ಭೂ ವಿವಾದ: ನಾದಿನಿ ಮುಖಕ್ಕೆ ಆ್ಯಸಿಡ್ ಎರಚಿದ ಕಿಡಿಗೇಡಿ

ಮಂಗಳೂರು: ಭೂವಿವಾದ ಹಿನ್ನೆಲೆಯಲ್ಲಿ ನಾದಿನಿ ಮೇಲೆ ಭಾವನೇ ಆ್ಯಸಿಡ್ ದಾಳಿ ಮಾಡಿರುವ ಘಟನೆ ಕಡಬ ತಾಲೂಕಿನ ಕೋಡಿಂಬಾಳ ಗ್ರಾಮದಲ್ಲಿ ನಡೆದಿದೆ. ಜಯಾನಂದ ತಮ್ಮನ ಪತ್ನಿ ವಿಧವೆಯಾಗಿರುವ ಸ್ವಪ್ನಾ(35) ಌಸಿಡ್ ದಾಳಿಗೊಳಗಾದ ಸಂತ್ರಸ್ತೆ.

ಆಸ್ತಿ ವಿವಾದ ಹಿನ್ನೆಲೆಯಲ್ಲಿ ಎಲ್‍ಐಸಿ ಏಜೆಂಟ್ ಆಗಿರುವ ಆರೋಪಿ ಜಯಾನಂದ ಕೊಠಾರಿ(55), ಸ್ವಪ್ನಾ ಮುಖಕ್ಕೆ ರಬ್ಬರ್ ಶೀಟ್ ಮಾಡಲು ಬಳಸುವ ಆ್ಯಸಿಡ್ ಎರಚಿದ್ದಾನೆ. ಈ ವೇಳೆ ಪಕ್ಕದಲ್ಲಿದ್ದ ಸಂತ್ರಸ್ತೆ ಮಗಳಿಗೂ ಆ್ಯಸಿಡ್ ತಾಗಿದೆ. ತಾಯಿ ಹಾಗು ಮಗುವಿಗೆ ಪುತ್ತೂರು ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.

ಸ್ವಪ್ನಾ ಪತಿ ರವಿ ಮೃತಪಟ್ಟ ಬಳಿಕ ಪ್ರತ್ಯೇಕವಾಗಿ ತನ್ನ ಮೂವರು ಹೆಣ್ಣು ಮಕ್ಕಳೊಂದಿಗೆ ಸ್ವಪ್ನಾ ವಾಸವಿದ್ದರು. ಆರೋಪಿ ಜಯಾನಂದ ಮತ್ತು ಸ್ವಪ್ನಾ ಅವರ ನಡುವೆ ಹಣಕಾಸಿನ ವಿಚಾರದಲ್ಲಿ ಮನಸ್ತಾಪವಿತ್ತು. ಭೂ ವಿವಾದಕ್ಕೆ ತಿರುಗಿ ಇವರ ಮಧ್ಯೆ ಆಗಾಗ ಜಗಳ ನಡೆಯುತ್ತಿತ್ತು. ಘಟನೆ ಸಂಬಂಧ ಆರೋಪಿ ಜಯಾನಂದನನ್ನು ಕಡಬ ಪೊಲೀಸರು ವಶಕ್ಕೆ ಪಡೆದಿದ್ದಾರೆ.

Related Posts :

Leave a Reply

Your email address will not be published. Required fields are marked *

ತಾಜಾ ಸುದ್ದಿ

error: Content is protected !!