ಹಿಂದೊಮ್ಮೆ ಅತಿಥಿಯಾಗಿದ್ದೆ, ಅವಕಾಶ ಸಿಕ್ಕರೆ ಇನ್ನೊಮ್ಮೆ ಹೋಗ್ತೀನಿ: ಪೊಲೀಸ್ ಠಾಣೆ ರಿವ್ಯೂ ಬರೆದ ಭೂಪ!

ಗೂಗಲ್ ಮ್ಯಾಪ್​ನಲ್ಲಿ ಪೊಲೀಸ್ ಠಾಣೆಯ ರಿವ್ಯೂ ಬರೆದಿರುವ ಭೂಪನೋರ್ವ ತಾನು ಹಿಂದೊಮ್ಮೆಅತಿಥಿಯಾಗಿದ್ದನ್ನೂ ನೆನಪಿಸಿಕೊಂಡಿದ್ದಾನೆ. ಅವಕಾಶ ಸಿಕ್ಕರೆ ಇನ್ನೊಮ್ಮೆ ಪೊಲೀಸ್ ಠಾಣೆಯಲ್ಲಿ ಉಳಿಯುವ ಇಚ್ಛೆ ವ್ಯಕ್ತಪಡಿಸಿದ್ದಾನೆ.

ಹಿಂದೊಮ್ಮೆ ಅತಿಥಿಯಾಗಿದ್ದೆ, ಅವಕಾಶ ಸಿಕ್ಕರೆ ಇನ್ನೊಮ್ಮೆ ಹೋಗ್ತೀನಿ: ಪೊಲೀಸ್ ಠಾಣೆ ರಿವ್ಯೂ ಬರೆದ ಭೂಪ!
guruganesh bhat

| Edited By: Ghanashyam D M | ಡಿ.ಎಂ.ಘನಶ್ಯಾಮ

Dec 13, 2020 | 9:33 PM

ಮುಂಬೈ: ತಾವು ಪ್ರವಾಸ ಹೋದ, ತಿಂದು ತೇಗಿದ ಎಲ್ಲವನ್ನೂ ಜಗತ್ತಿಗೆ ಸಾರಿ ಹೇಳುವ ಪ್ರವೃತ್ತಿ ಜನರಲ್ಲಿ ಹೆಚ್ಚುತ್ತಲೇ ಇದೆ. ಇದಕ್ಕಾಗಿಯೇ ನೀವು ಭೇಟಿ ನೀಡಿದ ಸ್ಥಳ ಹಾಗೂ ಹೋಟೆಲ್​ಗೆ ರಿವ್ಯೂ ಕೊಡುವ ಆಯ್ಕೆಯನ್ನು ಗೂಗಲ್​ ಮ್ಯಾಪ್​ ಪರಿಚಯಿಸಿದೆ. ಆದರೆ, ಇಲ್ಲೋರ್ವ ಗೂಗಲ್ ಮ್ಯಾಪ್​ನಲ್ಲಿ ಪೊಲೀಸ್ ಠಾಣೆಯ ರಿವ್ಯೂ ಬರೆದಿದ್ದಾನೆ. ತಾನು ಹಿಂದೊಮ್ಮೆ ಅತಿಥಿಯಾಗಿದ್ದನ್ನೂ ನೆನಪಿಸಿಕೊಂಡಿದ್ದಾನೆ!

ಹೌದು, ವ್ಯಕ್ತಿಯೋರ್ವ ಮಹಾರಾಷ್ಟ್ರದ ಠಾಣೆ ಜಿಲ್ಲೆಯ ನಯಾ ನಗರ್ ಪೊಲೀಸ್ ಠಾಣೆಗೆ ತೆರಳಿದ್ದನಂತೆ. ಪೊಲೀಸ್​ ಠಾಣೆಯಲ್ಲೇ ಕೆಲ ದಿನ ಇದ್ದು ಬಂದಿದ್ದಾನೆ ಎನ್ನಲಾಗಿದೆ. ಲಾಕಪ್​ನಿಂದ ಹೊರ ಬಂದರೂ ಅದರ ಮೇಲಿರುವ ಪ್ರೀತಿ ಮಾತ್ರ ಕಡಿಮೆ ಆದಂತೆ ಕಾಣುವುದಿಲ್ಲ!

ಈ ಮಹಾಶಯ ಪೊಲೀಸ್ ಠಾಣೆಯ ಗೂಗಲ್ ಲೊಕೇಶನ್​ನಲ್ಲಿ ಪೊಲೀಸ್ ಠಾಣೆಯ ರಿವ್ಯೂ ಬರೆದಿದ್ದಾನೆ. ತಾನು ಹಿಂದೆ ಅಲ್ಲಿ ಅತಿಥಿಯಾಗಿದ್ದಾಗಿ ಹೇಳಿರುವ ಈತ, ಅಲ್ಲಿ ಉತ್ತಮ ಸೌಲಭ್ಯಗಳಿರುವುದಾವಾಗಿಯೂ ಹೇಳಿದ್ದಾನೆ. ಅವಕಾಶ ಸಿಕ್ಕರೆ ಇನ್ನೊಮ್ಮೆ ನಯಾ ನಗರ್ ಪೊಲೀಸ್ ಠಾಣೆಯಲ್ಲಿ ಉಳಿಯುವ ಇಚ್ಛೆಯನ್ನೂ ವ್ಯಕ್ತಪಡಿಸಿದ್ದಾನೆ! ರಾಯಗಢದ ಎಸ್​ಪಿ ಆಗಿರುವ ಸಂತೋಶ್ ಸಿಂಗ್​ ಮಾಡಿರುವ ಈ ಟ್ವೀಟ್ ಈಗ ವೈರಲ್ ಆಗಿದೆ. ಆದರೆ ಆತ ಬರೆದದ್ದರ ಸತ್ಯಾಸತ್ಯತೆಯ ಕುರಿತು ಈವರೆಗೂ ಸ್ಪಷ್ಟ ಮಾಹಿತಿ ತಿಳಿದುಬಂದಿಲ್ಲ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada