ಲಾರಿಗೆ ಸ್ಕೂಟರ್ ಡಿಕ್ಕಿ, KSRP ಕಾನ್ಸ್‌ಟೇಬಲ್ ಸ್ಥಳದಲ್ಲೇ ಸಾವು

ಕೋಲಾರ: ಲಾರಿಗೆ ಸ್ಕೂಟರ್ ಡಿಕ್ಕಿಯಾಗಿ ಸವಾರ ಸ್ಥಳದಲ್ಲೇ ಸಾವನ್ನಪ್ಪಿರೋ ಘಟನೆ ಜಿಲ್ಲೆಯ ನರಸಾಪುರ ಬಳಿ ನಡೆದಿದೆ. KSRPಯಲ್ಲಿ ಪೇದೆಯಾಗಿ ಸೇವೆ ಸಲ್ಲಿಸುತ್ತಿದ್ದ ಮುರುಗೇಶ್ ಮೃತ ದುರ್ದೈವಿ.

ಬೆಂಗಳೂರಿನ KSRPಯಲ್ಲಿ ಕೆಲಸ‌ ಮಾಡುತ್ತಿದ್ದ ಮುರುಗೇಶ್ ಸ್ಕೂಟರ್​ ಓಡಿಸುವಾಗ ಚಲಿಸುತ್ತಿದ್ದ ಲಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದ್ದಾರೆ ಎಂದು ತಿಳಿದುಬಂದಿದೆ. ಇನ್ನು, ಸ್ಥಳಕ್ಕೆ ವೇಮಗಲ್ ಪೊಲೀಸರ ಭೇಟಿ ನೀಡಿ, ಪರಿಶೀಲನೆ ನಡೆಸಿದರು.

Related Tags:

Related Posts :

Category:

error: Content is protected !!