ಲಸಿಕೆ ಹಾಕಿಸಿ ಮನೆಗೆ ತೆರಳುತ್ತಿದ್ದ ವೇಳೆ 3 ತಿಂಗಳ ಮಗು ಸಾವು..

ಚಿಕ್ಕಬಳ್ಳಾಪುರ: ವೈದ್ಯರ ನಿರ್ಲಕ್ಷ್ಯಕ್ಕೆ 3 ತಿಂಗಳ ಮಗು ಮೃತಪಟ್ಟಿದೆ ಎಂಬ ಆರೋಪ ಕೇಳಿ ಬಂದಿದೆ. ನಂದಿ ಸರ್ಕಾರಿ ಪ್ರಾಥಮಿಕ ಆಸ್ಪತ್ರೆ ವೈದ್ಯರು ಲಸಿಕೆ ಹಾಕಿದ ಬಳಿಕ 3 ತಿಂಗಳ ಮಗು ಮೃತಪಟ್ಟಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಪ್ರಮೋದ್ ಹಾಗೂ ಅಪರ್ಣಾ ದಂಪತಿಯ ಗಂಡು ಮಗುವಿಗೆ ಪೇಂಟಾ ರೋಟಾ ಹಾಗೂ ಪೋಲಿಯೊ ವ್ಯಾಕ್ಸಿನ್ ಹಾಕಲಾಗಿತ್ತು. ಆಸ್ಪತ್ರೆಯಲ್ಲಿ ಲಸಿಕೆ ಹಾಕಿಸಿಕೊಂಡು ಮನೆಗೆ ವಾಪಸ್ ಹೋಗುವ ವೇಳೆ ಮಾರ್ಗಮಧ್ಯೆ ಗಂಡು ಮಗು ಮೃತಪಟ್ಟಿದೆ. ಆಸ್ಪತ್ರೆ ವೈದ್ಯರು, ನರ್ಸ್‌ಗಳ ವಿರುದ್ಧ ಪೋಷಕರು ಆಕ್ರೋಶ […]

ಲಸಿಕೆ ಹಾಕಿಸಿ ಮನೆಗೆ ತೆರಳುತ್ತಿದ್ದ ವೇಳೆ 3 ತಿಂಗಳ ಮಗು ಸಾವು..
Ayesha Banu

|

Sep 25, 2020 | 8:06 AM

ಚಿಕ್ಕಬಳ್ಳಾಪುರ: ವೈದ್ಯರ ನಿರ್ಲಕ್ಷ್ಯಕ್ಕೆ 3 ತಿಂಗಳ ಮಗು ಮೃತಪಟ್ಟಿದೆ ಎಂಬ ಆರೋಪ ಕೇಳಿ ಬಂದಿದೆ. ನಂದಿ ಸರ್ಕಾರಿ ಪ್ರಾಥಮಿಕ ಆಸ್ಪತ್ರೆ ವೈದ್ಯರು ಲಸಿಕೆ ಹಾಕಿದ ಬಳಿಕ 3 ತಿಂಗಳ ಮಗು ಮೃತಪಟ್ಟಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಪ್ರಮೋದ್ ಹಾಗೂ ಅಪರ್ಣಾ ದಂಪತಿಯ ಗಂಡು ಮಗುವಿಗೆ ಪೇಂಟಾ ರೋಟಾ ಹಾಗೂ ಪೋಲಿಯೊ ವ್ಯಾಕ್ಸಿನ್ ಹಾಕಲಾಗಿತ್ತು. ಆಸ್ಪತ್ರೆಯಲ್ಲಿ ಲಸಿಕೆ ಹಾಕಿಸಿಕೊಂಡು ಮನೆಗೆ ವಾಪಸ್ ಹೋಗುವ ವೇಳೆ ಮಾರ್ಗಮಧ್ಯೆ ಗಂಡು ಮಗು ಮೃತಪಟ್ಟಿದೆ. ಆಸ್ಪತ್ರೆ ವೈದ್ಯರು, ನರ್ಸ್‌ಗಳ ವಿರುದ್ಧ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪುಟ್ಟ ಕಂದಮ್ಮನಿಗಾಗಿ ಗೋಳಾಡುತ್ತಿದ್ದಾರೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada