ಒಂದು ವರ್ಷ ಪೂರೈಸಿದ BSY ಸರ್ಕಾರದಿಂದ 24 ಶಾಸಕರಿಗೆ ಭರ್ಜರಿ ಗಿಫ್ಟ್​!

  • Updated On - 10:18 pm, Mon, 27 July 20 Edited By: Anju
ಒಂದು ವರ್ಷ ಪೂರೈಸಿದ BSY ಸರ್ಕಾರದಿಂದ 24 ಶಾಸಕರಿಗೆ ಭರ್ಜರಿ ಗಿಫ್ಟ್​!

ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಪಕ್ಷದ 24 ಶಾಸಕರಿಗೆ ಭರ್ಜರಿ ಗಿಫ್ಟ್​ ನೀಡಿದೆ. ಹೌದು, ಪಕ್ಷಕ್ಕಾಗಿ ದುಡಿದ ಶಾಸಕರಿಗೆ ನಿಗಮ ಮತ್ತು ಮಂಡಳಿ ಅಧ್ಯಕ್ಷ ಸ್ಥಾನ ಘೋಷಿಸಿದೆ.

ಯಾವ ಶಾಸಕರಿಗೆ ಯಾವ ಮಂಡಳಿ, ನಿಗಮ?
ಇನ್ನು ಯಾವ ಶಾಸಕರಿಗೆ ಯಾವ ಮಂಡಳಿ ಮತ್ತು ನಿಗಮದ ಅಧ್ಯಕ್ಷ ಸ್ಥಾನ ದೊರೆತಿದೆ ಎಂದು ನೋಡೋದಾದ್ರೆ,
1. ಆರಗ ಜ್ಞಾನೇಂದ್ರ -ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ
2. ಎಂ. ಚಂದ್ರಪ್ಪ -KSRTC ಅಧ್ಯಕ್ಷ
3. ರಾಜು ಗೌಡ -ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷ
4. ಎಂ.ಪಿ. ಕುಮಾರಸ್ವಾಮಿ -ಎಂಸಿಎ ಅಧ್ಯಕ್ಷ
5. ಎ.ಎಸ್. ಪಾಟೀಲ್ ನಡಹಳ್ಳಿ -ಆಹಾರ ನಿಗಮ ಅಧ್ಯಕ್ಷ
6. ಹರತಾಳು ಹಾಲಪ್ಪ -MSIL ಅಧ್ಯಕ್ಷ
7. ಮಾಡಾಳು ವಿರೂಪಾಕ್ಷಪ್ಪ -KSDL ಅಧ್ಯಕ್ಷ
8. ಜಿ.ಎಚ್. ತಿಪ್ಪಾರೆಡ್ಡಿ -ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ಆಧ್ಯಕ್ಷ
9. ಕೆ. ಶಿವನಗೌಡ ನಾಯಕ್ -KRDCL ಅಧ್ಯಕ್ಷ
10. ಕಳಕಪ್ಪ ಬಂಡಿ -KSIDC ಅಧ್ಯಕ್ಷ
11. ಪರಣ್ಣ ಮುನವಳ್ಳಿ -ರಾಜ್ಯ ಹಣಕಾಸು ಸಂಸ್ಥೆ ಅಧ್ಯಕ್ಷ
12. ಸಿದ್ದು ಸವದಿ -ಕೈಮಗ್ಗ ಅಭಿವೃದ್ಧಿ ನಿಗಮ ಅಧ್ಯಕ್ಷ
13. ಪ್ರೀತಮ್ ಗೌಡ -ಜಂಗಲ್ ಲಾಡ್ಜ್ಸ್ ಮತ್ತು ರೆಸಾರ್ಟ್ ಲಿಮಿಟೆಡ್ ಅಧ್ಯಕ್ಷ
14. ರಾಜ್​ಕುಮಾರ್ ಪಾಟೀಲ್ -ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ
15. ದತ್ತಾತ್ರೇಯ ಪಾಟೀಲ್ -ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ
16. ಶಂಕರ ಪಾಟೀಲ್ ಮುನೇನಕೊಪ್ಪ-KUIDFC ಅಧ್ಯಕ್ಷ
17. ಬಿ.ಸಿ.ನಾಗೇಶ -ತೆಂಗಿನ ನಾರಿನ ಅಭಿವೃದ್ಧಿ ನಿಗಮ ಅಧ್ಯಕ್ಷ
18. S.V.ರಾಮಚಂದ್ರ-ವಾಲ್ಮೀಕಿ ಪರಿಶಿಷ್ಟ ಪಂಗಡ ಅಭಿವೃದ್ಧಿ ನಿಗಮ ಅಧ್ಯಕ್ಷ
19. ನೆಹರು ಓಲೇಕಾರ್​-LIDKAR ಅಧ್ಯಕ್ಷ
20. ದುರ್ಯೋಧನ ಐಹೊಳೆ -ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ
21. ಲಾಲಾಜಿ ಮೆಂಡನ್ -ಹಿಂದುಳಿದ ವರ್ಗಗಳ ಆಯೋಗ ಅಧ್ಯಕ್ಷ
22. ಬಸವರಾಜ ದಡೇಸೂಗೂರು -ಸಮಾಜ ಕಲ್ಯಾಣ ಮಂಡಳಿ ಅಧ್ಯಕ್ಷ
23. ಡಾ.ಶಿವರಾಜ್ ಪಾಟೀಲ್ -ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ಅಧ್ಯಕ್ಷ
24. ಸಿ.ಎಸ್.ನಿರಂಜನ ಕುಮಾರ್ -ಅರಣ್ಯ ಕೈಗಾರಿಕಾ ನಿಗಮ ಅಧ್ಯಕ್ಷ