ಮಂಡ್ಯದಲ್ಲಿ 3 ಅರ್ಚಕರ ಕಗ್ಗೊಲೆ ಪ್ರಕರಣ: ಪಾತಕಿಗಳು ಅವರೇನಾ?

ಮಂಡ್ಯದಲ್ಲಿ 3 ಅರ್ಚಕರ ಕಗ್ಗೊಲೆ ಪ್ರಕರಣ: ಪಾತಕಿಗಳು ಅವರೇನಾ?

ಮಂಡ್ಯ: ನಿನ್ನೆ ರಾತ್ರಿ ನಡೆದಿರುವ ತ್ರಿಬಲ್ ಮರ್ಡರ್ ಪ್ರಕರಣಕ್ಕೆ ಸಂಬಂಧಿಸಿ ನುರಿತ ಕಳ್ಳರಿಂದಲೇ ಕೃತ್ಯ ನಡೆದಿರುವ ಶಂಕೆ ವ್ಯಕ್ತವಾಗಿದೆ.  ಸುಮಾರು 5-10 ಮಂದಿ ಇರುವ ಚನ್ನಪಟ್ಟಣ ಮೂಲದ ಕಳ್ಳರ ತಂಡ ಈ ಕೃತ್ಯ ಎಸಗಿದೆ ಎಂದು ಹೇಳಲಾಗುತ್ತಿದೆ. ಈ ತಂಡ ಮಂಡ್ಯ ಜಿಲ್ಲೆಯಲ್ಲೇ ಈ ಹಿಂದೆಯೂ ಹಲವಾರು ಕೃತ್ಯಗಳಲ್ಲಿ ಭಾಗಿಯಾಗಿತ್ತು.

ತೊಪ್ಪನಹಳ್ಳಿಯಲ್ಲಿ ನಡೆದಿದ್ದ ಕೊಲೆ, ಶ್ರೀರಂಗಪಟ್ಟಣದ ಕರೀಘಟ್ಟ, ಮಂಡ್ಯದ ಹೊಳಲು ತಾಂಡವೇಶ್ವರ ದೇವಾಲಯ, ಕೊಮ್ಮೇರಹಳ್ಳಿಯ ಕಂಬದ ನರಸಿಂಹಸ್ವಾಮಿ ದೇವಾಲಯದಲ್ಲಿ ನಡೆದಿದ್ದ ಕಳವು ಪ್ರಕರಣ ಸೇರಿದಂತೆ ಕೆಲ ಪ್ರಕರಣದಲ್ಲಿ ಈ ತಂಡದ ಕೈವಾಡವಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಇಂದಿನ ಪ್ರಕರಣಕ್ಕೂ, ಈ ಹಿಂದಿನ ಪ್ರಕರಣಗಳಿಗೂ ಸಾಮ್ಯತೆ ಇರುವ ಹಿನ್ನೆಲೆಯಲ್ಲಿ ಈ ರೀತಿ ಯೋಚಿಸಲಾಗುತ್ತಿದೆ. ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ಇದನ್ನೂ ಓದಿ: ದೈವೀ ಸನ್ನಿಧಿಯಲ್ಲಿ ಪೈಶಾಚಿಕ ಕೃತ್ಯ: ಮೂವರ ಬರ್ಬರ ಕೊಲೆ, ಹುಂಡಿ ಕದ್ದೊಯ್ದ ದುಷ್ಕರ್ಮಿಗಳು

Click on your DTH Provider to Add TV9 Kannada