ಕುಣಿಗಲ್ ಶಾಸಕ ಡಾ ರಂಗನಾಥ್‌ಗೆ ಕೊರೊನಾ, ಕ್ವಾರಂಟೈನ್‌ ಆಗ್ತಾರಾ ಕಾಂಗ್ರೆಸ್‌ ನಾಯಕ?

ಬೆಂಗಳೂರು: ಕುಣಿಗಲ್‌ ಶಾಸಕ ಹಾಗೂ ಕಾಂಗ್ರೆಸ್‌ ನಾಯಕ ಡಾ. ರಂಗನಾಥ್‌ಗೆ ಕೊರೊನಾ ಪಾಸಿಟಿವ್‌ ಇರೋದು ಕನ್‌ಫರ್ಮ್‌ ಆಗಿದೆ. ಹೀಗಾಗಿ ರಂಗನಾಥ್‌ ಈಗ ಬೆಂಗಳೂರಿನ ಮಣಿಪಾಲ್‌ ಆಸ್ಪತ್ರೆಗೆ ದಾಖಲಾಗಿದ್ದಾರೆ.

ರವಿವಾರ ಕೊರೊನಾ ಪರೀಕ್ಷೆಗೊಳಗಾಗಿದ್ದ ಡಾ. ರಂಗನಾಥ್‌ಗೆ ಸೋಂಕು ತಗುಲಿದ್ದು ಕಾಂಗ್ರೆಸ್‌ ನಾಯಕರಿಗೆ ಬರಸಿಡಿಲು ಬಡಿದಂತಾಗಿದೆ. ಯಾಕಂದ್ರೆ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಕಾಂಗ್ರೆಸ್‌ನ ಪ್ರತಿಜ್ಞಾ ಕಾರ್ಯಕ್ರಮದ ಸಿದ್ದತೆಯ ಜವಾಬ್ದಾರಿಯನ್ನ ಇವರೆ ಹೋತ್ತಿದ್ದರು. ಹೀಗಾಗಿ ಕಾಂಗ್ರೆಸ್‌ನ ಪ್ರಮುಖ ನಾಯಕರ ಜತೆ ಸಂಪರ್ಕದಲ್ಲಿದ್ದರು.

ಇಷ್ಟೇ ಅಲ್ಲ ಕಾರ್ಯಕ್ರಮ ನಡೆದಾಗ ಎಲ್ಲಾ ಹಿರಿಯ ನಾಯಕರು ಕೂತಿದ್ದ ಫ್ಲೋರ್‌ನಲ್ಲೇ ಡಾ. ರಂಗನಾಥ್‌ ಕೂಡಾ ಕೂಳಿತಿದ್ದರು. ಜೊತೆಗೆ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನ ಕಾರ್ಯಕ್ರಮದ ಬಳಿಕ ಕಾರ್‌ವರೆಗೂ ಬಿಟ್ಟು ಬಂದಿದ್ರು. ಹೀಗಾಗಿ ಈಗ ಇವರ ಜತೆ ಪ್ರಾಥಮಿಕ ಸಂಪರ್ಕದಲ್ಲಿದ್ದ ಕಾಂಗ್ರೆಸ್‌ನ ಹಿರಿಯ ನಾಯಕರಲ್ಲಿ ಆತಂಕ ಮೂಡಿದೆ. ಜೊತೆಗೆ ಕಾಂಗ್ರೆಸ್‌ ನಾಯಕರು ಕ್ವಾರಂಟೈನ್‌ ಆಗ್ತಾರಾ ಅನ್ನೋ ಪ್ರಶ್ನೆ ಕೂಡಾ ಮೂಡಿದೆ.

Related Tags:

Related Posts :

Category:

error: Content is protected !!