ನಾಳೆಯಿಂದ ದಿಗಂತ್ ಮಾರಿಗೋಲ್ಡ್ ಶೂಟಿಂಗ್‌ಗೆ ಹೋಗುತ್ತಾರೆ: ಐಂದ್ರಿತಾ

  • TV9 Web Team
  • Published On - 11:21 AM, 17 Sep 2020
ನಾಳೆಯಿಂದ ದಿಗಂತ್ ಮಾರಿಗೋಲ್ಡ್ ಶೂಟಿಂಗ್‌ಗೆ ಹೋಗುತ್ತಾರೆ: ಐಂದ್ರಿತಾ

[lazy-load-videos-and-sticky-control id=”FI_Yw4mdth0″]

ಬೆಂಗಳೂರು: ಸ್ಯಾಂಡಲ್‌ವುಡ್‌ಗೆ ಡ್ರಗ್ಸ್ ಜಾಲದ ನಂಟು ಪ್ರಕರಣಕ್ಕೆ ಸಂಬಂಧಿಸಿದಂತೆ CCB ಯಿಂದ ವಿಚಾರಣೆ ಎದುರಿಸುತ್ತಿರುವ ನಟಿ ಐಂದ್ರಿತಾ ಬೆಂಗಳೂರಿನ R.R.ನಗರದ ಮನೆ ಬಳಿ ಸುದ್ದಿಗಾರರೊದಿಗೆ ಮಾತನಾಡಿದ್ದಾರೆ.

ಸಿಸಿಬಿ ವಿಚಾರಣೆ ಪೂರ್ಣವಾಗದ ಹಿನ್ನೆಲೆ ಡ್ರಗ್ಸ್ ಪ್ರಕರಣ ಸಂಬಂಧ ನಾವು ಏನೂ ಮಾತಾಡುವಂತಿಲ್ಲ ಎಂದಿದ್ದಾರೆ. ಸಿಸಿಬಿ ಅಧಿಕಾರಿಗಳು ಮತ್ತೆ ವಿಚಾರಣೆಗೆ ಕರೆಯಬಹುದು, ಆದರೆ ಯಾವಾಗ ಕರೆಯುತ್ತಾರೆಂದು ಗೊತ್ತಿಲ್ಲ. ಯಾವಾಗ ವಿಚಾರಣೆಗೆ ಕರೆದರೂ ನಾವು ಹಾಜರಾಗುತ್ತೇವೆ. ವಿಚಾರಣೆೆಯ ಬಗ್ಗೆ ಈಗಲೇ ಏನೂ ಹೇಳುವುದಕ್ಕೆ ಆಗಲ್ಲ ಎಂದರು.

ಜೊತೆಗೆ ನಾಳೆಯಿಂದ ದಿಗಂತ್ ಸಿನಿಮಾ ಶೂಟಿಂಗ್‌ಗೆ ಹೋಗುತ್ತಾರೆ ಎಂದು ನಟಿ ಐಂದ್ರಿತಾ ಹೇಳಿದರು. ಅಲ್ಲದೆ ಇದೆ ಮಾತನ್ನು ದಿಗಂತ್ ತಾಯಿ ಮಲ್ಲಿಕಾ ಸಹ ಹೇಳಿದರು. ಸದ್ಯ ನಾಳೆ ವಿಚಾರಣೆಗೆ ಹಾಜರಾಗುವಂತೆ ಸಿಸಿಬಿಯಿಂದ ಯಾವುದೇ ನೋಟಿಸ್‌ ಬಂದಿಲ್ಲ. ಹಾಗಾಗಿ ದಿಗಂತ್ ಮತ್ತು ಐಂದ್ರಿತಾ ರಿಲ್ಯಾಕ್ಸ್ ಮೂಡ್​ನಲ್ಲಿದ್ದಾರೆ.

ಬುಧವಾರ ಸಿಸಿಬಿ ವಿಚಾರಣೆ, ಶುಕ್ರವಾರವೇ ಮಾರಿಗೋಲ್ಡ್ ಶೂಟಿಂಗ್..
ಸಿಸಿಬಿ ವಿಚಾರಣೆ ಬೆನ್ನಲ್ಲೇ ಶೂಟಿಂಗ್​ಗೆ ದಿಗಂತ್ ರೆಡಿಯಾಗುತ್ತಿದ್ದು, ಶುಭ ಶುಕ್ರವಾರದಿಂದ ಚಿತ್ರೀಕರಣದಲ್ಲಿ ದಿಗಂತ್ ಬ್ಯುಸಿಯಾಗಲ್ಲಿದ್ದಾರೆ. ಮಾರಿಗೋಲ್ಡ್ ಚಿತ್ರದ ಶೂಟಿಂಗ್​ಗೆ ದಿಗಂತ್ ತೆರಳಲಿದ್ದು, ವಿಚಾರಣೆ ಹಂತದಲ್ಲಿ ಬೆಂಗಳೂರು ತೊರೆಯುವಂತಿಲ್ಲ. ಹಾಗಾಗಿ ಬೆಂಗಳೂರಿನಲ್ಲಿ ಮಾರಿಗೋಲ್ಡ್ ಚಿತ್ರದ ಎರಡನೇ ಶೆಡ್ಯೂಲ್ ಶೂಟಿಂಗ್​ಗೆ ಪ್ಲಾನ್ ಮಾಡಲಾಗಿದೆ.

ರಾಘವೇಂದ್ರ ನಾಯಕ್ ಆಕ್ಷನ್ ಕಟ್ ಹೇಳುತ್ತಿರುವ ಮಾರಿಗೋಲ್ಡ್ ಸಿನಿಮಾಕ್ಕೆ ಯಾವುದೇ ಕಾರಣಕ್ಕೂ ತೊಂದರೆಯಾಗಲು ಬಿಡುವುದಿಲ್ಲವೆಂದು ದಿಗಂತ್ ಹೇಳಿದ್ದಾರೆ. ಜೊತೆಗೆ ಗಾಳಿಪಟ.2 ಸಿನಿಮಾಗಳಲ್ಲಿ ಬ್ಯೂಸೊಯಾಗಲಿರುವ ದಿಗಂತ್, ಸಿಸಿಬಿ ವಿಚಾರಣೆ ಜೊತೆಜೊತೆಗೆ ಸಿನಿಮಾ ಕೆಲಸಗಳಲ್ಲೂ ಬ್ಯುಸಿಯಾಗಲಿದ್ದಾರೆ. ಇನ್ನೂ ಕೆಲವು ಸಿನಿಮಾಗಳಿಗೆ ದಿಗಂತ್​ ಡೇಟ್ಸ್ ನೀಡಿದ್ದಾರೆ.