ಟಾರ್ಚ್ ಲೈಟ್ ಚಿಹ್ನೆ ಕಮಲ್​ ಹಾಸನ್​ ತೆಕ್ಕೆಗೆ: ವಿಡಿಯೋ ಮೂಲಕ ಸಂತಸ ಹಂಚಿಕೊಂಡ ನಟ

ಕೆಲವು ದಿನಗಳ ಹಿಂದೆ ಪಕ್ಷದ ಚಿಹ್ನೆ ಕುರಿತು ಕೊಂಚ ಹಿನ್ನಡೆ ಕಂಡಿದ್ದ ನಟ ಕಮಲ್​ ಹಾಸನ್​ಗೆ ಇಂದು ತುಸು ಸಂತಸ ಸಿಕ್ಕಿದೆ. ನಟರ ಮಕ್ಕಳ್ ನೀಧಿ ಮಯ್ಯಂ ಪಕ್ಷಕ್ಕೆ ಚುನಾವಣಾ ಅಯೋಗ ಟಾರ್ಚ್ ಲೈಟ್ ಚಿಹ್ನೆಯನ್ನು ಬಳಸುವ ಅನಮತಿ ನೀಡಿದೆ.

  • TV9 Web Team
  • Published On - 19:51 PM, 15 Jan 2021
ಟಾರ್ಚ್ ಲೈಟ್ ಚಿಹ್ನೆ ಕಮಲ್​ ಹಾಸನ್​ ತೆಕ್ಕೆಗೆ: ವಿಡಿಯೋ ಮೂಲಕ ಸಂತಸ ಹಂಚಿಕೊಂಡ ನಟ
ಕಮಲ್ ಹಾಸನ್​

ಚೆನ್ನೈ: ಕೆಲವು ದಿನಗಳ ಹಿಂದೆ ಪಕ್ಷದ ಚಿಹ್ನೆ ಕುರಿತು ಕೊಂಚ ಹಿನ್ನಡೆ ಕಂಡಿದ್ದ ನಟ ಕಮಲ್​ ಹಾಸನ್​ಗೆ ಇಂದು ತುಸು ಸಂತಸ ಸಿಕ್ಕಿದೆ. ನಟರ ಮಕ್ಕಳ್ ನೀಧಿ ಮಯ್ಯಂ ಪಕ್ಷಕ್ಕೆ ಚುನಾವಣಾ ಅಯೋಗ ಟಾರ್ಚ್ ಲೈಟ್ ಚಿಹ್ನೆಯನ್ನು ಬಳಸುವ ಅನಮತಿ ನೀಡಿದೆ.

ಹೀಗಾಗಿ, ಮುಂಬರುವ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಎಲ್ಲಾ 234 ಕ್ಷೇತ್ರಗಳಲ್ಲಿ ಪಕ್ಷವು ಟಾರ್ಚ್ ಲೈಟ್ ಚಿಹ್ನೆಯೊಂದಿಗೆ ಸ್ಪರ್ಧಿಸಬಹುದು ಎಂದು ಚುನಾವಣಾ ಆಯೋಗ ತಿಳಿಸಿದೆ ಎಂದು ಕಮಲ್​ ಹಾಸನ್​ ಹೇಳಿದ್ದಾರೆ.

ಅಂದ ಹಾಗೆ, ಕಮಲ್ ಹಾಸನ್ 2019ರ ಲೋಕಸಭಾ ಎಲೆಕ್ಷನ್​ನಲ್ಲಿ ಟಾರ್ಚ್ ಲೈಟ್ ಚಿಹ್ನೆಯೊಂದಿಗೆ ಚುನಾವಣೆ ಎದುರಿಸಿದ್ದರು. ಆದರೆ, ಮುಂಬರುವ ತಮಿಳುನಾಡು ವಿಧಾನಸಭೆ ಚುನಾವಣೆಗೆ ಟಾರ್ಚ್ ಲೈಟ್ ಚಿಹ್ನೆಯನ್ನು ಆಯೋಗ ಮತ್ತೊಂದು ಪಕ್ಷಕ್ಕೆ ನೀಡಿತ್ತು. ಹಾಗಾಗಿ, ಇದನ್ನ ಪ್ರಶ್ನಿಸಿ ಟಾರ್ಚ್ ಲೈಟ್ ಚಿಹ್ನೆಗಾಗಿ‌ ನಟ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಈಗ ಕಮಲ್ ಹಾಸನ್​ರ ಮಕ್ಕಳ್ ನೀಧಿ ಮಯ್ಯಂ ಪಕ್ಷಕ್ಕೆ ಟಾರ್ಚ್ ಲೈಟ್ ಚಿಹ್ನೆ ನೀಡಲಾಗಿದೆ. ಈ ಕುರಿತು ಖುದ್ದು ಕಮಲ್​ ಹಾಸನ್​ ತಮ್ಮ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

மக்கள் நீதி மய்யத்திற்கு மீண்டும் டார்ச் சின்னம் ஒதுக்கப்பட்டுள்ளது என்பதை மகிழ்ச்சியுடன் தெரிவித்துக்கொள்கிறோம்.

Posted by Maiam on Friday, January 15, 2021

 

ಗೃಹಿಣಿಯರಿಗೆ ಸಂಬಳ: ಕಮಲ್ ಹಾಸನ್, ಶಶಿ ತರೂರ್ ಯೋಚನೆಗೆ ಕಂಗನಾ ವಿರೋಧ