ಕೋಲಾರದ ಅಂತರಗಂಗೆ ಶ್ರೀ ಕಾಶಿ ವಿಶ್ವೇಶ್ವರಸ್ವಾಮಿಯ ಕಾರ್ತಿಕ ದೀಪೋತ್ಸವ ವೈಭವ..

ಕೋಲಾರದ ಅಂತರಗಂಗಾ ಪ್ರಸಿದ್ಧ ಧಾರ್ಮಿಕ ಸ್ಥಳ. ಇಲ್ಲಿನ ಶ್ರೀ ಕಾಶಿ ವಿಶ್ವೇಶ್ವರಸ್ವಾಮಿಯ ನೆಲೆಯಲ್ಲಿ ಭಕ್ತರು ಲಕ್ಷದೀಪೋತ್ಸವ ಆಚರಿಸಿದರು. ಅದರ ಫೋಟೊ ಸ್ಟೋರಿ ಇಲ್ಲಿದೆ..

  • guruganesh bhat
  • Published On - 18:42 PM, 30 Nov 2020
ಅಂತರಗಂಗೆ ಶತಶೃಂಗ ಪರ್ವತ ಶ್ರೇಣಿಯಲ್ಲಿರುವ ಪ್ರಮುಖ ಧಾರ್ಮಿಕ ಸ್ಥಳ
ಭಕ್ತಿಯಿಂದ ಕಾಶಿ ವಿಶ್ವೇಶ್ವರನಿಗೆ ತೆಪ್ಪೋತ್ಸವ ಸೇವೆ ಮಾಡುತ್ತಾರೆ.
ಶ್ರದ್ಧಾ ಭಕ್ತಿಯಿಂದ ದೀಪೋತ್ಸವ ಆಚರಿಸುತ್ತಾರೆ.
ತೆರಳುವ ದಾರಿಯುದ್ದಕ್ಕೂ ಭಕ್ತರು ಹಣತೆ ಬೆಳಗುತ್ತಾರೆ.
ಹಣತೆಗಳನ್ನು ವೀಕ್ಷಿಸುತ್ತಿದ್ದರೆ ದೈವಿಕ ಭಾವ ಮೂಡುತ್ತದೆ.
ದಕ್ಷಿಣದ ಕಾಶಿಯೆಂದೇ ಅಂತರಗಂಗೆ ಪ್ರಸಿದ್ಧವಾಗಿದೆ.
ನಂದಿಯ ಬಾಯಿಂದ ಬೀಳುವ ಪವಿತ್ರ ನೀರುಕಲ್ಯಾಣಿಯಲ್ಲಿ ಸಂಗ್ರಹವಾಗುತ್ತದೆ.
ಕಲ್ಯಾಣಿಯ ಸುತ್ತಲೂ ದೀಪಗಳು ನರ್ತಿಸದಂತೆ ಭಾಸವಾಗುತ್ತದೆ.
ಪ್ರತಿವರ್ಷ ನಡೆಯುವ ಲಕ್ಷ ದೀಪೋತ್ಸವದಂದು ಅಪಾರ ಭಕ್ತರು ನೆರೆಯುತ್ತಾರೆ.