KSRTC ನೌಕರರಿಗಾಗಿ ಪೀಣ್ಯ ಬಸ್‌ ನಿಲ್ದಾಣ ಕೋವಿಡ್‌ ಆಸ್ಪತ್ರೆಯಾಯ್ತು!

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ತನ್ನ ನೌಕರರು ಕೊರೊನಾ ಸೋಂಕಿತರಾಗುತ್ತಿರೋದ್ರಿಂದ ಚಿಂತಿತವಾಗಿದ್ದು, ಇದಕ್ಕಾಗಿ ಪೀಣ್ಯದಲ್ಲಿರುವ ಬಸವೇಶ್ವರ ಬಸ್‌ ನಿಲ್ದಾಣವನ್ನೇ ಕೋವಿಡ್‌ ಆಸ್ಪತ್ರೆಯನ್ನಾಗಿ ಪರಿವರ್ತಿಸಿದೆ.

ಈ ಸಂಬಂಧ 200 ಬೆಡ್‌ಗಳ ಕೋವಿಡ್ ಕೇರ್ ಸೆಂಟರ್ ಅನ್ನು ಇಂದು ಡಿಸಿಎಂ ಹಾಗೂ ಸಾರಿಗೆ ಸಚಿವ ಲಕ್ಷ್ಮಣ‌ ಸವದಿ ಉದ್ಘಾಟಿಸಿದ್ದಾರೆ. ಪೀಣ್ಯದ ಬಸವೇಶ್ವರ ಬಸ್ ನಿಲ್ದಾಣದಲ್ಲಿರುವ ಈಗ ಕೋವಿಡ್ ಕೇರ್ ಸೆಂಟರ್‌ನಲ್ಲಿ 200 ಬೆಡ್‌ಗಳ ವ್ಯವಸ್ಥೆ ಇದೆ. ಇಲ್ಲಿ ಅಡ್ಮಿಟ್‌ ಆಗುವ ಸೋಂಕಿತರ ಆರೈಕೆ ಕೇಂದ್ರಕ್ಕಾಗಿ ಬಸ್‌ ನಿಲ್ದಾಣದ ವಿವಿಧ ಹಾಲ್‌ಗನ್ನು ಬಳಕೆ ಮಾಡಿಕೊಳ್ಳಲಾಗ್ತಿದೆ.

ಇನ್ನು ಇಲ್ಲಿರುವ ಶೇ 50 ರಷ್ಟು ಬೆಡ್‌ಗಳನ್ನು ಸಾರಿಗೆ ನೌಕರರಿಗೆ ಮೀಸಲಾಗಿಟ್ಟಿದ್ದು, ಇನ್ನುಳಿದ ಶೇ. 50ರಷ್ಟು ಬೆಡ್‌ಗಳನ್ನು ಇತರೆ ರೋಗಿಗಳ ಬಳಕೆಗೆ ಬಳಸಲಾಗುವುದು. ಈ ಆಸ್ಪತ್ರೆಯನ್ನು 8ನೇ ಮೈಲಿಯ ಪ್ರಕ್ರಿಯ ಖಾಸಗಿ ಆಸ್ಪತ್ರೆ ನಿರ್ವಹಣೆ ಮಾಡಲಿದೆ. KSRTC, ರೋಟರಿ ಅಡ್ವಿಕಾ ಕೇರ್ ಫೌಂಡೇಷನ್ ಮತ್ತು ನಯೋನಿಕಾ ಐ ಟ್ರಸ್ಟ್ ಸಹಯೋಗದಲ್ಲಿ ಇಲ್ಲಿ 10 ಬೆಡ್‌ಗಳ ICU ವ್ಯವಸ್ಥೆಯನ್ನು ಕೂಡಾ ಕಲ್ಪಿಸಲಾಗಿದೆ.

ಇಷ್ಟೇ ಅಲ್ಲ 2.50 ಲಕ್ಷ ಖರ್ಚಿನಲ್ಲಿ ಒಂದು ಮಿನಿಬಸ್‌ ಅನ್ನು ಌಂಬುಲೆನ್ಸ್‌ ಆಗಿ ಮಾರ್ಪಾಡು ಮಾಡಲಾಗಿದೆ. ಈ ಌಂಬುಲೆನ್ಸ್‌ನಲ್ಲಿ ಆಕ್ಸಿಜನ್‌ ಸೇರಿ ಌಂಬುಲೆನ್ಸ್‌ನಲ್ಲಿ ಇರಬೇಕಾದ ಎಲ್ಲಾ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

Related Tags:

Related Posts :

Category: