ಬೆಂಗಳೂರು: ಚಂದನವನಕ್ಕೆ ಡ್ರಗ್ಸ್ ಜಾಲದ ನಂಟು ಆರೋಪದ ಕೇಸ್ ದಿನೇ ದಿನೇ ಹೊಸ ತಿರುವುಗಳನ್ನು ಪಡೆಯುತ್ತಿದೆ. ಈ ನಡುವೆ ಕೆಲ ನಟ-ನಟಿಯರು ಹಾಗೂ ನಿರೂಪಕರು ಸೇರಿದಂತೆ ಅನೇಕರ ವಿಚಾರಣೆ ನಡೆಸಲಾಗುತ್ತಿರುವುದು ಇಡೀ ಚಿತ್ರರಂಗದಲ್ಲಿ ಆತಂಕ ಮನೆಮಾಡಿದೆ. ಈ ಕುರಿತು ಟ್ವೀಟ್ ಮೂಲಕ ಅಭಿಪ್ರಾಯ ಹಂಚಿಕೊಂಡಿರುವ ನವರಸ ನಾಯಕ ಜಗ್ಗೇಶ್ ಈಗಿನ ತಲೆಮಾರು ನಮ್ಮ ಉದ್ಯಮವನ್ನು ಹರಾಜು ಹಾಕ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ನಮ್ಮದು ಗೋಲ್ಡನ್ ಡೇಸ್, ಈಗಿನದ್ದು ಡ್ರಗ್ಸ್ ಡೇಸ್ ಆಗಿದೆ. ಈಗಿನ ತಲೆಮಾರು ನಮ್ಮ ಉದ್ಯಮವನ್ನು ಹರಾಜು ಹಾಕ್ತಿದೆ. ಹೊಟ್ಟೆಗೆ ಆ್ಯಸಿಡ್ ಕುಡಿದಂತಾಗ್ತಿದೆ. ಇಂದಿನ ದಿನಗಳು ಕರ್ಮದ ದಿನಗಳು ಎಂದು ಡ್ರಗ್ಸ್ ಕೇಸ್ ಕುರಿತು ಟ್ವಿಟ್ಟರ್ನಲ್ಲಿ ಜಗ್ಗೇಶ್ ಆಕ್ರೋಶ ಹೊರಹಾಕಿದ್ದಾರೆ.
ನೀವು ನಮ್ಮದಿನಗಳ ಕಣ್ಣಾರೆ ಕಂಡವರು!ನನ್ನ ಬಫ್ ಫೀಯೇಟ್ ನಿಮಗೆ 24ಸಾವಿರಕ್ಕೆ ಮಾರಿ ನಾನು #maruthi800 ಕೊಂಡದ್ದು ನೆನಪಾಯಿತು!
ನಿಮ್ಮ ಕೈಬರವಣಿಗೆ ನೋಡಿ ಆನಂದಿಸಿದವರು ನಾವು!ಇಂದಿನ ಗ್ರೇಟ್ ನಶೆತಲೆಮಾರು ನಮ್ಮ ಉಧ್ಯಮ ಹರಾಜು ಹಾಕುವುದು ನೋಡಿ ಹೊಟ್ಟೆಗೆacidಕುಡಿದಂತೆ ಆಗಿದೆ ನಮ್ಮತಲೆಮಾರಿಗೆ!
ಕರ್ಮದ ದಿನಗಳು ಮೇಡಂ!ಧನ್ಯವಾದ ನಿಮ್ಮನೆನಪಿಗೆ. https://t.co/AIW8uDhbaP— ನವರಸನಾಯಕ ಜಗ್ಗೇಶ್ (@Jaggesh2) September 20, 2020