ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡಿಸಲು.. ಎಲ್ಲಿಯವರೆಗೆ ಅವಕಾಶ?

ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡಿಸಲು.. ಎಲ್ಲಿಯವರೆಗೆ ಅವಕಾಶ?
ಸಾಂದರ್ಭಿಕ ಚಿತ್ರ

ಡಿಸೆಂಬರ್ ಅಂತ್ಯದ ಒಳಗೆ ಪ್ರತಿಯೊಬ್ಬರೂ ತಮ್ಮ ಬ್ಯಾಂಕ್ ಖಾತೆಗಳಿಗೆ ಆಧಾರ್ ಲಿಂಕ್ ಮಾಡಿಸಿಕೊಳ್ಳಬೇಕು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ. ಭಾರತೀಯ ಬ್ಯಾಂಕುಗಳ ಸಂಘದ 73ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು 2021 ರ ಮಾರ್ಚ್ ಒಳಗಾಗಿ ಎಲ್ಲಾ ಖಾತೆಗಳು ಆಧಾರ್ ನೊಂದಿಗೆ ಲಿಂಕ್ ಹೊಂದಿದೆಯೆ ಎಂದು ಖಾತ್ರಿಪಡಿಸಿಕೊಳ್ಳಲು ಬ್ಯಾಂಕ್ ಗಳಿಗೆ ತಿಳಿಸಿದರು.

ಬ್ಯಾಂಕ್ ಖಾತೆಗಳಿಗೆ ಆಧಾರ್ ಲಿಂಕ್ ಹೊಂದದ ಖಾತೆದಾದರು ದೇಶದಲ್ಲಿ ಹಲವರು ಇದ್ದಾರೆ. ಆದರೆ ಅಂಕಿ-ಅಂಶಗಳು ತಿಳಿದಿಲ್ಲ. ಆಧಾರ್ ಲಿಂಕ್ ಮಾಡಿಸಲು ಈ ಡಿಸೆಂಬರ್ ವರೆಗೆ ಅವಕಾಶವಿದೆ. ಬರುವ ಮಾರ್ಚ್ 31ರ ಒಳಗೆ ಬ್ಯಾಂಕ್ ಖಾತೆಗೆ ಅಗತ್ಯವಿರುವ ಪಾನ್ (permanant account number) ಕಾರ್ಡ್ ಕೂಡ ಹೊಂದಿರಬೇಕು ಎಂದು ಒತ್ತಿ ಹೇಳಿದರು.

ಡಿಜಿಟಲ್ ಪೇಮೆಂಟ್ ಮತ್ತು ರುಪೇ:
ಬ್ಯಾಂಕ್ ಗಳು ಡಿಜಿಟಲ್ ಪಾವತಿಗಳಿಗೆ ಹೆಚ್ಚು ಪ್ರೋತ್ಸಾಹ ನೀಡುವುದು ಸೂಕ್ತ. ಅದಕ್ಕೆ ಸಂಬಂಧಿತ ಕೆಲಸಗಳ ಬಗ್ಗೆ ಗಮನ ಹರಿಸಿ. ರುಪೇಗಳು ಜಾಗತಿಕವಾಗುತ್ತಿರುವಾಗ ಭಾರತದಲ್ಲಿ ಅನಿವಾರ್ಯವೆಂದು ಯೋಚಿಸುವುದಿಲ್ಲ. ಇದು ಅಭಿವೃದ್ದಿಯ ಹಿನ್ನಡೆಗೆ ಕಾರಣವಾಗುವುದು. ಬ್ಯಾಂಕ್ ಮುಖ್ಯಸ್ಥರರು ನಿಮ್ಮ ಸಾಮರ್ಥ್ಯದಲ್ಲಾಗುವ ಕಾರ್ಯಗಳು ಯಶಸ್ವಿಯಾಗುತ್ತದೆಯೆಂಬ ನಂಬಿಕೆಯಿದೆ ಮತ್ತು ಆ ಯಶಸ್ವಿಯನ್ನು ನೋಡಲು ನಾನು ಉತ್ಸಾಹಿಯಾಗಿದ್ದೇನೆ ಎಂದು ನುಡಿದರು.