ಇಂಜಿನಿಯರ್ ಲಂಚದಾಹ: ACB ಮಿಂಚಿನ ಕಾರ್ಯಾಚರಣೆ, ಬಂಧನ.. ಯಾವೂರಲ್ಲಿ?

ಇಂಜಿನಿಯರ್ ಲಂಚದಾಹ: ACB ಮಿಂಚಿನ ಕಾರ್ಯಾಚರಣೆ, ಬಂಧನ.. ಯಾವೂರಲ್ಲಿ?

ಬಾಗಲಕೋಟೆ: ACB ಅಧಿಕಾರಿಗಳ ಮಿಂಚಿನ ಕಾರ್ಯಚರಣೆಯಿಂದಾಗಿ 30 ಸಾವಿರ ಲಂಚ ಪಡೆಯುತ್ತಿದ್ದ ಪಂಚಾಯತ್ ರಾಜ್ ಇಲಾಖೆಯ AEEಯನ್ನು ಬಂಧಿಸಿರುವ ಘಟನೆ ಬಾಗಲಕೋಟೆ ಜಿಲ್ಲೆ ಬಾದಾಮಿ ಪಟ್ಟಣದಲ್ಲಿ ನಡೆದಿದೆ.

ಕೆ ಡಿ ಕರಮಳ್ಳಿ ಲಂಚ ಪಡೆಯುತ್ತಿದ್ದ AEE ಆಗಿದ್ದು, MNREG ಕಾಮಗಾರಿಗೆ ಸಾಮಗ್ರಿ ಬಿಲ್ ಮಂಜೂರು ಮಾಡಲು 30 ಸಾವಿರ ಲಂಚದ ಬೇಡಿಕೆ ಇಟ್ಟಿದ್ದರು. ಒಟ್ಟು 14 ಲಕ್ಷ ಬಿಲ್ ಮಂಜೂರು ಮಾಡಲು ಗುತ್ತಿಗೆದಾರ ಬಸವರಾಜ ಪಾತ್ರೋಟಿ ಎಂಬುವರಿಂದ 30 ಸಾವಿರ ಲಂಚಕ್ಕೆ ಬೇಡಿಕೆ ಇಡಲಾಗಿತ್ತು.

ವಿಚಾರ ತಿಳಿದ ಕೂಡಲೇ ಎಚ್ಚೆತ್ತುಕೊಂಡು ACB DYSP ಗಣಪತಿ ಗುಡಾಜಿ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ಈ ದಾಳಿಯಲ್ಲಿ ಇನ್ಸ್ಪೆಕ್ಟರ್ ವಿಶ್ವನಾಥ ಚೌಗಲೆ,ಸಮೀರ ಮುಲ್ಲಾ ಅವರು ಬಾಗಿಯಾಗಿದ್ದು, ಮ್ಯಾನೇಜರ್ ಫಕ್ಕೀರಪ್ಪ ಅಟಗಾಳಿ ಎಂಬುವರನ್ನು ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.

Click on your DTH Provider to Add TV9 Kannada