‘ಜೋಡೆತ್ತುಗಳೇ ನಿಂತುಕೊಳ್ಳಲಿ, ಎಲ್ರೂ ಬರಲಿ; ಮಹಿಳೆಯ ದನಿ ಅಡಗಿಸಲು ಯಾರಿಂದ್ಲೂ ಸಾಧ್ಯವಿಲ್ಲ’

ಬೆಳಗಾವಿ: ಆರ್.ಆರ್. ನಗರ ಮತ್ತು ಶಿರಾ ಕ್ಷೇತ್ರಗಳಲ್ಲಿ ವಾತಾವರಣ ಚೆನ್ನಾಗಿದೆ. ಕೊರೊನಾ ನಿರ್ವಹಣೆಯಲ್ಲಿ ಭ್ರಷ್ಟಾಚಾರ ಹಾಗೂ ದುರಾಡಳಿತಕ್ಕೆ ಜನ ತಕ್ಕ ಉತ್ತರ ಕೊಡ್ತಾರೆ ಎಂದು ನಗರದಲ್ಲಿ ಕಾಂಗ್ರೆಸ್​ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷದವರು ಯಾವ ಅಭ್ಯರ್ಥಿಯನ್ನು ನಿರ್ಲಕ್ಷ್ಯ ಮಾಡಲ್ಲ. ಆರ್‌‌.ಆರ್. ನಗರದಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ ಪರ ನಟರಾದ ಯಶ್ ಮತ್ತು ದರ್ಶನ್ ಪ್ರಚಾರ ಮಾಡಲು ಬರುತ್ತಾರೆ ಎಂಬ ವಿಚಾರವಾಗಿ ಪ್ರತಿಕ್ರಿಯಿಸಿರುವ ಲಕ್ಷ್ಮೀ ಹೆಬ್ಬಾಳ್ಕರ್ ಜೋಡೆತ್ತುಗಳು ನಿಂತುಕೊಳ್ಳಲಿ, ಎಲ್ಲರೂ ಬರಲಿ. ನಮಗೆ ಅಭ್ಯರ್ಥಿ ಗೆಲ್ಲಬೇಕು. ಜನರಿಗೆ ತಿಳುವಳಿಕೆ ನೀಡುವಂಥ ಕಾರ್ಯಕ್ರಮ ನಮ್ಮ ನಾಯಕರು ಮಾಡ್ತಾರೆ ಎಂದು ಹೇಳಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ವಿರುದ್ಧ ಕೇಸ್ ದಾಖಲಾಗಿರುವ ವಿಚಾರವಾಗಿ ಮಹಿಳೆಯ ಧ್ವನಿ ಅಡಗಿಸಲು ಯಾರಿಂದಲೂ ಸಾಧ್ಯವಿಲ್ಲ. ಅಭ್ಯರ್ಥಿ ಓರ್ವ ಮಹಿಳೆ ಇದ್ದಾರೆಂದು ಕೇಸ್ ಹಾಕಿದ್ದಾರೆ. ಅವರು ಸೋಲುತ್ತಾರೆ ಅನ್ನೋ ಭಯ ಶುರುವಾಗಿದೆ. ಹಾಗಾಗಿ, ಕೇಸ್ ದಾಖಲಿಸಿ ಬೆದರಿಸುವ ತಂತ್ರ ಮಾಡುತ್ತಿದ್ದಾರೆ ಎಂದು ಬಿಜೆಪಿ ಸರ್ಕಾರದ ವಿರುದ್ಧ ಲಕ್ಷ್ಮೀ ಹೆಬ್ಬಾಳ್ಕರ್ ವಾಗ್ದಾಳಿ ನಡೆಸಿದ್ದಾರೆ.

‘ಶಾಸಕರ ಅನುದಾನ ಕೊಡುತ್ತಿಲ್ಲ’
ಕಾಂಗ್ರೆಸ್, JDS ಶಾಸಕರ ಕ್ಷೇತ್ರಗಳಿಗೆ ಅನುದಾನ ಕಡಿತವಾಗಿರುವ ಬಗ್ಗೆ ಶಾಸಕರ ಅನುದಾನ ಕೊಡುತ್ತಿಲ್ಲ, ನಮಗೆ ಕಷ್ಟ ಆಗುತ್ತಿದೆ. ಕ್ಷೇತ್ರದಲ್ಲಿ ಜನರ ಎದುರು ಹೋಗುವುದ್ದಕ್ಕೆ ಕಷ್ಟ ಆಗ್ತಿದೆ. ಬಿಜೆಪಿ ಸರ್ಕಾರ ರಾಜಕೀಯ ಮಾಡುತ್ತಿದೆ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಆರೋಪಿಸಿದ್ದಾರೆ. ಕ್ಷೇತ್ರದಲ್ಲಿ ಹಲವಾರು ಕಾಮಗಾರಿಗಳು ಕುಂಠಿತವಾಗಿವೆ. ನಾನು ಕೇಳಿದ್ದಕ್ಕೆ ಸಿಎಂ, ಕೆಲ ಸಚಿವರಿಂದ ಸಹಾಯ ಸಿಗುತ್ತಿದೆ. ಆದರೆ, ಕೆಲವರು ಅಡ್ಡಗಾಲು ಹಾಕುತ್ತಿದ್ದಾರೆ, ಇದು ರಾಜಕಾರಣ. ಇದನ್ನೆಲ್ಲಾ ಸಹಿಸಿಕೊಂಡು ಮುಂದೆ ಹೋಗಬೇಕು ಎಂದು ಪರೋಕ್ಷವಾಗಿ ರಮೇಶ್‌ ಜಾರಕಿಹೊಳಿ‌ ವಿರುದ್ಧ ಆಕ್ರೋಶ ಹೊರಹಾಕಿದರು.

Related Tags:

Related Posts :

Category:

error: Content is protected !!