ಆಸ್ಪತ್ರೆಯಿಂದ ಕಮಲ್​ ಹಾಸನ್​ ಡಿಸ್ಚಾರ್ಜ್

ಕಾಲಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ನಟ ಕಮಲ್​ ಹಾಸನ್​ ಚೆನ್ನೈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಶಸ್ತ್ರ ಚಿಕಿತ್ಸೆ ಸಂಪೂರ್ಣಗೊಂಡಿದ್ದು, ಕಮಲ್​ ಹಾಸನ್​ ಡಿಸ್ಚಾರ್ಜ್​ ಆಗಿದ್ದಾರೆ.

  • TV9 Web Team
  • Published On - 14:58 PM, 22 Jan 2021
ಆಸ್ಪತ್ರೆಯಿಂದ ಕಮಲ್​ ಹಾಸನ್​ ಡಿಸ್ಚಾರ್ಜ್
ಕಮಲ್ ಹಾಸನ್

ಚೆನ್ನೈ: ಕಾಲಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ನಟ ಕಮಲ್​ ಹಾಸನ್​ ಚೆನ್ನೈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಸದ್ಯ ಈಗ ಶಸ್ತ್ರ ಚಿಕಿತ್ಸೆ ಸಂಪೂರ್ಣಗೊಂಡಿದ್ದು, ಕಮಲ್​ ಹಾಸನ್​ ಡಿಸ್ಚಾರ್ಜ್​ ಆಗಿದ್ದಾರೆ.

ಕಮಲ್​ ಹಾಸನ್​ ಶಸ್ತ್ರ ಚಿಕಿತ್ಸೆ ಮುಗಿದ ನಂತರ ಆಸ್ಪತ್ರೆಯಲ್ಲಿಯೇ ವಿಶ್ರಾಂತಿ ಪಡೆಯುತ್ತಿದ್ದರು. ಇಂದು ಡಿಸ್ಚಾರ್ಜ್​ ಆಗಿದ್ದು, ಮನೆಗೆ ತೆರಳಿದ ಬಳಿಕ ಕೆಲವು ದಿನಗಳ ಕಾಲ ವಿಶ್ರಾಂತಿ ಪಡೆದು ನಂತರ ಚುನಾವಣೆ ಪ್ರಚಾರದಲ್ಲಿ ಭಾಗಿಯಾಗಲಿದ್ದಾರೆ.

ನಟ ಕಮಲ್ ಹಾಸನ್ ಕಾಲಿನ ಶಸ್ತ್ರ ಚಿಕಿತ್ಸೆ ಯಶಸ್ವಿ