ಈಶ್ವರಪ್ಪ ಯಾಕೆ ಯಡಿಯೂರಪ್ಪ ಹುಟ್ಟುಹಬ್ಬ ಕಾರ್ಯಕ್ರಮಕ್ಕೆ ಬರಲಿಲ್ಲ!?

ಬೆಂಗಳೂರು: ಪ್ಯಾಲೇಸ್ ಗ್ರೌಂಡ್​ನಲ್ಲಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ 78ನೇ ಜನ್ಮ ದಿನ ನಿನ್ನೆ ಸಂಜೆ ಅದ್ಧೂರಿಯಾಗಿ ನಡೆಯಿತು. ದಿಲ್ಲಿಯಿಂದ ಕೇಂದ್ರ ಸಚಿವ ರಾಜನಾಥ್ ಸಿಂಗ್ ಸೇರಿದಂತೆ, ಇಲ್ಲಿನ ಕೆಲ ಮಾಜಿ ಮುಖ್ಯಮಂತ್ರಿಗಳು ಸಹ ಕಾರ್ಯಕ್ರಮಕ್ಕೆ ಬಂದು ಬಿಎಸ್​ವೈಗೆ ಮನದುಂಬಿ ಹಾರೈಸಿದರು.

ಮಧ್ಯೆ, ಒಂದಿಬ್ಬರು ಅಂದ್ರೆ ಯಡಿಯೂರಪ್ಪನವರ ಆತ್ಮೀಯ ಶಿವಮೊಗ್ಗದ ಹಕ್ಕ-ಬುಕ್ಕ ಎಂದೇ ಖ್ಯಾತರಾದ ಸಚಿವ ಕೆ.ಎಸ್ ಈಶ್ವರಪ್ಪ ದೂರವೇ ಉಳಿದಿದ್ದರು. ಇನ್ನು ಮಾಜಿ ಸಿಎಂ ಕುಮಾರಸ್ವಾಮಿ ತಮ್ಮ ಪುತ್ರನ ಮದುವೆ ತಯಾರಿಯಲ್ಲಿ ಬಿಜಿಯಾಗಿದ್ದರಿಂದ ಅರಮನೆ ಮೈದಾನದವರೆಗೂ ಬರಲಾಗಿಲ್ಲ ಎನ್ನಲಾಗಿದೆ.

ಅತ್ತ ಈಶ್ವರಪ್ಪ ಎಷ್ಟು ದೂರ ಉಳಿದಿದ್ದರು ಅಂದ್ರೆ ಶಿವಮೊಗ್ಗದಲ್ಲಿಯೇ ಠಿಕಾಣಿ ಹೂಡಿಬಿಟ್ಟಿದ್ದರು. ಯಾಕಪ್ಪ ಅಂದ್ರೆ ನಿನ್ನೆ ಬೆಳಿಗ್ಗೆ ಶಿವಮೊಗ್ಗದಲ್ಲಿ ಯಡಿಯೂರಪ್ಪ ಹುಟ್ಟುಹಬ್ಬ ಕಾರ್ಯಕ್ರಮ ನಿಮಿತ್ತ ಆರೋಗ್ಯ ಶಿಬಿರ ಮತ್ತು ಯಡಿಯೂರಪ್ಪ ಅವ್ರಿಗೆ ಉತ್ತಮ ಆಯುಷ್ಯ, ಆರೋಗ್ಯ ಕೊಡಲಿ ಅಂತಾ ಹೋಮ, ಹವನ ಶಾಸ್ತ್ರದಲ್ಲಿ ಪಾಲ್ಗೊಂಡಿದ್ದೆ. ಅಲ್ಲದೆ ನಿನ್ನೆ ಕೆಲ ದೇವಾಲಯಗಳ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಕ್ಕಾಗಿ ಜನ್ಮದಿನದ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಲಿಲ್ಲ ಎಂದು ಸ್ವತಃ ಈಶ್ವರಪ್ಪ ಅವರೇ ಸ್ಪಷ್ಟನೆ ನೀಡಿದ್ದಾರೆ.

Related Posts :

Category:

error: Content is protected !!