊಡ್ಡ ದಂಧೆ ಇದೆ ಎನ್ನಲಾಗಿದೆ. ಬೇರೆ ಬೇರೆ ತಂಡದ ಆಟಗಾರರನ್ನ ಸಂಪರ್ಕ ಮಾಡಿ ಮ್ಯಾಚ್ ಫಿಕ್ಸಿಂಗ್ ಮಾಡ್ತಿದ್ದ. ಆಟಗಾರರಿಗೆ ದುಡ್ಡು, ಪಾರ್ಟಿ, ಸ್ಟೇಯಿಂಗ್ ಸೇರಿದಂತೆ ಸಕಲ ವ್ಯವಸ್ಥೆ ಮಾಡ್ತಿದ್ದ ಎಂಬ ಆರೋಪಗಳು ಕೇಳಿಬಂದಿವೆ.