ಪ್ರಧಾನಿ ಮೋದಿಯಿಂದ ಶ್ಲಾಘನೆ ಪಡೆದ ಕಾಮೇಗೌಡ್ರಿಗೆ ಸಿಕ್ತು ಮತ್ತೊಂದು ಸ್ಪೆಷಲ್ ಗಿಫ್ಟ್​?!

ಬೆಂಗಳೂರು: ಇತ್ತೀಚೆಗೆ ನಡೆದ ಮನ್​ ಕೀ ಬಾತ್​ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿಯವರಿಂದ ತಮ್ಮ ಕಾರ್ಯಕ್ಕೆ ಶ್ಲಾಘನೆ ಪಡೆದ ಮಂಡ್ಯದ ದಾಸನದೊಡ್ಡಿಯ ಕಾಮೇಗೌಡರಿಗೆ ಇದೀಗ ಕರ್ನಾಟಕ ಸರ್ಕಾರ ಭರ್ಜರಿ ಉಡುಗೊರೆ ಒಂದನ್ನು ನೀಡಿದೆ.

ಇದನ್ನೂ ಓದಿ: ಕೆರೆಗಳ ಹರಿಕಾರ ಕನ್ನಡಿಗ ಕಾಮೇಗೌಡರ ಬಗ್ಗೆ ಪ್ರಧಾನಿ ಮೋದಿ ಶ್ಲಾಘನೆ

ಕಾಮೇಗೌಡರಿಗೆ ಸಿಕ್ತು ಲೈಫ್​ಟೈಮ್​ ಬಸ್​ ಪಾಸ್​..!
ಕೆರೆಗಳ ಹರಿಕಾರ, ‘ಆಧುನಿಕ ಭಗೀರಥ’ ಎಂದೇ ಪ್ರಖ್ಯಾತಿ ಪಡೆದಿರುವ ಕಾಮೇಗೌಡರಿಗೆ KSRTC ಸಂಸ್ಥೆಯು ತನ್ನ ಎಲ್ಲಾ ಬಸ್​ಗಳಲ್ಲಿ, ಕಾಮೇಗೌಡರು ತಮ್ಮ ಜೀವನುದ್ದಕ್ಕೂ ಉಚಿತವಾಗಿ ಪ್ರಯಾಣಿಸಲು ಲೈಫ್​ಟೈಮ್​ ಬಸ್ ಪಾಸ್ ನೀಡಿದೆ. ಸಾರಿಗೆ ಸಂಸ್ಥೆಯ ಟ್ವಿಟರ್​ ಖಾತೆಯ ಮೂಲಕ ಇದನ್ನು ಹಂಚಿಕೊಂಡ ವ್ಯವಸ್ಥಾಪಕ‌ ನಿರ್ದೇಶಕ ಶಿವಯೋಗಿ ಸಿ. ಕಳಸದ ಮುಖ್ಯಮಂತ್ರಿ ಮತ್ತು ಕರ್ನಾಟಕ ಸರ್ಕಾರ ಶ್ರೀ ಕಾಮೇಗೌಡ ಅವರ ಅಪರಿಮಿತ ಸಾಧನೆಗಾಗಿ ಈ ಉಚಿತ ಬಸ್​ ಪಾಸ್ ನೀಡಲು ಆದೇಶಿಸಿದ್ದಾರೆ ಎಂದು ಉಲ್ಲೇಖಿಸಿದ್ದಾರೆ.

Related Tags:

Related Posts :

Category:

error: Content is protected !!