ಆರ್ಮುಗಂ ‘ರವಿಶಂಕರ್’​ಗೆ 54ನೇ ಹುಟ್ಟು ಹಬ್ಬದ ಸಂಭ್ರಮ

ಆರ್ಮುಗಂ ‘ರವಿಶಂಕರ್’​ಗೆ 54ನೇ ಹುಟ್ಟು ಹಬ್ಬದ ಸಂಭ್ರಮ
ಡೈಲಾಗ್​ನಿಂದಲೇ ಜನಪ್ರಿಯಗೊಂಡ ಆರುಮುಗಂ ರವಿಶಂಕರ್

ಖಳನಟರಾಗಿ, ಹಾಸ್ಯ ನಟರಾಗಿ ಹಾಗೂ ಹಾಡುಗಾರರಾಗಿ ಜನರ ಮನಸ್ಸು ಗೆದ್ದ ಆರುಮುಗಂ ರವಿಶಂಕರ್ 54ನೇ ವರ್ಷದ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ

shruti hegde

|

Nov 28, 2020 | 6:48 PM

‘ಇದು ಆರ್ಮುಗಂ ಕೋಟೇಕಣೋ’ ಎಂದು ಡೈಲಾಗ್ ಹೊಡೆದು ಜನಪ್ರಿಯತೆ ಗಳಿಸಿಕೊಂಡಿರುವ ರವಿಶಂಕ್​ಗೆ ಇಂದು ಹುಟ್ಟುಹಬ್ಬದ ಸಂಭ್ರಮ. ವಿವಿಧ ಪಾತ್ರಗಳಲ್ಲಿ ಗುರುತಿಸಿಕೊಂಡು ಜನಮನ ಗೆದ್ದಿದ್ದಾರೆ.

ಖಳನಟರಾಗಿ, ಹಾಸ್ಯ ನಟರಾಗಿ ಹಾಗೂ ಹಾಡುಗಾರರಾಗಿ ಜನರ ಮನಸ್ಸು ಗೆದ್ದ ಇವರು 54ನೇ ವರ್ಷದ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ. ಕನ್ನಡ ಚಿತ್ರದ ಜೊತೆಗೆ ತಮಿಳು, ತೆಲುಗು ಚಿತ್ರಗಳಲ್ಲಿಯೂ ಗುರುತಿಸಿಕೊಂಡ ರವಿಶಂಕರ್ ಡೈಲಾಗ್​ನೊಂದಿಗೆ ಜನಮನ ಗೆದ್ದಿದ್ದಾರೆ.

ನಟ ಮಾತ್ರವಲ್ಲದೇ ಬರಹಗಾರ, ಡಬ್ಬಿಂಗ್ ಕಲಾವಿದ ಹಾಗೂ ನಿರ್ದೇಶಕರೂ ಹೌದು. ಇವರಿಗೆ ಹುಟ್ಟುಹಬ್ಬದ ಶುಭಾಶಯಗಳು.

ರವಿಶಂಕರ್ ಟಾಪ್​ 5 ಡೈಲಾಗ್ಸ್:

1.ಇದು ನನ್ನೂರು ನನ್ನ ಏರಿಯಾ.. ಇದು ಆರ್ಮುಗಂ ಕೋಟೆ ಕಣೋ.. 2. ನಿಂಗೆ ಪ್ರಮೋಷನ್ ಕೊಟ್ಟಿದ್ದು ನಿಮ್​ ಡಿಪಾರ್ಟ್​ಮೆಂಟ್, ಆದರೆ ಮಾಗಡಿ ರೋಡಿಗೆ ಪೋಸ್ಟಿಂಗ್ ಹಾಕ್ಸಿದ್ದು ನಾನೂ.. 3. ಕೈ ಎತ್ತಿ ತಟ್ಟದ ಎಂದರೆ ರಿಯಲ್ ಎಸ್ಟೇಟ್ ಎಗರೋಗತ್ತೆ! 4. ಅಮ್ಮ ಬೊಮ್ಮಲಿ ಬಿನ್ ಪಂಡಯ್ಯಿ ಪರುವಾನಿ ಕೊಚ್ಚಿಂದಿ.. ವದಲ.. ಬೊಮ್ಮಲಿ ವದಲ.. 5. ಭಾಯ್ ಭಾಯ್.. ಇಂಡಿಯಾ ಕಂಟಕ ನಿಮ್ಮ ಫ್ಯಾಮಿಲಿಗೆ ಸೂತಕ..

Follow us on

Related Stories

Most Read Stories

Click on your DTH Provider to Add TV9 Kannada